ಬಿಕಿನಿಯಲ್ಲಿ ಬಿಸಿಯೇರಿಸಿದ ಅನಸೂಯ ಭಾರಧ್ವಜ್: ಆನಿವರ್ಸರಿ ದಿನ ಪತಿ ಜೊತೆ ಬೀಚ್‌ನಲ್ಲಿ ಏನಿದೆಲ್ಲಾ?

ತೆಲುಗು ಕಿರುತೆರೆ ನಿರೂಪಕಿ ಅನಸೂಯ ಭಾರಧ್ವಜ್ ಇತ್ತೀಚೆಗೆ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಹಾಗೂ 'ಪುಷ್ಪ' ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಆಕೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾಗಳಲ್ಲಿ ಅವಕಾಶ ಹೆಚ್ಚಾಗುತ್ತಿದ್ದಂತೆ ಕಿರುತೆರೆ ಕಾರ್ಯಕ್ರಮ ನಿರೂಪಣೆಗೆ ಬೈ ಹೇಳಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ಹಾಟ್ ಫೋಟೊಗಳನ್ನು ತೇಲಿ ಬಿಡುತ್ತಾರೆ.

ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನುಸೂಯ, ಪತಿ ಹಾಗೂ ಮಕ್ಕಳ ಜೊತೆ ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಸುಂದರ ಕ್ಷಣಗಳ ಫೋಟೊ, ವಿಡಿಯೋಗಳನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಪತಿ ಹಾಗೂ ಮಕ್ಕಳ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿನಲ್ಲಿ ಕಾಣಿಸಿಕೊಂಡಿದ್ದರು. ಬಿಕಿನಿಯಲ್ಲಿ ಮೈಮಾಟ ಪ್ರದರ್ಶಿಸಿದ್ದರು. ಆದರೆ ಬಿಕಿನಿ ತೊಟ್ಟಿರುವ ತೋರಿಸಿಯು ತೋರಿಸದಂತೆ ಫೋಟೊಗಳನ್ನು ಕ್ಲಿಕ್ಕಿಸಿ ತೇಲಿಬಿಟ್ಟಿದ್ದರು. ಇದೀಗ ಮತ್ತೆ ಬಿಕಿನಿಯಲ್ಲಿ ಕಡಲ ತಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

Actress Anasuya Bharadwaj poses in Bikini with husband during their anniversary celebration

ಬೀಚ್‌ನಲ್ಲಿ ಪತಿಯ ಜೊತೆ ಕಾಲ ಕಳೆದಿರುವ ವಿಡಿಯೋವನ್ನು ನಟಿ ಅನಸೂಯ ಭಾರಧ್ವಜ್ ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ಕ್ಯಾಮರಾ ಎದುರು ಕಾಣಿಸಿಕೊಳ್ಳದಿದ್ದರೂ ಬಿಕಿನಿಯಲ್ಲಿ ಕೆಲವು ಕೋನಗಳಲ್ಲಿ ದರ್ಶನ ಕೊಟ್ಟಿದ್ದಾರೆ. ಪತಿಯ ಜೊತೆ ಮುತ್ತಿನ ಮಳೆ ಸುರಿಸಿದ್ದಾರೆ. ಫೋಟೊ, ವಿಡಿಯೋ ಜೊತೆಗೆ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪತಿಯ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಪತಿಯ ಬಗ್ಗೆ ಅನಸೂಯ ಪೋಸ್ಟ್

ಸದ್ಯ ಪೋಸ್ಟ್‌ನಲ್ಲಿ ಅನಸೂಯ, ತಮ್ಮ ಪ್ರೀತಿ, ಮದುವೆ, ಜೀವನ ಪ್ರಯಾಣದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ನೀವು ನನಗೆ ಬರೆದ ಮೊದಲ ಪ್ರೇಮಪತ್ರ ನನಗೆ ಇನ್ನೂ ನೆನಪಿದೆ. ದಿನಾಂಕ ಜನವರಿ 23, 2001. ದೆಹಲಿ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗಿ ಆಗಿದ್ದ ಸಂದರ್ಭ. ನಾನು ಯಾವಾಗಲೂ ನಿಮಗೆ ಉತ್ತರ ಹೇಳಲಿಲ್ಲ. ಈಗ ಹೇಳಲು ಪ್ರಯತ್ನಿಸುತ್ತಿದ್ದೇನೆ" ಎಂದು ಅನಸೂಯ ಆರಂಭಿಸಿದ್ದಾರೆ.

ನನ್ನನ್ನು ಸಹಿಸಿಕೊಳ್ಳುತ್ತಿರುವುದಕ್ಕೆ ಥ್ಯಾಂಕ್ಸ್

"ಪ್ರೀತಿಯ ನಿಕ್ಕೂ.. ಇಷ್ಟು ದಿನ ನನ್ನೊಟ್ಟಿಗೆ ಜೀವನ ಸಾಗಿಸಿದ್ದು ಮಾತ್ರವಲ್ಲದೇ ಸಾಕಷ್ಟು ತ್ಯಾಗ ಮಾಡಿದ್ದೀರಾ. ಕೆಲವರು ನಿಮ್ಮ ಮೇಲೆ ಎಷ್ಟೋ ಅಸಹ್ಯವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಪ್ರೇಮಮಂದಿರವನ್ನು ಬಹಳ ಅದ್ಭುತವಾಗಿ ಉಳಿಸಿಕೊಂಡಿದ್ದೀರಾ. ಅದಕ್ಕಾಗಿ ನಿಮಗೆ ಕೃತಜ್ಞತೆಗಳು. ನಾನು ಬಹಳ ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುತ್ತೀರ. ನಾವು ಎಷ್ಟೋ ಚೆನ್ನಾಗಿ ಮುಂದಕ್ಕೆ ಸಾಗುತ್ತಿದ್ದೇವೆ. ನೀವು ನನ್ನನ್ನು ಬಹಳ ಪ್ರೀತಿಯಿಂದ, ಅಷ್ಟು ತಾಳ್ಮೆಯಿಂದ ಹೇಗೆ ಸಹಿಸಿಕೊಳ್ಳುತ್ತಿದ್ದೀರಾ ಅಂತ ಕೆಲವೊಮ್ಮೆ ಅಚ್ಚರಿ ಆಗುತ್ತದೆ"

Actress Anasuya Bharadwaj poses in Bikini with husband during their anniversary celebration

ನಮ್ಮಿಬ್ಬರ ಆಲೋಚನೆಗಳು ವಿಚಿತ್ರ

"ನಾನು ಕೆಲವೊಂದು ವಿಚಾರದಲ್ಲಿ ಸಹಿಸಿಕೊಳ್ಳುತ್ತಿದೇನೆ. ಹಾಗಾಗಿ ನಾವಿಬ್ಬರು ಒಂದೇ. ಇನ್ನುಳಿದ ಜೀವನದಲ್ಲೂ ನಿಮ್ಮನ್ನು ಹಿಂಸಿರುವ ಏಕೈಕ ವ್ಯಕ್ತಿ ನಾನೇ. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನಾವು ಅನ್ಯೋನ್ಯ ದಂಪತಿಗಳಲ್ಲದ ನನಗೆ ಗೊತ್ತು. ನಾವಿಬ್ಬರು ಮೂರ್ಖರು. ನಮ್ಮಿಬ್ಬರ ಆಲೋಚನೆಗಳು ವಿಚಿತ್ರವಾಗಿ ಇರುತ್ತವೆ. ಒಬ್ಬರದ್ದು ಒಂದೊಂದು ತರ. ಆದರೂ ನಾವು ಈ ಮಟ್ಟಕ್ಕೆ ತಲುಪಿದ್ದೇವೆ. ಅನೇಕ ತಿರುವುಗಳನ್ನು ತೆಗೆದುಕೊಂಡು ಒಬ್ಬರಿಗೊಬ್ಬರು ಬಲವಾಗಿ ನಿಂತಿದ್ದೇವೆ."

ಅಭಿಮಾನಿಗಳ ಮೆಚ್ಚುಗೆ

"ನಮ್ಮ ವಿವಾಹ ಬಂಧವನ್ನು ಬಹಳ ಕಾಲ ಡೇಟಿಂಗ್ ರೀತಿ ಇರಲು ಬಿಟ್ಟಿದ್ದಕ್ಕೆ ಧನ್ಯವಾದ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಬೇಬ್. ನಾವು ಎಂದೆಂದಿಗೂ ಹೀಗೆ ಒಟ್ಟಿಗೆ ಇರಬೇಕು. ಹಿಂದೆ ಯಾವುದಾದರೂ ಗಲಾಟೆ ನಡೆದಿದ್ದರೆ ಅದು ನಿನ್ನ ತಪ್ಪೇ. ಆದರೂ ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಅನಸೂಯ ಬರೆದುಕೊಂಡಿದ್ದಾರೆ. ಆಕೆಯ ಪೋಸ್ಟ್‌ಗೆ ಅಭಿಮಾನಿಗಳು, ಆಪ್ತರು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಎಲ್ಲಾ ಸರಿ, ಆನಿರ್ವಸರಿ ದಿನ ಬಿಕಿನಿಯಲ್ಲಿ ಕಾಣಿಸಿಕೊಳ್ಳೋದು ಬೇಕಿತ್ತೇ? ಎಂದು ಕಾಮೆಂಟ್ ಮಾಡ್ತಿದ್ದಾರೆ. ಕೆಲವರಂತೂ 'ಆಂಟಿ' ಏನಿದೆಲ್ಲಾ ಎನ್ನುತ್ತಿದ್ದಾರೆ.

ವೇಶ್ಯೆಯ ಪಾತ್ರದಲ್ಲಿ ಅನು

ಮದುವೆ ಆಗಿ ಇಬ್ಬರ ಮಕ್ಕಳ ತಾಯಿ ಆಗಿರುವ ಅನಸೂಯ ಗ್ಲಾಮರ್ ಡಾಲ್ ಆಗಿ ಮಿಂಚುತ್ತಿದ್ದಾರೆ. 'ರಂಗಸ್ಥಳಂ' ನಂತರ ಅನುಸೂಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಟಂ ಸಾಂಗ್‌ಗಳಲ್ಲೂ ಕುಣಿದಿದ್ದಾರೆ. 'ವಿಮಾನಂ' ಎನ್ನುವ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಅನು ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. 'ಪುಷ್ಪ- 2' ಮತ್ತು 'ಫ್ಲಾಶ್‌ಬ್ಯಾಕ್' ಸಿನಿಮಾಗಳು ಹೈದರಾದ್ ಚೆಲುವೆ ಕೈಯಲ್ಲಿದೆ.

More from Filmibeat

English summary
Actress Anasuya Bharadwaj poses in Bikini with husband during their anniversary celebration. She also pens a heartfelt note to her husband with Photos and video. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X