"ಮದುವೆ ಬೇಡ, ಮಕ್ಕಳು ಬೇಕು, ಮಕ್ಕಳನ್ನು ಹೇಗೆ ಬೇಕಾದರೂ ಪ್ರೊಡ್ಯೂಸ್ ಮಾಡಬಹುದು" ಎಂದ ಫರಿಯಾ

ಅದ್ಯಾಕೋ ಬರ್ತಾ ಬರ್ತಾ ಸಾಕಷ್ಟು ಜನ ಮದುವೆ ಆಗದೇ ಒಬ್ಬೊಂಟಿಯಾಗಿ ಜೀವನ ಸಾಗಿಸಲು ಇಷ್ಟಪಡುತ್ತಿದ್ದಾರೆ. ಸಿನಿಮಾ ಸೆಲೆಬ್ರೆಟಿಗಳು ಇದ್ದಕ್ಕೆ ಹೊರತಲ್ಲ. 40 ವರ್ಷ, 50 ವರ್ಷ ವಯಸ್ಸು ದಾಟಿದ ನಟಿ, ನಟಿಯರು ಇನ್ನು ಮದುವೆ ಆಗದೇ ಉಳಿದುಬಿಟ್ಟಿದ್ದಾರೆ. ಕೆಲವರಂತೂ ಮದುವೆನೇ ಬೇಡ ಎಂದು ಪದೇ ಪದೆ ಹೇಳುತ್ತಿದ್ದಾರೆ.

ತೆಲುಗು ನಟಿ ಫರಿಯಾ ಅಬ್ದುಲ್ಲಾ ಕೂಡ ಮದುವೆ ಬೇಡ ಎಂದಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆಕೆ ಮದುವೆ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. 'ಜಾತಿ ರತ್ನಾಲು' ಎನ್ನುವ ತೆಲುಗು ಸಿನಿಮಾ ಮೂಲಕ ಫರಿಯಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಚಿತ್ರದಲ್ಲಿ ಅಮಾಯಕ ವಕೀಲೆಯ ಪಾತ್ರದಲ್ಲಿ ಆಕೆಯ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಬಳಿಕ ಮೋಸ್ಟ್ 'ಎಲಿಜಬೆಲ್ ಬ್ಯಾಚ್ಯುಲರ್' ಚಿತ್ರದ ಅಥಿತಿ ಪಾತ್ರದಲ್ಲಿ ಮಿಂಚಿದ್ದರು.

Actress Faria Abdullah interesting comments on marriage and children

'ಜಾತಿ ರತ್ನಾಲು' ಬಿಟ್ಟರೆ ಫರಿಯಾ ನಟಿಸಿಸ ಯಾವುದೇ ಸಿನಿಮಾ ಸದ್ದು ಮಾಡಲಿಲ್ಲ. 'ಬಂಗಾರ್ರಾಜು' ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರು. 'ಲೈಕ್ ಶೇರ್ & ಸಬ್‌ಸ್ಕ್ರೈಬ್' ಎನ್ನುವ ಮತ್ತೊಂದು ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದರು. ರವಿತೇಜಾ ನಟನೆಯ 'ರಾವಣಾಸುರ' ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಕಳೆದ ವಾರ ತೆರೆಕಂಡ 'ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿ ನರೇಶ್ ಜೊತೆ ನಟಿಸಿದ್ದಾರೆ. ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ.

ಫರಿಯಾ ಅಬ್ದುಲ್ಲಾ ಹೋದಲ್ಲಿ ಬಂದಲ್ಲಿ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ನನಗಿನ್ನು 25 ವರ್ಷ ವಯಸ್ಸು. ಮದುವೆಗೆ ಇನ್ನು ಬಹಳ ಸಮಯ ಇದೆ ಎಂದು ಹೇಳಿ ಕೇಳಿ ಸುಸ್ತಾಗಿದ್ದಾರೆ. ಇದೆಲ್ಲದರ ನಡುವೆ ಮದುವೆ ಬೇಡ ಮಕ್ಕಳು ಮಾತ್ರ ಬೇಕು ಎಂದು ಆಕೆ ಹೇಳಿರುವುದು ಈಗ ವೈರಲ್ ಆಗುತ್ತಿದೆ. "ನನಗೆ ಮದುವೆ ವ್ಯವಸ್ಥೆಯಲ್ಲಿ ಅಷ್ಟೊಂದು ನಂಬಿಕೆ ಇಲ್ಲ. ನಾನು ಖಚಿತವಾಗಿ ಮದುವೆಯಾಗಬೇಕು ಎಂದುಕೊಂಡಿಲ್ಲ. ಮದುವೆ ಆದ್ರೆ ಆಗುತ್ತೆ ಇಲ್ಲದಿದ್ದರೆ ಇಲ್ಲ. ಒಟ್ನಲ್ಲಿ ಮದುವೆಯ ಬಗ್ಗೆ ಯೋಚಿಸಲಿಲ್ಲ" ಎಂದಿದ್ದಾರೆ.

"ಮದುವೆ ಬೇಡ ಆದರೆ ನನಗೆ ಮಕ್ಕಳು ಅಂದ್ರೆ ಬಹಳ ಇಷ್ಟ. ತಾಯಿ ಆಗ್ತೀನಿ. ಆದರೆ ಮದುವೆ ಬಗ್ಗೆ ಯೋಚಿಸಬೇಕು. ಮಕ್ಕಳನ್ನು ಹೇಗೆ ಬೇಕಾದರೂ ಪ್ರೊಡ್ಯೂಸ್ ಮಾಡಬಹುದು. ಆದರೆ ಮಕ್ಕಳನ್ನು ಸಾಕಿ ಬೆಳೆಸುವುದರಲ್ಲಿ ಕಂಡಿತ ತಂದೆಯ ಜವಾಬ್ದಾರಿ ಇರುತ್ತದೆ. ಆದರೆ ಮದುವೆಯ ಪರಿಕಲ್ಪನೆ ನನಗೆ ಭಯ ಹುಟ್ಟಿಸುತ್ತದೆ" ಎಂದು ಫರಿಯಾ ಹೇಳಿದ್ದಾರೆ.

Actress Faria Abdullah interesting comments on marriage and children

ಮಕ್ಕಳನ್ನು ಪಡೆಯಲು ಸೆಲೆಬ್ರೆಟಿಗಳು ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಸಾರೋಗಸಿ ವಿಧಾನವಂತೂ ಬಹಳ ಜನಪ್ರಿಯವಾಗಿಬಿಟ್ಟಿದೆ. ಕೆಲ ನಟಿಯರನ್ನು ಎಗ್‌ ಫ್ರೀಸಿಂಗ್ ಪದ್ಧತಿಯ ಮೊರೆ ಹೋಗುತ್ತಿದ್ದಾರೆ. ಬಹಳ ತಡವಾಗಿ ಮದುವೆ ಆಗಲು ನಿರ್ಧರಿಸಿದವರು ಅಂಡಾಣು ಸಂರಕ್ಷಣೆ ಮಾಡಿ ನಿಧಾನವಾಗಿ ಮಗು ಪಡೆಯಲು ಮನಸ್ಸು ಮಾಡಿದ್ದಾರೆ.

ಇತ್ತೀಚೆಗೆ ನಟಿ ಮೃಣಾಲ್ ಠಾಕೂರ್ ಎಗ್‌ ಫ್ರೀಸಿಂಗ್ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ನಟಿ ಮೆಹ್ರೀನ್ ಪಿರ್ಜಾದಾ ತಮ್ಮ ಎಗ್‌ ಫ್ರೀಸಿಂಗ್ ಪ್ರಕ್ರಿಯೆಯ ವಿಡಿಯೋ ಹಂಚಿಕೊಂಡಿದ್ದರು. ಹೀಗೆ ಸೆಲೆಬ್ರೆಟಿಗಳು ಮಕ್ಕಳನ್ನು ಪಡೆಯುವ ವಿಚಾರದಲ್ಲಿ ನಾನಾ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. 'ಆ ಒಕ್ಕಟಿ ಅಡಕ್ಕು' ಬಳಿಕ 'ವಲ್ಲಿ ಮಯಿಲ್' ಎನ್ನುವ ತಮಿಳು ಚಿತ್ರದಲ್ಲಿ ಫರಿಯಾ ಅಬ್ದುಲ್ಲಾ ನಟಿಸುತ್ತಿದ್ದಾರೆ.

More from Filmibeat

English summary
Faria Abdullah Reveals she Want Kids But not ready to marry;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X