ಹಾಸಿಗೆ ಹಂಚಿಕೊಂಡರೆ ನಾಯಕಿಯರಿಗೆ ಹೆಚ್ಚು ಸಂಭಾವನೆ ಸಿಗುತ್ತಾ ? ನಟಿ ಹೇಳಿದ್ದೇನು..?
ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಆ ನಂತರ ಆ ವಿಷಯ ಹಾಗೇ ತಣ್ಣಗಾಯಿತು.

ಆದರೆ ಈಗ ಮಲಯಾಳಂ ಚಿತ್ರರಂಗದ ಕುರಿತು ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬ ನಾಯಕಿ ಕಾಸ್ಟಿಂಗ್ ಕೌಚ್ ಕುರಿತು ಕೇಳಲಾದ ಪ್ರಶ್ನೆಗೆ ಬುಲ್‌ಶಿಟ್ ಎಂದು ಕೆಂಡ ಕಾರಿದ್ದಾರೆ.
ಹೌದು, ತೆಲುಗುದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ. ಆ ಚಿತ್ರದ ಹೆಸರು ಪೊಟ್ಟೇಲ್. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿರುವ ಅನನ್ಯಾ ನಾಗಲ್ಲಾ ಅವರಿಗೆ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ತೆಲುಗು ಚಿತ್ರರಂಗದಲ್ಲಿ ಇದೆಯಾ ಎನ್ನುವ ಪ್ರಶ್ನೆಯನ್ನು ಪರ್ತಕರ್ತೆ ಒಬ್ಬರು ಕೇಳಿದ್ದಾರೆ. ಮುಂದುವರೆದು ಹಾಸಿಗೆ ಹಂಚಿಕೊಂಡರೆ ಸಂಭಾವನೆ ಹೆಚ್ಚು ಸಿಗುತ್ತೆ ಎನ್ನುವ ಮಾತು ಇದೆ, ಅದು ನೂರಕ್ಕೆ ನೂರರಷ್ಟು ನಿಜಾ ಕೂಡ ಹೌದು, ನೀವು ಈ ಮಾತನ್ನು ಒಪ್ಪುತ್ತೀರಾ ಎಂದು ಕೇಳಿದ್ಧಾರೆ.
ಈ ಪ್ರಶ್ನೆಗೆ ಉತ್ತರವನ್ನು ನೀಡಿರುವ ಅನನ್ಯಾ ನೂರಕ್ಕೆ ನೂರು ನೀವು ಹೇಳ್ತಿರುವುದು ಸತ್ಯ ಅನ್ನುವುದು ನಿಮಗೆ ಹೇಗೆ ಗೊತ್ತು ಎಂದು ಮರು ಪ್ರಶ್ನೆ ಮಾಡಿದ್ದಾರೆ. ಎಲ್ಲದರಲ್ಲಿ ಕೂಡ ಅರ್ಧ ಒಳ್ಳೆಯ ವಿಚಾರಗಳಿರುತ್ತಾವೆ ಇನ್ನು ಅರ್ಧ ಕೆಟ್ಟ ವಿಚಾರಗಳಿರುತ್ತಾವೆ, ಯಾಕೆ ನೆಗೆಟಿವ್ ವಿಚಾರಗಳ ಕಡೆ ಗಮನ ಕೊಡಬೇಕು ಎಂದು ಹೇಳಿದ್ದಾರೆ. ಮುಂದುವರೆದು ನೀವು ಕೇಳಿದ್ದನ್ನೆಲ್ಲ ಆಧಾರವಾಗಿಟ್ಕೊಂಡು ಪ್ರಶ್ನೆ ಮಾಡುತ್ತಿದ್ದೀರಾ ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದು ಹೇಳಿರುವ ಅನನ್ಯಾ ನನಗೆ ಆ ತರಹದ ಅನುಭವ ಆಗಿಲ್ಲ, ಕಾಸ್ಟಿಂಗ್ ಕೌಚ್ ನಮ್ಮಲ್ಲಿ ಇಲ್ಲ ಎಂದು ಹೇಳಿದ್ದಾರೆ. ಕ್ಷಮಿಸಿ ನಿಮ್ಮ ಮಾತು ನನಗೆ ಅರ್ಥಹೀನ ಎಂದು ಎನಿಸುತ್ತಿದೆ ಎಂದಿದ್ದಾರೆ.
ಅನನ್ಯಾ ನಾಗಲ್ಲ ಅವರ ಈ ಖಂಡತುಂಡ ಮಾತು ಅಲ್ಲಿದ್ದವರ ಹೃದಯವನ್ನು ಗೆದ್ದಿದೆ. ಶಿಳ್ಳೆ ಚಪ್ಪಾಳೆಯ ಸುರಿಮಳೆ ಕೂಡ ಆಗಿದೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಕೂಡ ಅನನ್ಯಾ ಅವರ ಈ ನೇರಾನೇರ ಉತ್ತರಕ್ಕೆ ಅನೇಕರು ಬಹುಪರಾಕ್ ಹಾಕುತ್ತಿದ್ದಾರೆ. ಅನನ್ಯಾ ಅವರ ಧೈರ್ಯ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಸದ್ಯಕ್ಕೆ ಅನನ್ಯಾ ನಾಗಲ್ಲ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉಳಿದಂತೆ ಅನನ್ಯಾ ನಾಗಲ್ಲ ಅಭಿನಯದ ಪೊಟೆಲ್ ಚಿತ್ರ ಈ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಯುವ ಚಂದ್ರ ಕೃಷ್ಣ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











