Hebah Patel: ನಿಮ್ಮ ಮೂಡ್ ಚೆನ್ನಾಗಿದ್ಯಾ? ಎಂದ ನಿರೂಪಕ: ಮೈಕ್ ಕಿತ್ತು ಬಿಸಾಕಿ ಹೋದ 'ಅಧ್ಯಕ್ಷ' ನಟಿ ಹೆಬ್ಬಾ ಪಟೇಲ್
ಮುಂಬೈ ಬ್ಯೂಟಿ ಹೆಬ್ಬಾ ಪಟೇಲ್ ಸೌತ್ ಸಿನಿಮಾಗಳಲ್ಲಿ ಮಿಂಚಿದ್ದೇ ಹೆಚ್ಚು. ಕನ್ನಡದ 'ಅಧ್ಯಕ್ಷ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸಿ ಗೆದ್ದರು. 'ಕುಮಾರಿ 21F' ಚಿತ್ರದಲ್ಲಿ ಕೊಂಚ ಬೋಲ್ಡ್ ಆಗಿಯೇ ನಟಿಸಿ ಸಿನಿರಸಿಕರ ಹುಬ್ಬೇರಿಸಿದ್ದರು.
'ದಿ ಗ್ರೇಟ್ ಇಂಡಿಯನ್ ಸೂಸೈಡ್' ಎನ್ನುವ ವೆಬ್ ಸೀರಿಸ್‌ನಲ್ಲಿ ಸದ್ಯ ಹೆಬ್ಬಾ ನಟಿಸಿದ್ದಾರೆ. ಈ ವಾರವೇ ಅಹಾ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಈ ಸೀರಿಸ್ ಸ್ಟ್ರಿಮಿಂಗ್ ಆಗಲಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದ್ದಾರೆ. ಲೀಡ್ ರೋಲ್‌ನಲ್ಲಿ ನಟಿಸಿರುವ ಹೆಬ್ಬಾ ಸಂದರ್ಶನಗಳಲ್ಲಿ ಭಾಗಿಯಾಗಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರೂಪಕನ ಪ್ರಶ್ನೆಗೆ ನಟಿ ಹೆಬ್ಬಾ ಪಟೇಲ್ ಗರಂ ಆಗಿದ್ದಾರೆ. ಕೋಪಗೊಂಡು ಮಾತನಾಡದೇ ಎದ್ದು ಹೊರಟುಬಿಟ್ಟಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗ್ತಿದೆ. ಹೆಬ್ಬಾ ಪಟೇಲ್ ಹಿಟ್ ಸಿನಿಮಾ ಕೊಟ್ಟು ಬಂದು ಬಹಳ ದಿನಗಳೇ ಕಳೆದಿವೆ. 'ಕುಮಾರ್ 21F' ಬಳಿಕ' ಬಳಿಕ ಯಾವುದೇ ಸಕ್ಸಸ್ ಸಿಗಲಿಲ್ಲ. ಆಕೆಗೆ ಹೆಚ್ಚು ಹೆಚ್ಚು ಬೋಲ್ಡ್ ಪಾತ್ರಗಳೇ ಅರಸಿ ಬರ್ತಿದೆ. ಆದರೆ ಎಷ್ಟೇ ಬಿಂದಾಸ್ ಆಗಿ ನಟಿಸಿದರೂ ಪ್ರಯೋಜನವಾಗುತ್ತಿಲ್ಲ. ಕಳೆದ ವರ್ಷ 'ಒಡೆಲಾ ರೈಲ್ವೆ ಸ್ಟೇಷನ್' ಮೂಲಕ ಓಟಿಟಿ ವೀಕ್ಷಕರನ್ನು ರಂಜಿಸಿದ್ದರು. ಡಿ-ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದರು.
ಸದ್ಯ 'ದಿ ಗ್ರೇಟ್ ಇಂಡಿಯನ್ ಸೂಸೈಡ್' ವೆಬ್ ಸೀರಿಸ್ ಪ್ರಚಾರಕ್ಕಾಗಿ ಒಂದು ಯೂಟ್ಯೂಬ್ ಚಾನಲ್‌ಗೆ ಹೆಬ್ಬಾ ಪಟೇಲ್ ಸಂದರ್ಶನ ನೀಡಿದ್ದಾರೆ. ಆದರೆ ಸಂದರ್ಶದ ಆರಂಭದಲ್ಲೇ ನಿರೂಪಕ ಕೇಳಿದ ಪ್ರಶ್ನೆಗೆ ಆಕೆ ಬೇಸರಗೊಂಡಿದ್ದಾರೆ. ಯಾಕೆ ಹೀಗೆ ಕೇಳ್ತಿದ್ದೀರಾ? ಎಂದಾಗ ಏನಾಯ್ತು? ಎಂದು ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ನಿರೂಪಕ ಕೇಳಿದ್ದು ಹೆಬ್ಬಾ ತಾಳ್ಮೆ ಕಳೆದುಕೊಂಡಿದ್ದಾರೆ.
ಸಂದರ್ಶನವನ್ನು ಪ್ರಾರಂಭಿಸಲು ನಿರೂಪಕ ನಿಮ್ಮ ಮೂಡ್ ಚೆನ್ನಾಗಿದ್ಯಾ? ಎಲ್ಲವೂ ಸರಿಯಾಗಿದೆ ತಾನೇ? ಎಂದು ಕೊಂಚ ವ್ಯಂಗ್ಯವಾಗಿ ಕೇಳಿದಂತೆ ಆಕೆಗೆ ಭಾಸವಾಗಿದೆ. ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದು ಹೆಬ್ಬಾ ಪಟೇಲ್ ಕೊಂಚ ಬೇಸರದಿಂದ ಹೇಳಿದ್ದಾತೆ. ಅರ್ಥವಾಗುತ್ತಿಲ್ಲ ಎಂದು ಹೇಳಿದರೂ ಮೂಡ್ ಚೆನ್ನಾಗಿದ್ಯಾ? ಎಲ್ಲಾ ಓಕೆನಾ? ಎಂದು ಆಂಕರ್ ಕೇಳುತ್ತಲೇ ಇದ್ದ. ಇದರಿಂದ ಆಕೆಗೆ ಯಾಕೋ ಕಸಿವಿಸಿ ಅನ್ನಿಸಿ, ನಾನು ಈ ಸಂದರ್ಶನದಲ್ಲಿ ಮಾತನಾಡಲ್ಲ ಎಂದು ಎದ್ದು ಹೊರಟುಬಿಟ್ಟಿದ್ದಾರೆ. ಮೈಕ್ ಕಿತ್ತು ಬಿಸಾಕಿ ಹೆಬ್ಬಾ ಹೊರಟಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೆಬ್ಬಾ ಹೀಗೆ ಸಂದರ್ಶನದ ವೇಳೆ ಕೋಪಗೊಂಡು ಎದ್ದು ಹೊರಟು ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದು ಫ್ರಾಂಕ್ ವಿಡಿಯೋ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಪಬ್ಲಿಸಿಟಿ ಗಿಮಿಕ್ ಎನ್ನುತ್ತಿದ್ದಾರೆ. ಆದರೆ ಆಕೆಯ ಅಭಿಮಾನಿಗಳು ಮಾತ್ರ ನಿಜವಾಗಿಯೂ ಆ ಕ್ಷಣದಲ್ಲಿ ಆಕೆ ಕೋಪಗೊಂಡಿದ್ದರು. ಇದು ನಿಜವಾಗಿ ನಡೆದ ಘಟನೆ ಎನ್ನುತ್ತಿದ್ದಾರೆ.
ಬಳಿಕ ಮತ್ತೆ ಹೆಬ್ಬಾ ಪಟೇಲ್ ವಾಪಸ್ ಬಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತದೆ ಎನ್ನಲಾಗ್ತಿದೆ. ಇನ್ನು ಹೆಬ್ಬಾ 'ಅಧ್ಯಕ್ಷ' ಸಿನಿಮಾ ಬಳಿಕ ಮತ್ತೆ ಕನ್ನಡದಲ್ಲಿ ನಟಿಸಲಿಲ್ಲ. ಮುಂಬೈನಲ್ಲಿ ಕನ್ನಡ ಮಾತನಾಡುವ ಮುಸ್ಲಿಂ ಕುಟುಂಬದಲ್ಲಿ ಹೆಬ್ಬಾ ಪಟೇಲ್ ಹುಟ್ಟಿದರು. 'ಅಧ್ಯಕ್ಷ' ಚಿತ್ರದಲ್ಲಿ ಶರಣ್ ಜೋಡಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.


Click it and Unblock the Notifications











