For Quick Alerts
  ALLOW NOTIFICATIONS  
  For Daily Alerts

  ಶ್ರೀಲೀಲಾ ಅನ್ನು ಕೈಬಿಟ್ಟ ತೆಲುಗು ಸಿನಿಮಾದಿಂದ ಅನುಪಮಾ ಪರಮೇಶ್ವರನ್ ಸಹ ಹೊರಗೆ!

  |

  ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ನಟಸಾರ್ವಭೌಮ' ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಕದ್ದಿದ್ದ ಚೆಲುವೆ ಅನುಪಮಾ ಪರಮೇಶ್ವರನ್, ದಕ್ಷಿಣ ಭಾರತದ ಬ್ಯುಸಿ ನಟಿಯರಲ್ಲಿ ಒಬ್ಬರು.

  ಈ ಕೇರಳ ಕುಟ್ಟಿ, ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಪ್ರೇಮಂ' ಮೂಲಕ ಪದಾರ್ಪಣೆ ಮಾಡಿ ಬಳಿಕ ತೆಲುಗು, ತಮಿಳು ಭಾಷೆಗಳಲ್ಲಿಯೂ ಬೇಡಿಕೆಯ ನಟಿಯಾದರು. ಕನ್ನಡದ 'ನಟಸಾರ್ವಭೌಮ' ಸಿನಿಮಾದಲ್ಲಿಯೂ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ.

  ಇದೆಲ್ಲ ಇರುವಂತೆಯೇ ಅನುಪಮಾ ಪರಮೇಶ್ವರನ್ ತೆಲುಗು ಸಿನಿಮಾ ಒಂದರಿಂದ ಹಠಾತ್ತನೆ ಹೊರಬಂದಿದ್ದಾರೆ. ವಿಶೇಷವೆಂದರೆ ಅನುಪಮಾ ಪರಮೇಶ್ವರನ್ ಅವರ ಬದಲಿಗೆ ಮೊದಲಿಗೆ ಆ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಿದ್ದು ಕನ್ನಡತಿ ಶ್ರೀಲೀಲಾ. ಅವರನ್ನು ಕೈಬಿಟ್ಟು ಅನುಪಮಾ ಅವರನ್ನು ಆರಿಸಲಾಗಿತ್ತು. ಈಗ ಅನುಪಮಾ ಸಹ ಹೊರನಡೆದಿದ್ದಾರೆ.

  ಕನ್ನಡತಿ ಶ್ರೀಲೀಲಾ ಅನ್ನು ಆರಿಸಲಾಗಿತ್ತು

  ಕನ್ನಡತಿ ಶ್ರೀಲೀಲಾ ಅನ್ನು ಆರಿಸಲಾಗಿತ್ತು

  ಸಿದ್ದು ಜೊನ್ನಲಗೊಂಡ ನಟಿಸಿದ್ದ 'ಡಿಜೆ ಟಿಲ್ಲು' ತೆಲುಗು ಸಿನಿಮಾ ಈ ವರ್ಷ ಸದ್ದು ಮಾಡಿದ ತೆಲುಗು ಸಿನಿಮಾಗಳಲ್ಲಿ ಒಂದು. ಸಿನಿಮಾದ ಹಾಸ್ಯ, ನಾಯಕ ನಟನ ಸ್ಟೈಲ್, ಹಾಡುಗಳು ಬಹಳ ಹಿಟ್ ಆಗಿದ್ದವು. ಇದೀಗ ಸಿನಿಮಾದ ಮುಂದುವರೆದ ಭಾಗ ನಿರ್ಮಾಣಕ್ಕೆ ಸಜ್ಜಾಗಿದ್ದು. ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲಿಗೆ ಕನ್ನಡತಿ ಶ್ರೀಲೀಲಾ ಅವರನ್ನು ಆರಿಸಲಾಗಿತ್ತು. ಬಳಿಕ ಅವರನ್ನು ತೆಗೆದು ಆ ಜಾಗಕ್ಕೆ ಅನುಪಮಾ ಅವರನ್ನು ಆಯ್ಕೆ ಮಾಡಲಾಯ್ತು.

  ಅನುಪಮಾ ಚಿತ್ರೀಕರಣ ತೊರೆಯಲು ಕಾರಣ?

  ಅನುಪಮಾ ಚಿತ್ರೀಕರಣ ತೊರೆಯಲು ಕಾರಣ?

  ಅನುಪಮಾ ಪರಮೇಶ್ವರನ್ ಅವರು ಸಿನಿಮಾದ ಶೂಟಿಂಗ್ ಆರಂಭಿಸಿ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಈಗ ಹಠಾತ್ತನೆ ಚಿತ್ರೀಕರಣ ತ್ಯಜಿಸಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸೂಕ್ತ ಕಾರಣಗಳನ್ನು ಚಿತ್ರತಂಡ ನೀಡಿಲ್ಲವಾದರೂ, ಚಿತ್ರೀಕರಣ ಮಾಡುತ್ತಿರುವ ರೀತಿಗೂ ಹೇಳಿದ್ದ ಕತೆಗೂ ಸಂಬಂಧವಿಲ್ಲವೆಂದು ಅನುಪಮಾ ಆರೋಪಿಸಿ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.

  ಮಡೋನಾ ಸೆಬಾಸ್ಟಿಯನ್‌ಗೆ ಗಾಳ

  ಮಡೋನಾ ಸೆಬಾಸ್ಟಿಯನ್‌ಗೆ ಗಾಳ

  ಅನುಪಮಾ ಪರಮೇಶ್ವರನ್ ಅವರ ನಿರ್ಗಮನದಿಂದ ತೆರವಾಗಿರುವ ನಾಯಕಿ ಸ್ಥಾನವನ್ನು ತುಂಬಲು ಮತ್ತೊಬ್ಬ ಮಲಯಾಳಿ ಸುಂದರಿ ಮಡೊನಾ ಸೆಬಾಸ್ಟಿಯನ್ ಅನ್ನು ಕರೆತರುವುದಾಗಿ 'ಡಿಜೆ ಟಿಲ್ಲು 2' ಚಿತ್ರತಂಡ ಘೋಷಿಸಿದೆ. ಆದರೆ ಅಭಿಮಾನಿಗಳು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಬಾಸ್ಟಿಯನ್, 'ಡಿಜೆ ಟಿಲ್ಲು' ನಾಯಕಿ ಪಾತ್ರಕ್ಕೆ ಸೂಟ್ ಆಗುವುದಿಲ್ಲ. ಮೊದಲ ಭಾಗದಲ್ಲಿದ್ದ ನೇಹಾ ಶೆಟ್ಟಿಯನ್ನೇ ಕರೆತನ್ನಿ ಎಂದು ಒತ್ತಾಯಿಸಿದ್ದಾರೆ.

  ನೇಹಾ ಶೆಟ್ಟಿಯನ್ನು ಕರೆತರುವಂತೆ ಬೇಡಿಕೆ

  ನೇಹಾ ಶೆಟ್ಟಿಯನ್ನು ಕರೆತರುವಂತೆ ಬೇಡಿಕೆ

  'ಡಿಜೆ ಟಿಲ್ಲು' ಸಿನಿಮಾದ ಮೊದಲ ಭಾಗದಲ್ಲಿ ಮಂಗಳೂರು ಮೂಲದ ನೇಹಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಆಕೆಯ ಪಾತ್ರದ ಬಗ್ಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈಗ ನಿರ್ದೇಶಕರು ಬೇರೆ ನಾಯಕಿಯನ್ನು ಇಟ್ಟುಕೊಂಡು ಬೇರೊಂದು ರೀತಿಯ ಕತೆ ಹೇಳಲು ತಯಾರಾಗಿದ್ದಾರೆ. 2022 ರ ಫೆಬ್ರವರಿಯಲ್ಲಿ ಬಿಡುಗಡೆ ಆಗಿದ್ದ 'ಡಿಜೆ ಟಿಲ್ಲು' ಸಿನಿಮಾವನ್ನು ವಿಮಲ್ ಕೃಷ್ಣ ನಿರ್ದೇಶನ ಮಾಡಿದ್ದರು. ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡಿದ್ದರು. ಸಂಗೀತ ನೀಡಿದ್ದು ಎಸ್ ತಮನ್. ನಾಯಕಿ ಹೊರತಾಗಿ ಇದೇ ತಂಡ 'ಡಿಜೆ ಟಿಲ್ಲು 2' ಸಿನಿಮಾಕ್ಕೆ ಒಂದಾಗಿದೆ.

  English summary
  Malayalam actress Anupama Parameshwaran walked out of Telugu movie DJ Tillu 2 after shooting for couple of days.
  Wednesday, November 30, 2022, 9:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X