6 ತಿಂಗಳು ಹೆತ್ತವರಿಂದ ದೂರ, ಮೈ ಬಣ್ಣ ಕಪ್ಪು ಎಂದರು; ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡದ 'ಕಿನ್ನರಿ' ಬಿಕ್ಕಿದ್ದೇನು

ಆಕಾಶ ಮುಟ್ಟೋಕೆ 'ಅವಕಾಶ' ಸಿಗಬೇಕು. ಆದರೆ ಆ 'ಅವಕಾಶ' ಇಲ್ಲಿ ಸಿಗುವುದು ಅಪರೂಪ. 'ಸಿಕ್ಕರೆ ಸೀರುಂಡೆ', ಇಲ್ಲದೇ ಇದ್ದರೆ 'ಹಾಗಲಕಾಯಿ ಉಂಡೆ'. ಈ ಕಾರಣಕ್ಕಾಗಿಯೇ ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಿಸಿಕೊಳ್ಳುವ ಪ್ರಯತ್ನವನ್ನ ಎಲ್ಲರೂ ಇಲ್ಲಿ ಮಾಡ್ತಾರೆ. ಭೂಮಿ ಶೆಟ್ಟಿ ಇದಕ್ಕೆ ಮತ್ತೊಂದು ಉದಾಹರಣೆ.

ಯಸ್, ಭೂಮಿ ಶೆಟ್ಟಿ.. ಕನ್ನಡ ಕಿರುತೆರೆ ಲೋಕದ ಕಿನ್ನರಿ. ಕುಂದಾಪುರದಿಂದ ಬಂದು, ಕನ್ನಡ ಕಿರುತೆರೆಯಲ್ಲಿ ಬದುಕನ್ನು ಕಟ್ಟಿಕೊಂಡ ಭೂಮಿ ಕಳೆದ ಕೆಲ ದಿನಗಳಿಂದ ಹೈದ್ರಾಬಾದ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕೇವಲ ಕಿರುತೆರೆಯಷ್ಟೇ ಅಲ್ಲ, ಹಿರಿತೆರೆಯಲ್ಲಿಯೂ ಅದೃಷ್ಟವನ್ನ ಭೂಮಿ ಶೆಟ್ಟಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆಯಷ್ಟೇ ಆಕೆ ಅಭಿನಯದ 'ಶರತ್ತುಲು ವರ್ತಿಷ್ಠೈ' ಚಿತ್ರ ತೆರೆಗೆ ಬಂದಿದೆ.

Actress Bhoomi Shetty Opens Up About Her Parents And Trolling

ಇದೇ ಚಿತ್ರದ ಪ್ರಚಾರದ ಸಮಯದಲ್ಲಿ ತನ್ನ ಮನದ ಮಾತನ್ನ ಹಂಚಿಕೊಂಡಿರುವ ಭೂಮಿ ಶೆಟ್ಟಿ, ತಮ್ಮ 'ಬಾಲ್ಯ' ಹಾಗೂ 'ಬಣ್ಣ'ದ ಬಗ್ಗೆ ಮಾತನಾಡಿದ್ದಾರೆ. ಕನಸು ಹಾಗೂ ಮನಸಿನ ಕಥೆ ಹೇಳಿದ್ದಾರೆ. ಸಾಧಿಸುವ ಗುರಿ ಇದ್ದರಷ್ಟೇ ಸಾಧನೆ ಸಾಧ್ಯ ಅಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಭೂಮಿ ಶೆಟ್ಟಿ ಬಾಲ್ಯದಿಂದಲೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿತ್ತು, ಆದರೆ ಕುಟುಂಬ ವರ್ಗದಲ್ಲಿ ಅವ್ರದ್ದೇ ಆದ ನಿಯಮಗಳಿದ್ದವು ಅಂದಿದ್ದಾರೆ. ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಹೋಗಲು ಮನೆಯಲ್ಲಿ ಬಿಟ್ಟಿರಲಿಲ್ಲಎಂದಿರುವ ಭೂಮಿ ಶೆಟ್ಟಿ ಈ ಕಾರಣಕ್ಕಾಗಿ ಮದುವೆಯಾಗುವ ನಿರ್ಧಾರವನ್ನೂ ಮಾಡಿದ್ದೇ ಎಂದಿದ್ದಾರೆ.

ಇನ್ನೂ ಬೆಂಗಳೂರಿಗೆ ಹೋದರೆ ಮಾತನಾಡುವುದಿಲ್ಲ ಎಂದು ಮನೆಯವರು ಹೇಳಿದ್ದರು ಅದರಂತೆ ನಡೆದುಕೊಂಡರು ಕೂಡ ಎಂದಿರುವ ಭೂಮಿ ಶೆಟ್ಟಿ ಆರು ವರ್ಷಗಳಿಂದ ತಂದೆ ತಾಯಿಯಿಂದ ದೂರ ಇರುವ ವಿಚಾರ ಬಹಿರಂಗ ಪಡಿಸಿದ್ದಾರೆ. ಇದೇ ಸಮಯದಲ್ಲಿ ತನ್ನ ಸ್ಕಿನ್ ಕಲರ್ ನಿಂದ ಆದ ಅವಮಾನದ ಕಥೆ ಹೇಳಿದ್ದಾರೆ. ಅನೇಕರು ನಿನ್ನ ಮೈ ಬಣ್ಣ ಕಪ್ಪು ಎಂದು ನಿಂದಿಸಿದ್ದರು ಎಂದು ಹೇಳಿದ್ದಾರೆ. ಇವತ್ತೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಭೂಮಿ ಶೆಟ್ಟಿ, ತಮ್ಮ ಮೈ ಬಣ್ಣದ ವಿಚಾರದಲ್ಲಿ ನಿಂದನೆಗೆ ಒಳಗಾಗ್ತಾನೇ ಇದ್ದಾರೆ

ಹಾಗೂ ಹೀಗೂ ಎದುರಾದ ಎಲ್ಲ ಸವಾಲುಗಳನ್ನ ಮೆಟ್ಟಿ ನಿಂತು, ಬೆಂಗಳೂರಿಗೆ ಹೋಗಿ ಓದುವ ದಿನಗಳಲ್ಲಿ ಮ್ಯಾಗಜಿನ್ ಫೋಟೋ ಶೂಟ್ ನಲ್ಲಿ ಭಾಗವಹಿಸಿ, ಆ ನಂತರ ಆಡಿಷನ್‌ ನೀಡಿದ ಪರಿಣಾಮದಿಂದ ಕಿರುತೆರೆಯಲ್ಲಿ ಅವಕಾಶದ ಬಾಗಿಲು ತೆರೆಯಿತು ಎಂದಿರುವ ಭೂಮಿ ಶೆಟ್ಟಿ ಯಾರು ಏನೇ ಹೇಳಲಿ ನಾನು ಈಗ ತಲೆ ಕೆಡಿಸಿಕೊಳ್ಳುವುದಿಲ್ಲ ಅಂದಿದ್ದಾರೆ. ಹಿಂದೆ ನನ್ನ ಬಗ್ಗೆ ನನಗೆ ಕೀಳರಿಮೆ ಇತ್ತು ಆದರೆ ಈಗ ಇಲ್ಲ ಅಂದಿದ್ದಾರೆ.

Actress Bhoomi Shetty Opens Up About Her Parents And Trolling

ಸದ್ಯಕ್ಕೆ ಭೂಮಿ ಶೆಟ್ಟಿ ತೆಲುಗು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಭವಿಷ್ಯದಲ್ಲಿ ಭೂಮಿ ಶೆಟ್ಟಿ ತೆಲುಗಿನಲ್ಲಿಯೇ ಸೆಟ್ಲ್ ಆಗಲಿದ್ದಾರೆ ಎಂಬ ಭವಿಷ್ಯವಾಣಿಯೂ ಕೇಳಿ ಬರ್ತಾ ಇದೆ. ಇನ್ನೂ ಭೂಮಿ ಶೆಟ್ಟಿಯವರ ಈ ಅಂತರಂಗದ ಮಾತುಗಳ ಬಗ್ಗೆಯೂ ಹೈದ್ರಾಬಾದ್ ನಲ್ಲಿ ಚರ್ಚೆಯನ್ನ ಅನೇಕರು ಮಾಡುತ್ತಿದ್ದಾರೆ.

More from Filmibeat

English summary
Kannada Tv Star Bhoomi Shetty, Who Rose to fame with Kinnari Serial Opens up about her parents and trolling. actress says my parents didnt spoke with me for six years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X