For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಸಿನಿಮಾದಿಂದ ಜಾನ್ಹವಿ ಔಟ್: ಹೊಸ ನಾಯಕಿ ಎಂಟ್ರಿ

  |

  ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟ ವಿಜಯ್ ದೇವರಕೊಂಡ ಸದ್ಯ 'ವರ್ಲ್ಡ್ ಫೇಮಸ್ ಲವರ್' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಜೊತೆಗೀಗ ವಿಜಯ್ ಬಹುನಿರೀಕ್ಷೆಯ 'ಫೈಟರ್' ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

  ಅಂದ್ಹಾಗೆ ವಿಜಯ್ ಜೊತೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಫೈಟರ್ ಸಿನಿಮಾದಲ್ಲಿ ಜಾನ್ಹವಿ ಅಭಿನಯಿಸುವುದು ಬಹುತೇಕ ಖಚಿತವಾಗಿತ್ತು. ಆದರೀಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಜಾನ್ಹವಿ ಕಪೂರ್ ಸಿನಿಮಾದಿಂದ ಹಿಂದೆ ಸರಿದಿದ್ದಾರಂತೆ.

  ಲಕ್ ಇಲ್ಲ ಎಂದು ಹೆಸರು ಬದಲಿಸಿಕೊಂಡ ನಟ ವಿಜಯ್ ದೇವರಕೊಂಡಲಕ್ ಇಲ್ಲ ಎಂದು ಹೆಸರು ಬದಲಿಸಿಕೊಂಡ ನಟ ವಿಜಯ್ ದೇವರಕೊಂಡ

  ಜಾನ್ಹವಿ ಜಾಗಕ್ಕೆ ಬಾಲಿವುಡ್ ನ ಮತ್ತೋರ್ವ ನಾಯಕಿಯ ಎಂಟ್ರಿಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಾನ್ಹವಿ ಜಾಗಕ್ಕೆ ಬಂದ ಆ ನಟಿ ಮತ್ಯಾರು ಅಲ್ಲ ಅನನ್ಯ ಪಾಂಡೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಜೊತೆ ಅಭಿನಯಿಸುವ ಮೂಲಕ ಅನನ್ಯ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

  ನಾಯಕಿಯ ವಿಚಾರವಾಗಿ ಚಿತ್ರತಂಡ ಇನ್ನು ಅಧಿಕೃತಗೊಳಿಸಿಲ್ಲ. ಜಾನ್ಹವಿ ಜಾಗಕ್ಕೆ ಅನನ್ಯ ಬಂದಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಜಾನ್ಹವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಡೇಟ್ ಹೊಂದಾಣಿಕೆಯಾಗದೆ ಸಿನಿಮಾದಿಂದ ಹೊರಬಂದಿದ್ದಾರಂತೆ.

  ಅಂದ್ಹಾಗೆ ಫೈಟರ್ ಸಿನಿಮಾಗೆ ಬಾಲಿವುಡ್ ನ ನಿರ್ಮಾಪಕ ಮತತ್ತು ನಿರ್ದೇಶಕ ಕರಣ್ ಜೋಹರ್ ಕೂಡ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ತೆಲುಗು ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅನನ್ಯ ಪಾಂಡೆ ಚಿತ್ರರಂಗಕ್ಕೆ ಕರೆತಂದಿದ್ದೆ ಕರಣ್ ಜೋಹರ್. ಹಾಗಾಗಿ ಕರಣ್ ಹೇಳಿದ ಕಾರಣ ಫೈಟರ್ ಗೆ ಎಂಟ್ರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕರಣ್ ಜೊತೆಗೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ.

  English summary
  Bollywood Actress Ananya Pandey to relapse Janhvi Kapoor in Vijay Devarakonda's Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X