ಮಿನಿಸ್ಟರ್ ಜೊತೆ ಬೈಕ್ ಸವಾರಿ ಮಾಡಿದ ನಟಿ ಈಶಾ ರೆಬ್ಬಾ
ತೆಲಂಗಾಣ ಸಾರಿಗ ಸಚಿವ ಪುವ್ವಾಡ ಅಜಯ್ ಕುಮಾರ್ ಜೊತೆ ಯುವ ನಟಿ ಈಶಾ ರೆಬ್ಬಾ ಬೈಕ್ ಸವಾರಿ ಮಾಡಿದ್ದಾರೆ. ಇಬ್ಬರು ಬೈಕ್ ಮೇಲೆ ಹೋಗುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾರಿಗೆ ನಿಯಮಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲು, ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲು ಸಾರಿಗೆ ಇಲಾಖೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದ ನಟಿ ಈಶಾ ರೆಬ್ಬಾ ಮಂತ್ರಿ ಜೊತೆ ಬೈಕ್ ಸವಾರಿ ಮಾಡಿ ಗಮನ ಸೆಳೆದರು. ಜನವರಿ 27 ರಿಂದ ಫೆಬ್ರವರಿ 2ನೇ ತಾರೀಖಿನವರೆಗೂ ಈ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ಮಂತ್ರಿ ಮತ್ತು ನಟಿ ಪಾಲ್ಗೊಂಡಿದ್ದರು.

ಸದ್ಯ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ಈಶಾ ರೆಬ್ಬಾ ಕನ್ನಡಕ್ಕೂ ಎಂಟ್ರಿಯಾಗಿದ್ದಾರೆ. ಶಿವರಾಜ್ ಕುಮಾರ್ ನಟಿಸಲಿರುವ 'ಎಸ್ ಆರ್ ಕೆ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
2013ರಲ್ಲಿ ಬಿಡುಗಡೆಯಾಗಿದ್ದ ಅಂತಕು ಮುಂದು ಆ ತರುವಾತ ಸಿನಿಮಾದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ ನಟಿ ತಮಿಳಿನ ಓಯ್, ತೆಲುಗಿನ ಬ್ರಾಂಡ್ ಬಾಬು, ಅರವಿಂದ ಸಮೇತ ಹಾಗೂ ಸವ್ಯಸಾಚಿ ಅಂತಹ ಚಿತ್ರಗಳಲ್ಲಿ ಈಶಾ ರೆಬ್ಬಾ ನಟಿಸಿದ್ದಾರೆ.


Click it and Unblock the Notifications