For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ: ಸಹ ನಟ-ನಟಿ ವಿರುದ್ಧ ಹೇಮಾ ದೂರು

  |

  ತೆಲುಗು ಚಿತ್ರರಂಗದ 'ಮಾ' ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಸಭ್ಯತೆಯ ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮಾ ಚುನಾವಣೆಗೆ ಸ್ಪರ್ಧಿಸಿರುವ ನಟಿ ಹೇಮಾ, ಸಹ ನಟಿ ಹಾಗೂ ನಟ ತಮ್ಮ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆ ಎಂದು ಮಾ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

  ಈ ಹಿಂದೆ ನಟಿ ಹೇಮಾರ ಕೆಲವು ತಿರುಚಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅವುಗಳ ವಿರುದ್ಧ ನಟಿ ಹೇಮಾ ಸೈಬರ್ ಪೊಲೀಸರಿಗೆ ದೂರು ನೀಡಿ ಅವುಗಳನ್ನು ತೆಗೆಸಿ ಹಾಕಿದ್ದರು. ಈಗ ಮಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಂಥಹಾ ಚಿತ್ರಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿವೆ.

  ಕೆಲವು ದಿನಗಳ ಹಿಂದೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದ ನಟಿ ಕರಾಟೆ ಕಲ್ಯಾಣಿ, ಹೇಮಾ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ತಮ್ಮ ಅಶ್ಲೀಲ ಚಿತ್ರಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ ಎಂದು ಹೇಮಾ ಸೈಬರ್ ಪೊಲೀಸರಿಗೆ ದೂರು ನೀಡಲು ಹೋಗಿದ್ದಾಗ ಸ್ವತಃ ಪೊಲೀಸರು, ನೀವೇ ಚಿಕ್ಕ-ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಕೈಯಲ್ಲಿ ಗ್ಲಾಸ್ ಹಿಡಿದು ನಿಂತಿದ್ದೀರ. ನಿಮ್ಮ ಚಿತ್ರಗಳೇ ಅಶ್ಲೀಲವಾಗಿವೆ. ಮೊದಲು ಅವನ್ನು ಡಿಲೀಟ್ ಮಾಡಿ ಎಂದಿದ್ದರು. ಆಗ ನಟ, ಮಾ ಪ್ರಸ್ತುತ ಅಧ್ಯಕ್ಷ ನರೇಶ್ ಸಹ ಅಲ್ಲಿ ಇದ್ದರು'' ಎಂದು ಕರಾಟೆ ಕಲ್ಯಾಣಿ ಆರೋಪಿಸಿದ್ದರು. ಕರಾಟೆ ಕಲ್ಯಾಣಿ ಸಹ ಈ ಬಾರಿ ಮಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಹೇಮಾರ ಸಿಂಡಿಕೇಟ್‌ರ ಎದುರಾಳಿ ಆಗಿದ್ದಾರೆ.

  ಚುನಾವಣಾ ಅಧಿಕಾರಿಗಳಿಗೂ ಪತ್ರ

  ಚುನಾವಣಾ ಅಧಿಕಾರಿಗಳಿಗೂ ಪತ್ರ

  ಈ ಕುರಿತು ಇದೀಗ ದೂರು ನೀಡಿರುವ ಹೇಮಾ, ''ಕರಾಟೆ ಕಲ್ಯಾಣಿ ಮತ್ತು ನರೇಶ್ ನನ್ನ ವ್ಯಕ್ತಿತ್ವದ ಬಗ್ಗೆ, ನನ್ನ ಖಾಸಗಿ ಬದುಕಿನ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. ಜೊತೆಗೆ ನನ್ನ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಪೊಲೀಸ್ ಠಾಣೆಯಲ್ಲಿ ಹೇಮಾ ದೂರು ನೀಡಿದ್ದಾರೆ.

  ನೀಚ ಹೇಳಿಕೆ ನೀಡಿದ್ದಾರೆ: ಹೇಮಾ ಆರೋಪ

  ನೀಚ ಹೇಳಿಕೆ ನೀಡಿದ್ದಾರೆ: ಹೇಮಾ ಆರೋಪ

  ದೂರು ನೀಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಹೇಮಾ, ''ಮಾ ಚುನಾವಣೆ ಸಂದರ್ಭದಲ್ಲಿ ನಟ-ನಟಿಯರ ವೈಯಕ್ತಿಕ ವಿಷಯಗಳನ್ನು ಮಾತನಾಡುವುದು ಹೆಚ್ಚಾಗಿದೆ. ಅದರಲ್ಲಿಯೂ ಈ ಯೂಟ್ಯೂಬ್‌ ಚಾನೆಲ್‌ಗಳು ಹೆಚ್ಚಾದ ಬಳಿಕವಂತೂ ಇಂಥಹಾ ಪ್ರಕರಣ ಹೆಚ್ಚಾಗುತ್ತಿದೆ. ಕರಾಟೆ ಕಲ್ಯಾಣಿ ಹಾಗೂ ನರೇಶ್ ನನ್ನ ವಿರುದ್ಧವೂ ಇಂಥಹಾ ಕೆಲವು ನೀಚ ಹೇಳಿಕೆಗಳನ್ನು ನೀಡಿದ್ದಾರೆ. ನಾನು ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡಿದ್ದೇನೆ ಎಂದಿದ್ದಾರೆ ಕರಾಟೆ. ನಾನು ಒಂದು ವೇಳೆ ಹಾಕಿಕೊಂಡಿದ್ದರೆ ಅವು ನನ್ನ ಬಟ್ಟೆ ನನ್ನ ಇಷ್ಟ. ಆದರೆ ನಾನು ಈ ವರೆಗೂ ಸಿನಿಮಾಗಳಲ್ಲಿ ಆಗಲಿ, ನಿಜ ಜೀವನದಲ್ಲಿ ಆಗಲಿ ಅಶ್ಲೀಲವಾಗಿ, ಸೆಕ್ಸಿಯಾಗಿ ವರ್ತಿಸಿಲ್ಲ. ಸಿನಿಮಾಗಳಲ್ಲಿ ಒಮ್ಮೆಯೂ ಅಶ್ಲೀಲ ಪಾತ್ರಗಳನ್ನು ಮಾಡಿಲ್ಲ'' ಎಂದಿದ್ದಾರೆ ಹೇಮಾ.

  ವಿಡಿಯೋ ಬಿಡುಗಡೆ ಮಾಡುತ್ತೀನೆಂದು ಬೆದರಿಕೆ

  ವಿಡಿಯೋ ಬಿಡುಗಡೆ ಮಾಡುತ್ತೀನೆಂದು ಬೆದರಿಕೆ

  ''ಕರಾಟೆ ಕಲ್ಯಾಣಿ ಸಹ ಒಬ್ಬ ಕಲಾವಿದೆ. ಆಕೆ ಬೇಕಾದರೆ ನನ್ನನ್ನು ಪ್ರಶ್ನೆ ಮಾಡಲಿ, 'ಮಾ' ಸಂಘಕ್ಕೆ ಏನು ಮಾಡಿದೆ? ಎಂದು ಪ್ರಶ್ನೆ ಮಾಡಲಿ, ಅದನ್ನು ಬಿಟ್ಟು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಆಕೆಗೆ ಹಕ್ಕೇನಿದೆ. ನನ್ನ ಬಳಿ ವಿಡಿಯೋಗಳಿದೆ, ಅದನ್ನು ಬಹಿರಂಗಗೊಳಿಸುತ್ತೇನೆ ಎಂದು ಬೆದರಿಕೆಗಳು ಹಾಕುವುದು ಬೇಡ, ಅಂಥಹಾ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ಆ ರೀತಿಯ ವಿಡಿಯೋಗಳಿದ್ದರೆ ಅವುಗಳನ್ನು ನೇರವಾಗಿ ಪೊಲೀಸರಿಗೆ ಕೊಡಲಿ, ನಾನು ತಪ್ಪು ಮಾಡಿದ್ದರೆ ಪೊಲೀಸರು ನನ್ನನ್ನು ಬಂಧಿಸುತ್ತಾರೆ. ಅದನ್ನು ಬಿಟ್ಟು ಹೀಗೆ ವೈಯಕ್ತಿಕ ದಾಳಿ ಮಾಡುವುದು ಸರಿಯಲ್ಲ'' ಎಂದಿದ್ದಾರೆ ಹೇಮಾ.

  ''ನೀನು ಯಾರನ್ನೊ ಪ್ರೇಮಿಸಿ ಮೋಸ ಹೋದಾಗ ನಾವು ಸಹಾಯ ಮಾಡಲಿಲ್ಲವೇ?''

  ''ನೀನು ಯಾರನ್ನೊ ಪ್ರೇಮಿಸಿ ಮೋಸ ಹೋದಾಗ ನಾವು ಸಹಾಯ ಮಾಡಲಿಲ್ಲವೇ?''

  ''ನಾನು ಮಾ ಸಂಘದಲ್ಲಿದ್ದಾಗ ಯಾರಿಗೆ ಏನು ಮಾಡಿದೆ ಎಷ್ಟು ಕಲಾವಿದರಿಗೆ ಸಹಾಯ ಮಾಡಿದೆ ಎಂದು ಕೇಳಲಿ ನಾನು ಹೇಳುತ್ತೇನೆ. ಕರಾಟೆ ಕಲ್ಯಾಣಿ ಬಗ್ಗೆ ಮಾತನಾಡಬೇಕೆಂದು ನಿಶ್ಚಯಿಸಿದರೆ ನನ್ನ ಬಳಿಯೂ ಸಾಕಷ್ಟು ವಿಷಯಗಳಿವೆ. ಕರಾಟೆ ಕಲ್ಯಾಣಿ ಅದ್ಯಾರನ್ನೋ ಪ್ರೇಮಿಸಿ ಮೋಸ ಹೋದಾಗ ನಾವು ಬಂದಿರಲಿಲ್ಲವೇ. ನಾವು ಬಂದು ಆಕೆಗೆ ಸಮಾಧಾನ ಹೇಳಿರಲಿಲ್ಲವೆ. ಸಹಾಯ ಮಾಡಿರಲಿಲ್ಲವೇ?'' ಎಂದು ಪ್ರಶ್ನಿಸಿದ್ದಾರೆ ಹೇಮಾ.

  English summary
  Actress Hema gave complaint against actor Naresh and Karate Kalyani. She said they targeting my personal life they threatening to release video of mine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X