ನಟಿ ಅನುಷ್ಕಾ ಶೆಟ್ಟಿ ಮೊದಲ ಆಡಿಷನ್ ವಿಡಿಯೋ ವೈರಲ್

By ಫಿಲ್ಮ್ ಡೆಸ್ಕ್

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಆಡಿಷನ್ ವಿಡಿಯೋವೊಂದು ವೈರಲ್ ಆಗಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಅನುಷ್ಕಾ ನೀಡಿರುವ ಆಡಿಷನ್ ಇದಾಗಿದೆ. ಈಗ ಲಾಕ್ ಡೌನ್ ಸಮಯದಲ್ಲಿ ಈ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದ್ದು ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

Recommended Video

ಪವನ್ ಕಲ್ಯಾಣ್, ಅಮಿತಾಬ್ ಬಚ್ಚನ್ ಗೆ ಚಾಲೆಂಜ್ ಮಾಡಿದ ಚಿರಂಜೀವಿ. | Chiranjeevi

ಇಂದು ದೊಡ್ಡ ನಟಿಯಾಗಿ ಗುರುತಿಸಿಕೊಂಡಿರುವ ಅನುಷ್ಕಾ ಮೊದಲು ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ತುಂಬಾ ಕಷ್ಟಪಟ್ಟಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಾ ಬಂದಿರುವ ಅನುಷ್ಕಾಗೆ ಯಶಸ್ಸು ಸುಲಭವಾಗಿ ಬಂದಿಲ್ಲ. ಸಾಕಷ್ಟು ಆಡಿಷನ್, ಕಠಿಣ ಶ್ರಮ ಮತ್ತು ಪ್ರತಿಭೆ ಇಂದು ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಮುಂದೆ ಓದಿ..

2005ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ

2005ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ

ನಟಿ ಅನುಷ್ಕಾ ಶೆಟ್ಟಿ 2005ರಿಂದ ಸಿನಿಮಾರಂಗದ ಪಯಣ ಪ್ರಾರಂಭಿಸಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಸೂಪರ್ ಸಿನಿಮಾ ಮೂಲಕ ಅನುಷ್ಕಾ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ. ಮೊದಲ ಸಿನಿಮಾದಲ್ಲಿಯೆ ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ್ ಗೆ ನಾಯಕಿಯಾಗಿ ಅನುಷ್ಕಾ ಮಿಂಚಿದ್ದಾರೆ.

ವಿಕ್ರಮಾರ್ಕುಡು ಸಿನಿಮಾ ಸಕ್ಸಸ್

ವಿಕ್ರಮಾರ್ಕುಡು ಸಿನಿಮಾ ಸಕ್ಸಸ್

ಎರಡು ಸಿನಿಮಾ ಮಾಡುತ್ತಿದ್ದಂತೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ವಿಕ್ರಮಾರ್ಕುಡು ನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ಬಣ್ಣಹಚ್ಚುತ್ತಾರೆ. ರವಿ ತೇಜ ನಾಯಕನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಅನುಷ್ಕಾ ಶೆಟ್ಟಿಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಡುತ್ತೆ. ಆ ನಂತರ ಚಿತ್ರರಂಗದಲ್ಲಿ ಅನುಷ್ಕಾ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಲಾಕ್ ಡೌನ್ ನಲ್ಲಿ ವೈರಲ್ ಆಗಿದೆ ಆಡಿಷನ್ ವಿಡಿಯೋ

ನಟಿ ಅನುಷ್ಕಾ ಶೆಟ್ಟಿ ಎಷ್ಟು ಪ್ರತಿಭಾವಂತ ನಟಿ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ವಿಡಿಯೋದಲ್ಲಿ ಅನುಷ್ಕಾ ಭಾರತೀಯ ಸಂಪ್ರದಾಯಸ್ತ ಮನೆಯ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಲ್ ಪತಿಯ ಜೊತೆ ಜಗಳವಾಡುತ್ತಿರುವ ವಿಡಿಯೋ ಇದಾಗಿದೆ. ಹಿಂದಿ ಭಾಷೆಯಲ್ಲಿರುವ ಈ ವಿಡಿಯೋ ತೆಲುಗು ಫಿಲ್ಮ್ ನಗರ್ ಎನ್ನುವ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದೆ.

ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ದೇವಸೇನಾ

ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ದೇವಸೇನಾ

ಸಿನಿಮಾರಂಗದಲ್ಲಿ ಅನುಷ್ಕಾ 15 ವರ್ಷಗಳನ್ನು ಪೂರೈಸಿದ್ದಾರೆ. 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅನುಷ್ಕಾ ಬಣ್ಣಹಚ್ಚಿದ್ದಾರೆ. ಟಾಲುವುಡ್ ಸ್ಟಾರ್ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಸ್ಟೀಟಿ ಸಿನಿಮಾ ಬದುಕನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಸಿನಿಮಾ ಬಾಹುಬಲಿ. ಚಿತ್ರದಲ್ಲಿ ದೇವಸೇನ ಆಗಿ ನಟಿಸಿದ್ದ ಅನುಷ್ಕಾ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ.

ಮದುವೆ ವದಂತಿ

ಮದುವೆ ವದಂತಿ

38 ವರ್ಷದ ಅನುಷ್ಕಾ ಶೆಟ್ಟಿ ಇನ್ನೂ ಮದುವೆಯಾಗಿಲ್ಲ. ಅನುಷ್ಕಾ ಮದುವೆ ವಿಚಾರ ಆಗಾಗ ಚರ್ಚೆಯಾಗುತ್ತಿರುತ್ತೆ. ಇತ್ತೀಚಿಗಷ್ಟೆ ಅನುಷ್ಕಾ ಖ್ಯಾತ ಕ್ರಿಕೆಟಿಗನ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿಗೆ ಬ್ರೇಕ್ ಬೀಳುತ್ತಿದ್ದಂತೆ ತೆಲುಗಿನ ಖ್ಯಾತ ನಿರ್ದೇಶಕರ ಜೊತೆ ಅನುಷ್ಕಾ ಹೆಸರು ಲಿಂಕ್ ಅಪ್ ಆಗಿತ್ತು. ಈ ಎಲ್ಲಾ ವದಂತಿಗೆ ತೆರೆ ಎಳೆದಿರುವ ಅನುಷ್ಕಾ, 'ಮದುವೆ ಫಿಕ್ಸ್ ಆದರೆ ಖಂಡಿತ ನಾನೆ ತಿಳಿಸುತ್ತೇನೆ' ಎಂದು ಹೇಳುವ ಮೂಲಕ ಹರಿದಾಡುತ್ತಿರುವ ವದಂತಿಗೆ ಬ್ರೇಕ್ ಹಾಕಿದ್ದಾರೆ.

'ನಿಶಬ್ದಂ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

'ನಿಶಬ್ದಂ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

ಅನುಷ್ಕಾ ಶೆಟ್ಟಿ ಸದ್ಯ 'ನಿಶಬ್ದಂ' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಈ ಸಿನಿಮಾ ನಂತರ ಅನುಷ್ಕಾ ಯಾವುದೆ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

More from Filmibeat

English summary
Actress Anushka Shetty audition video viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X