ಹಂಸ ನಂದಿನಿಗೆ ಸ್ತನ ಕ್ಯಾನ್ಸರ್: ಭಾವುಕ ಪತ್ರ ಬರೆದ ನಟಿ!
ನಟಿ ಹಂಸ ನಂದಿನಿ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತದೆ. ಇಲ್ಲವಾದರೆ ಕನ್ನಡದಲ್ಲಿ ಬಂದ 'ಮೋಹಿನಿ 88888' ಚಿತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಈಗ ಈ ನಟಿಯ ಬಗ್ಗೆ ಮಾತನಾಡಲು ಕಾರಣ ಆಕೆ ಅನಾರೋಗ್ಯಕ್ಕೆ ತುತ್ತಾಗಿರುವು. ಈ ವಿಚಾರವನ್ನು ಸ್ವತಃ ಆಕೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆಕೆಗೆ ಆಗಿರುವುದು ಏನು ಎನ್ನುವ ಮಾಹಿತಿ ಇಲ್ಲಿದೆ ಮುಂದೆ ಓದಿ..
ಹಂಸ ನಂದಿನಿ ಇತ್ತೀಚೆಗೆ ಸಿನಿಮಾಗಳಿಗಿಂತಲೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿದ್ದರು. ಅವರು ಹಾಟ್ ಫೊಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಹೆಚ್ಚು ಗಮನ ಸೆಳೆಯುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಹಂಸ ನಂದಿನಿ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿದ್ದರು. ಅಂದರೆ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಇರಲಿಲ್ಲ.
ಈಗ ಇದ್ದಕ್ಕಿದ್ದ ಹಾಗೆ ತಮ್ಮ ಅನಾರೋಗ್ಯದ ವಿಚಾರವನ್ನು ಹಂಚಿಕೊಂಡು ಶಾಕ್ ನೀಡಿದ್ದಾರೆ. ಕಾರಣ ಹಂಸ ನಂದಿನಿ ಅವರು ಸಾಮಾನ್ಯ ರೋಗಕ್ಕೆ ತುತ್ತಾಗಿಲ್ಲ. ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತಿದ್ದಾರೆ. ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಾ ಇದ್ದಾರೆ.
ಕಪ್ಪು ಬಿಳುಪಿನ ಫೋಟೊ ಹಂಚಿಕೊಂಡ ಹಂಸ ನಂದಿನಿ!
ನಟಿ ಹಂಸ ನಂದಿನಿ ತಮ್ಮ ಅನಾರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಡಿಕೊಂಡಿದ್ದಾರೆ. ಈಗಾಗಲೇ ಅವರು ಚಿಕಿತ್ಸೆ ಆರಂಭಿಸಿ ಹಲವು ದಿನಗಳು ಕಳೆದಿವೆ. ಸದ್ಯ ಆಕೆ ಇರುವ ಪರಿಸ್ಥಿತಿಯನ್ನು ಫೋಟೊ ಹಂಚಿಕೊಳ್ಳುವ ಮೂಲಕ ಹೇಳಿ ಕೊಂಡಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಅವರ ತಲೆ ಕೂದಲನ್ನು ಬೋಳಿಸಲಾಗಿದೆ. ಕಪ್ಪು ಮತ್ತು ಬಿಳುಪಿನ ಫೋಟೊ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಸಿನಿಮಾ ಮಂದಿ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಭಾವುಕ ಸಂದೇಶ ಬರೆದು ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ನಟಿ!
ಫೋಟೊ ಹಂಚಿಕೊಳ್ಳುವುದರ ಜೊತೆಗೆ ಹಂಸ ಅವರ ಸದ್ಯ ಯಾವ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಎಷ್ಟು ದಿನಗಳೂ ಚಿಕಿತ್ಸೆ ಪಡೆಯ ಬೇಕು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಜೀವನ ನನಗೆ ಏನು ಕೊಟ್ಟರು ಪರವಾಗಿಲ್ಲ, ಇದು ಅತ್ಯಂತ ಕೆಟ್ಟದ್ದು ಅನಿಸಿದರು ಪರವಾಗಿಲ್ಲ, ಆದರೆ ಇದಕ್ಕೆ ಸಾಕ್ಷಿ ಆಗಲು ನಾನು ಇಷ್ಟ ಪಡುವುದಿಲ್ಲ. ಭಯ ನನ್ನನ್ನು ಆಳಲು ನಾನು ಬಿಡುವುದಿಲ್ಲ, ಧೈರ್ಯ ಮತ್ತು ಪ್ರೀತಿಯಿಂದ ನಾನು ಮುಂದುವರೆಯುತ್ತೇನೆ, ನಾಲ್ಕು ತಿಂಗಳಿನಿಂದ ಚಿಕಿತ್ಸೆ ನಡೆಯುತ್ತಿದೆ. ಈ ಹಿಂದೆ ಖಾಯಿಲೆಯಿಂದಾಗಿ ಅಮ್ಮನನ್ನು ಕಳೆದು ಕೊಂಡ ಕಹಿ ನೆರಳಿನಲ್ಲಿ ಇದ್ದಿದ್ದರಿಂದ ಭಯ ಆಗಿತ್ತು. ಆದರೆ ಬೇಗನೆ ನನ್ನ ಕಾಯಿಲೆ ಗುರುತಿಸಲ್ಪಟ್ಟಿದ್ದು, ವೈದ್ಯರು ಭರವಸೆ ನೀಡಿದ್ದಾರೆ". ಎಂದು ಸುದೀರ್ಘ ಪತ್ರ ಬರೆದು ಹಂಚಿಕೊಂಡಿದ್ದಾರೆ.

2004ರಿಂದ ಚಿತ್ರರಂಗದಲ್ಲಿ ಹಂಸ ನಂದಿನಿ ಸಕ್ರಿಯ!
ಹಂಸ ನಂದಿನಿ 2004ರಿಂದ ಚಿತ್ರರಂಗದಲ್ಲಿ ಸಕ್ರಿಯ ಆಗಿದ್ದಾರೆ. ಹಲವು ಚಿತ್ರಗಳ ವಿಶೇಷ ಹಾಡಿನಲ್ಲಿ ಹಂಸ ಮಸ್ತ್ ಡ್ಯಾನ್ ಮಾಡಿದ್ದಾರೆ. ಪ್ರಭಾಸ್ ಅಭಿನಯದ 'ಮಿರ್ಚಿ' ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಹಂಸ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಈಕೆ ತೆಲುಗಿನಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ 'ಮೋಹಿನಿ 8888' ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಆಗ ಒಂದು ಟ್ರೆಂಡ್ ಹುಟ್ಟು ಹಾಕಿದ್ದರು. ಟೈಟಲ್‌ನಲ್ಲಿ ಇರುವ ನಂಬರ್‌ಗೆ ಕಾಲ್ ಮಾಡಿದರೆ ಮೋಹಿನಿಯ ಧ್ವನಿ ಕೇಳುತ್ತಿತ್ತು. ಇದು ಚಿತ್ರ ಪ್ರಚಾರದ ಒಂದು ಭಾಗ ಆಗಿತ್ತು. ತೆಲುಗಿನ ಸಾಕಷ್ಟು ಚಿತ್ರಗಳಲ್ಲಿ ಈಕೆ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕ್ಯಾನ್ಸರ್‌ನಿಂದ ಬಳಲಿದ ಹಲವು ಸಿನಿಮಾ ತಾರೆಯರು!
ಸಾಕಷ್ಟು ಸಿನಿಮಾ ತಾರೆಯರು ಕ್ಯಾನ್ಸರ್‌ನಿಂದ ಬಳಲಿದ್ದಾರೆ. ಹಲವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಬಾಲಿವುಡ್‌ನ ತಹಿರಾ ಕಶ್ಯಪ್ ಕೂಡ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಟಿ ಸೋನಾಲಿ ಬೇಂದ್ರೆ, ಲೀಸಾ ರೇ, ಮನಿಶಾ ಕೊಯಿರಾಲಾ, ಅನುರಾಗ್ ಬಸು, ಇರ್ಫಾನ್ ಖಾನ್ ಸೇರಿದಂತೆ ಹಲವು ತಾರೆಯರು, ಹಲವು ವಿಧದ ಕ್ಯಾನ್ಸರ್‌ನಿಂದ ಬಳಲಿದ್ದಾರೆ. ಚಿಕಿತ್ಸೆ ಪಡೆದು ಕ್ಯಾನ್ಸರ್‌ನಿಂದ ಪಾರಾಗಿದ್ದಾರೆ.


Click it and Unblock the Notifications











