ವೈರಲ್ ಆಯ್ತು ಅನುಷ್ಕಾ ಶೆಟ್ಟಿ ಲಾಕ್ ಡೌನ್ ಫೋಟೋ: ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ ಸ್ವೀಟಿ

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಶೆಟ್ಟಿ ಅಪರೂಪದ ಫೋಟೋ ವೈರಲ್ ಆಗಿತ್ತು. ದಪ್ಪಗೆ, ಗುಂಡಗೆ ಆಗಿದ್ದ ಅನುಷ್ಕಾ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಬಾಹುಬಲಿಯ ದೇವಸೇನಾ ಆಗಿ ಅಭಿಮಾನಿಗಳ ನಿದ್ದೆಗೆಡಿಸಿದ್ದ ಅನುಷ್ಕಾ ಒಮ್ಮಗೆ ದಪ್ಪಾ ಆಗಿರುವುದನ್ನು ನೋಡಿ ನಂಬಲು ಸಾಧ್ಯವಾಗಿರಲಿಲ್ಲ.

ಇದೀಗ ಅನುಷ್ಕಾ ಶೆಟ್ಟಿಯ ಮತ್ತೊಂದು ಫೋಟೋ ವೈರಲ್ ಆಗಿದೆ. ಸರಳತೆ ಮೂಲಕವೇ ಅಭಿಮಾನಿಗಳ ಮನಗೆದ್ದಿರುವ ಅನುಷ್ಕಾ ಮನೆಯ ಬಳಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮಾಸ್ಕ್ ತೆಗೆದು ಸ್ವೀಟಿ ಕ್ಯಾಮರಾಗೆ ಪೋಸ್ ನೀಡಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಮುಂದೆ ಓದಿ...

ಅನುಷ್ಕಾ ನೋಡಿ ಅಭಿಮಾನಿಗಳು ಫುಲ್ ಖುಷ್

ಅನುಷ್ಕಾ ನೋಡಿ ಅಭಿಮಾನಿಗಳು ಫುಲ್ ಖುಷ್

ಮೇಕಪ್ ಇಲ್ಲದೆ ಕಾಣಿಸಿಕೊಳ್ಳುವ ಕೆಲವೇ ಕೆಲವು ನಟಿಯರಲ್ಲಿ ಅನುಷ್ಕಾ ಕೂಡ ಒಬ್ಬರು. ಸಹಜ ಸೌಂದರ್ಯದ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ಅನುಷ್ಕಾ ಮತ್ತೆ ತೆಳ್ಳಗಾಗಿರುವುದನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗುಂಡಾಗಿರುವ ಅನುಷ್ಕಾ ಫೋಟೋ ಮತ್ತು ಸದ್ಯ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವ ಫೋಟೋವನ್ನು ಶೇರ್ ಮಾಡಿ ಅದ್ಭುತ ಬದಲಾವಣೆಗೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

2015ರಲ್ಲಿ ಸಿಕ್ಕಾಪಟ್ಟೆ ದಪ್ಪ ಆಗಿದ್ದ ಅನುಷ್ಕಾ

2015ರಲ್ಲಿ ಸಿಕ್ಕಾಪಟ್ಟೆ ದಪ್ಪ ಆಗಿದ್ದ ಅನುಷ್ಕಾ

ಅನುಷ್ಕಾ 2015ರಲ್ಲಿ ಬಂದ ಸೈಜ್ ಜೀರೋ ಚಿತ್ರಕ್ಕಾಗಿ ಸಾಕಷ್ಟು ದಪ್ಪ ಆಗಿದ್ದರು. ಬಳಿಕ ತೂಕ ಇಳಿಸಿಕೊಂಡಿದ್ದರು. ಆದರೂ ಮೊದಲಿನ ಅನುಷ್ಕಾ ಆಗಲು ಸಾಧ್ಯವಾಗಿರಲಿಲ್ಲ. ಕೊಂಚ ದಪ್ಪಗಿದ್ದ ಅನುಷ್ಕಾ ಸಣ್ಣ ಆಗುವಂತೆ ಅಭಿಮಾನಿಗಳು ಸಲಹೆ ಕೂಡ ನೀಡುತ್ತಿದ್ದರು. ಆದರೆ ಇತ್ತೀಚಿಗೆ ದಪ್ಪ ಆಗಿದ್ದ ಅನುಷ್ಕಾ ವೈರಲ್ ಫೋಟೋ ಅಭಿಮಾನಿಗಳಲ್ಲಿ ಮತ್ತಷ್ಟು ಅಚ್ಚರಿ ಮೂಡಿಸಿತ್ತು.

ಕಳೆದ ವರ್ಷದ ಲಾಕ್ ಡೌನ್ ಫೋಟೋ

ಕಳೆದ ವರ್ಷದ ಲಾಕ್ ಡೌನ್ ಫೋಟೋ

ಅಂದಹಾಗೆ ದಪ್ಪ ಆಗಿರುವ ಅನುಷ್ಕಾ ಫೋಟೋ ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಎಂದು ಹೇಳಲಾಗುತ್ತಿದೆ. ಆದರೆ ಈ ವರ್ಷ ಲಾಕ್ ಡೌನ್ ನಲ್ಲಿ ಮತ್ತೆ ತೆಳ್ಳಗಾಗಿದ್ದಾರೆ. ಸಣ್ಣ ಆಗಿರುವ ಅನುಷ್ಕಾ ನೋಡಿ ಅಭಿಮಾನಿಗಳುಫಿಲ್ ಆಗಿದ್ದು, ಫೋಟೋ ಶೇರ್ ಮಾಡುವ ಮೂಲಕ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಟ್ವಿಟ್ಟರ್ ಟಾಪ್ ಟ್ರೆಂಡಿಂಗ್ ನಲ್ಲಿದ್ದಾರೆ ಅನುಷ್ಕಾ.

Recommended Video

ದ್ವಿಪಾತ್ರದಲ್ಲಿ ಪ್ರಭಾಸ್, ಸಲಾರ್ ಉಗ್ರಂ ರಿಮೇಕ್ ಅಲ್ವಾ..? | Filmibeat Kannada
ಅನುಷ್ಕಾ ಸಿನಿಮಾಗಳು

ಅನುಷ್ಕಾ ಸಿನಿಮಾಗಳು

ಮದುವೆ ವಿಚಾರಕ್ಕೆ ಆಗಾಗ ಸುದ್ದಿಯಾಗುವ ಅನುಷ್ಕಾ ದುಬೈ ಮೂಲದ ಉದ್ಯಮಿ ಕೈ ಹಿಡಿಯಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅನುಷ್ಕಾ ಕೊನೆಯದಾಗಿ ನಿಶಬ್ದಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅನುಷ್ಕಾ ಮುಂದಿನ ಸಿನಿಮಾ ಯಾವುದು ಎನ್ನುವುದು ಎನ್ನುವುದು ಸದ್ಯದ ಕುತೂಹಲ.

More from Filmibeat

English summary
Actress Anushka Shetty's cute and smile new photo viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X