ಆ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿ, ಈ ಸಿನಿಮಾದಲ್ಲಿ ವಿಲನ್‌: ಪುಷ್ಪನಿಗೆ ಲೇಡಿ ಠಕ್ಕರ್

ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಸಿನಿಮಾಗಳ ಪ್ರಾಭಲ್ಯವಿದ್ದ ಪ್ರದೇಶದಲ್ಲಿ ದೊಡ್ಡ ಮಟ್ಟದ ಗಳಿಕೆಯನ್ನು ಕಳೆದೊಂದು ವರ್ಷದಿಂದ ಸತತವಾಗಿ ಮಾಡುತ್ತಿವೆ. ಇದು ಮೊದಲಾಗಿದ್ದು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದ ಮೂಲಕ.

ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆದ 'ಪುಷ್ಪ' ಸಿನಿಮಾ ಬಾಲಿವುಡ್‌ ಭಾಗದಲ್ಲಿ ದೊಡ್ಡ ಮಟ್ಟದ ಗಳಿಕೆ ಕಂಡಿತು. ಅದರ ಹಿಂದೆಯೇ 'RRR', 'ಕೆಜಿಎಫ್ 2' 'ವಿಕ್ರಾಂತ್ ರೋಣ', ಇದೀಗ 'ಕಾಂತಾರ' ಇನ್ನಿತರೆ ಸಿನಿಮಾಗಳು ಬಾಲಿವುಡ್‌ ಅನ್ನು ಮಣ್ಣು ಮುಕ್ಕಿಸಿದವು.

ಇದೀಗ 'ಪುಷ್ಪ 2' ಸಿನಿಮಾ ತಯಾರಾಗುತ್ತಿದೆ. 'ಪುಷ್ಪ'ದ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿ ಸಿನಿಮಾವನ್ನು ಕಟ್ಟುತ್ತಿದ್ದಾರೆ ನಿರ್ದೇಶಕ ಸುಕುಮಾರ್. 'ಪುಷ್ಪ' ಸಿನಿಮಾದ ಮೊದಲ ಭಾಗದಲ್ಲಿಯೇ ಅಲ್ಲು ಅರ್ಜುನ್‌ಗೆ ಎದುರಾಳಿಯಾಗಿ ಸಾಕಷ್ಟು ವಿಲನ್‌ಗಳಿದ್ದರು. ಆದರೆ 'ಪುಷ್ಪ 2' ನಲ್ಲಿ ಈ ವಿಲನ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವ ಜೋರಾಗಿದೆ. ಅದರಲ್ಲೂ ಮಹಿಳಾ ವಿಲನ್‌ಗಳು ಎರಡನೇ ಭಾಗದಲ್ಲಿ ಪುಷ್ಪನನ್ನು ಕಾಡಲಿದ್ದಾರೆ.

ಪುಷ್ಪನಿಗೆ ಮತ್ತೊಬ್ಬ ಮಹಿಳಾ ವಿಲನ್

ಪುಷ್ಪನಿಗೆ ಮತ್ತೊಬ್ಬ ಮಹಿಳಾ ವಿಲನ್

'ಪುಷ್ಪ' ಸಿನಿಮಾದ ಮೊದಲ ಭಾಗದಲ್ಲಿಯೇ ವಿಲನ್‌ಗಳ ಗುಂಪಿನಲ್ಲಿ ದಾಕ್ಷಾಯಿಣಿ ಹೆಸರಿನ ವಿಲನ್ ಇದ್ದರೂ ಆಕೆ ನೇರವಾಗಿ ಪುಷ್ಪನ ವಿರುದ್ಧ ಜಿದ್ದಿಗೆ ಬಿದ್ದಿರಲಿಲ್ಲ. ಆದರೆ ಎರಡನೇ ಭಾಗದಲ್ಲಿ ದಾಕ್ಷಾಯಿಣಿ ಜೊತೆಗೆ ಇನ್ನೊಬ್ಬ ಮಹಿಳಾ ವಿಲನ್ ಪುಷ್ಪನಿಗೆ ಎದುರಾಗಲಿದ್ದಾರೆ. ದಾಕ್ಷಾಯಿಣಿ ಪಾತ್ರವನ್ನು ಅನುಸೂಯಾ ಭಾರಾಧ್ವಜ್ ನಿರ್ವಹಸಿದ್ದರೆ, ಇದೀಗ ಎರಡನೇ ವಿಲನ್ ಪಾತ್ರಕ್ಕಾಗಿ ನಾಯಕಿ ಪಾತ್ರ ಮಾಡುತ್ತಿದ್ದ ನಟಿಯನ್ನೇ ಒಪ್ಪಿಸಿಬಿಟ್ಟಿದ್ದಾರೆ ಸುಕುಮಾರ್!

ಅಲ್ಲು ಅರ್ಜುನ್‌ಗೆ ನಾಯಕಿಯಾಗಿದ್ದ ಕ್ಯಾತರೀನಾ

ಅಲ್ಲು ಅರ್ಜುನ್‌ಗೆ ನಾಯಕಿಯಾಗಿದ್ದ ಕ್ಯಾತರೀನಾ

ಸ್ವತಃ ಅಲ್ಲು ಅರ್ಜುನ್‌ರ ಈ ಹಿಂದಿನ ಸಿನಿಮಾ ಒಂದರಲ್ಲಿ ನಾಯಕಿಯಾಗಿ ನಟಿಸಿದ್ದ ಕ್ಯಾತೆರಿನಾ ತ್ರೆಸಾ, 'ಪುಷ್ಪ 2' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರಂತೆ! ಈ ಹಿಂದೆ ಕ್ಯಾತೆರಿನಾ ಹಾಗೂ ಅಲ್ಲು ಅರ್ಜುನ್ 'ಸರೈನೋಡು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಎದುರು ನಾಯಕಿಯಾಗಿ ಕ್ಯಾತೆರಿನಾ ನಟಿಸಿದ್ದರು. ಆದರೆ ಪೂರ್ಣ ಪ್ರಮಾಣದ ನಾಯಕಿ ಪಾತ್ರ ಅವರದ್ದಾಗಿರಲಿಲ್ಲ. ಈಗ ಅಲ್ಲು ಅರ್ಜುನ್‌ಗೆ ವಿಲನ್ ಆಗಿದ್ದಾರೆ ಕ್ಯಾತೆರಿನಾ.

ದೊಡ್ಡ ಸಂಖ್ಯೆಯ ವಿಲನ್‌ಗಳು

ದೊಡ್ಡ ಸಂಖ್ಯೆಯ ವಿಲನ್‌ಗಳು

'ಪುಷ್ಪ 2' ಸಿನಿಮಾದಲ್ಲಿ ದೊಡ್ಡ ಸಂಖ್ಯೆಯ ವಿಲನ್‌ಗಳ ದಂಡೇ ಇದೆ. ಫಹಾದ್ ಫಾಸಿಲ್ ಮುಖ್ಯ ವಿಲನ್ ಆದರೆ, ಮೊದಲ ಭಾಗದಲ್ಲಿ ಸಾಯದೇ ಉಳಿದುಕೊಂಡಿರುವ ಸುನಿಲ್ ನಟಿಸಿರುವ ಮಂಗಳಮ್ ಸೀನು ಪಾತ್ರ, ಡಾಲಿ ಧನಂಜಯ್ ಪಾತ್ರ ಜಾಲಿ ರೆಡ್ಡಿ, ಮಂಗಳಮ್ ಸೀನು ಪತ್ನಿ ದಾಕ್ಷಾಯಿಣಿ ಅವರುಗಳಿದ್ದಾರೆ. ಇವರ ಜೊತೆಗೆ ತಮಿಳಿನ ಸ್ಟಾರ್ ವಿಕ್ರಂ ಸಹ ಹೊಸ ವಿಲನ್‌ ಆಗಿ ಎಂಟ್ರಿ ನೀಡಿದ್ದಾರೆ ಎಂಬ ಸುದ್ದಿಯಿದೆ. ಪ್ರಕಾಶ್ ರೈ ಅಥವಾ ವಿಜಯ್ ಸೇತುಪತಿ ಸಹ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಎರಡನೇ ಭಾಗದಲ್ಲಿ ದೊಡ್ಡ ಸಂಖ್ಯೆಯ ವಿಲನ್‌ಗಳನ್ನು ಪುಷ್ಪ ಎದುರಿಸಬೇಕಾಗಿದೆ.

ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಕ್ಯಾತರೀನಾ

ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಕ್ಯಾತರೀನಾ

ಇನ್ನು ಕ್ಯಾತೆರಿನಾ ವಿಷಯಕ್ಕೆ ಮರಳುವುದಾದರೆ, ಕ್ಯಾತೆರಿನಾ ಹಲವು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ದುನಿಯಾ ವಿಜಯ್ ನಟಿಸಿರುವ 'ಶಂಕರ್ ಐಪಿಎಸ್' ಸಿನಿಮಾದ ಮೂಲಕ ನಟನೆ ಆರಂಭಿಸಿದ ಕ್ಯಾತರೀನಾ, ಕನ್ನಡದ 'ವಿಷ್ಣು', 'ಗಾಡ್ ಫಾದರ್' ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2013 ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದ ಈ ಚೆಲುವೆ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿಯೂ ಕ್ಯಾತರೀನಾ ನಟಿಸುತ್ತಿದ್ದಾರೆ.

More from Filmibeat

English summary
Actress Catherine Tresa playing a villain role in Pushpa 2 movie against Allu Arjun. She acted along with Allu Arjun as heroine in Sarinodu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X