ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಜೋಡಿ

ತಮಿಳು ಚಲನಚಿತ್ರ ನಟ ವಿಷ್ಣು ವಿಶಾಲ್ ಮತ್ತು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಗುರುವಾರ ವೈವಾಹಿಕ ಬದುಕಿಗೆ ಪ್ರವೇಶಿಸಿದ್ದಾರೆ. ಜ್ವಾಲಾ ಮತ್ತು ವಿಷ್ಣು ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ ಹೈದರಾಬಾದ್‌ನಲ್ಲಿ ನಡೆದ ಮದುವೆಗೆ ಕೇವಲ 20 ಜನರು ಮಾತ್ರ ಪಾಲ್ಗೊಂಡಿದ್ದರು. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮದುವೆ ಕುರಿತು ಇ-ಟೈಮ್ಸ್ ಜೊತೆ ಮಾತನಾಡಿರುವ ವಿಷ್ಣು ವಿಶಾಲ್ ''ನಮ್ಮದು ರಿಜಿಸ್ಟ್ರಾರ್ ಮದುವೆ. ಕೆಲವೇ ಕೆಲವು ಸಂಬಂಧಿಕರು ಮತ್ತು ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಮದುವೆಗೂ ಮುಂಚೆ ಕೆಲವು ಶಾಸ್ತ್ರಗಳನ್ನು ಸಹ ಆಯೋಜಿಸಿದ್ದೇವು. ಕೊರೊನಾ ಹಿನ್ನೆಲೆ ಅದ್ಧೂರಿಯಾಗಿ ಮದುವೆಯಾಗಲಿಲ್ಲ. ನಮಗೂ ಜವಾಬ್ದಾರಿ ಇದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

Actor Vishnu Vishal ties the knot with Badminton Player Gutta jwala

ವಿವಾಹಕ್ಕೂ ಮುಂಚೆ ಹಳದಿ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ಹಾಗೂ ಮೆಹಂದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂಭ್ರಮದ ಫೋಟೋಗಳ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇಬ್ಬರಿಗೂ ಎರಡನೇ ಮದುವೆ

ನಟ ವಿಷ್ಣು ವಿಶಾಲ್‌ಗೆ ಈಗಾಗಲೇ ಮದುವೆ ಆಗಿದೆ. 2010ರಲ್ಲಿ ರಜನಿ ಜೊತೆ ಸಪ್ತಪದಿ ತುಳಿದಿದ್ದ ನಟ, 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಬ್ಬರಿಗೆ ಆರ್ಯನ್ ಎಂಬ ಮಗ ಸಹ ಇದ್ದನು.

Actor Vishnu Vishal ties the knot with Badminton Player Gutta jwala

ಜ್ವಾಲಾ ಗುಟ್ಟಾಗೂ ಇದು ಎರಡನೇ ಮದುವೆ. 2005ರಲ್ಲಿ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಜೊತೆ ವಿವಾಹವಾಗಿದ್ದರು. ಆದರೆ, 2010ರಲ್ಲಿ ಡಿವೋರ್ಸ್ ಪಡೆದುಕೊಂಡರು. ಈಗ ವಿಷ್ಣು ಜೊತೆ ಮತ್ತೊಮ್ಮೆ ದಾಂಪತ್ಯ ಜೀವನ ಆರಂಭಿಸಲು ಮುಂದಾಗಿದ್ದಾರೆ.

Recommended Video

ಕೊರೊನಾ ಬಗ್ಗೆ ಹೆದರಿಸುವ ಬದಲು ಎದುರಿಸುವುದು ಹೇಗೆ ಅಂತಾ ತಿಳಿಸಿ | Filmibeat Kannada

More from Filmibeat

English summary
Actor Vishnu Vishal ties the knot with Badminton Player jwala Gutta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X