"ಮುಟ್ಟಿದ್ರೆ, ಕಿಸ್ ಕೊಟ್ರೆ.. ನಾಗ ಚೈತನ್ಯ ಕ್ಷಮಿಸಿ ಅಂತಾರೆ": 'ಬಂಗಾರ್‌ರಾಜು' ನಟಿ ದಕ್ಷಾ ನಗರ್ಕರ್

By ಫಿಲ್ಮಿಬೀಟ್ ಡೆಸ್ಕ್

ನಾಗಚೈತನ್ಯ ಹಾಗೂ ಸಮಂತಾ ಇಬ್ಬರು ವಿಚ್ಛೇದನ ನೀಡಿದ ದಿನದಿಂದ ಇಲ್ಲಿವರೆಗೂ ಆ ಟಾಪಿಕ್ ಹಾಟ್ ಆಗಿಯೇ ಇದೆ. ದಿನದಿಂದ ದಿನಕ್ಕೆ ಇಬ್ಬರೂ ಮರೆಯಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಇಬ್ಬರ ಅಭಿಮಾನಿಗಳು ಅದಕ್ಕೆ ಬಿಡುತ್ತಲೇ ಇಲ್ಲ.

ಕೆಲವು ದಿನಗಳ ಹಿಂದಷ್ಟೇ ನಾಗಚೈತನ್ಯ ಬಗ್ಗೆ ಸಮಂತಾ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿತ್ತು. ಬಳಿಕ ಸ್ವತ: ಸಮಂತಾ ಇದು ಸುಳ್ಳು ಸುದ್ದಿ ಎಂದು ಹೇಳಿಕೆ ಕೊಟ್ಟಿದ್ದರು. ಹೀಗೆ ಇಬ್ಬರ ನಡುವಿನ ವಿಚ್ಛೇದನ ಪ್ರಸಂಗ ಪ್ರಕರಣ ಯಾವುದಾದರೂ ಒಂದು ರೀತಿಯಲ್ಲಿ ಚರ್ಚೆಯಲ್ಲಿರುತ್ತೆ.

ಈ ಮಧ್ಯೆ ಟಾಲಿವುಡ್ ನಟಿಯೊಬ್ಬರು ನಾಗ ಚೈತನ್ಯ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇವರಿಬ್ಬರೂ 'ಬಂಗರ್‌ರಾಜು' ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಂದ್ಹಾಗೆ, ನಾಗ ಚೈತನ್ಯ ಬಗ್ಗೆ ಮಾತಾಡಿರೋ ಆ ನಟಿಯೇ ದಕ್ಷಾ ನಗರ್ಕರ್. ಕಳೆದೆರಡು ದಿನಗಳಿಂದ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

Actress Daksha Nagarkar Revealed Naga Chaitanya Say Sorry If he touched or kissed her

"ಮುಟ್ಟಿದ್ರೆ, ಕಿಸ್ ಕೊಟ್ರೆ.. ಕ್ಷಮಿಸಿ ಅಂತಾರೆ"

'ಬಂಗಾರ್‌ರಾಜು' ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ಹಾಡೊಂದರಲ್ಲಿ ದಕ್ಷಾ ನಗರ್ಕರ್ ಹೆಜ್ಜೆ ಹಾಕಿದ್ದರು. ಆ ವೇಳೆ ನಾಗಚೈತನ್ಯ ಜೊತೆ ನಟಿಸಿದ ಅನುಭವವನ್ನು ಇತ್ತೀಚೆಗೆ 'ರಾವಣಾಸುರ' ಸಿನಿಮಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. " ನಾಗ ಚೈತನ್ಯ ತುಂಬಾನೇ ಕೂಲ್. ಅವರೊಂದಿಗೆ ನಟಿಸಿದ ದಿನಗಳು ಮರೆಯುವಂತೆಯೇ ಇಲ್ಲ. ಯಾವಾಗಲೂ ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು" ಎಂದು ದಕ್ಷಾ ನಗರ್ಕರ್ ಹೇಳಿದ್ದಾರೆ.

"ನಾಗ ಚೈತನ್ಯ ಹಾಗೂ ಅಪ್ಪುಗೆ ದೃಶ್ಯಗಳು ಮುಗಿದ ಬಳಿಕ ಕ್ಷಮಿಸಿ ಎನ್ನುತ್ತಿದ್ದರು. ಅಂತಹ ವ್ಯಕ್ತಿ ಅವರು." ದಕ್ಷಾ ನಗರ್ಕರ್ ಹಾಡಿ ಹೊಗಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶೋಭಿತಾ ಜೊತೆ ಏನ್ ಕಥೆ?

ಸಮಂತಾರಿಂದ ಬೇರೆಯಾದ ಬಳಿಕ ನಾಗ ಚೈತನ್ಯ ಒಂಟಿಯಾಗಿದ್ದಾರೆ. ಆದರೂ, ಇತ್ತೀಚೆಗೆ ಪೊನ್ನಿಯನ್ ಸೆಲ್ವನ್ ನಟಿ ಶೋಭಿತಾ ಜೊತೆ ನಾಗ ಚೈತನ್ಯ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಒಟ್ಟಿಗೆ ಲಂಡನ್‌ನಲ್ಲಿ ಡಿನ್ನರ್‌ಗೆ ಹೋಗಿದ್ದ ಫೋಟೊ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ನಾಗಚೈತನ್ಯ ಅಥವಾ ಶೋಭಿತಾ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ.

ಸದ್ಯ ನಾಗ ಚೈತನ್ಯ ಸಿನಿಮಾ ಕರಿಯರ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕ ವೆಂಕಟ್ ಪ್ರಭು ಜೊತೆ 'ಕಸ್ಟಡಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದು, ಅರವಿಂದ್ ಸ್ವಾಮಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದಕ್ಷ ನಗರ್ಕರ್ ಟಾಲಿವುಡ್‌ನ ಯೂತ್ ಫೇಸ್

ನಾಗ ಚೈತನ್ಯನನ್ನು ಹೊಗಳಿ ಅಟ್ಟಕ್ಕೆ ಏರಿಸಿರೊ ನಟಿಯ 'ರಾವಣಾಸುರ' ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ದಕ್ಷಾ ನಗರ್ಕರ್ ಮಾಸ್ ಮಹಾರಾಜ ರವಿತೇಜಾ ಜೊತೆ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 7ರಂದು ತೆರೆಕಂಡಿರೋ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

Actress Daksha Nagarkar Revealed Naga Chaitanya Say Sorry If he touched or kissed her

ಈಗಾಗಲೇ ದಕ್ಕಾ ನಗರ್ಕರ್ 'ಜೊಂಬಿ ರೆಡ್ಡಿ', 'ಬಂಗಾರರಾಜು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ ಮಂದಿನೂ ಈಕೆಯನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ಟಾಲಿವುಡ್‌ನ ಗಟ್ಟಿಯಾಗಿ ನೆಲೆಯೂರುವುದಕ್ಕೆ ಕಸರತ್ತು ನಡೆಸಿದ್ದಾರೆ.

More from Filmibeat

English summary
Actress Daksha Nagarkar Revealed Naga Chaitanya Say Sorry If he touched or kissed her, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X