ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೇ 'ಮದುವೆ' ಬಗ್ಗೆ ಮಾತನಾಡಿದ 'ಮಾಸ್ಟರ್ ಪೀಸ್' ಜ್ಯೋತಿ ರೈ..!
'ಬಂದೇ ಬರತಾವ ಕಾಲ'.. 'ಅನುರಾಗ ಸಂಗಮ'.. 'ಜೋಗುಳ'.. 'ಗೆಜ್ಜೆಪೂಜೆ'.. 'ಲವಲವಿಕೆ'.. 'ಕನ್ಯಾದಾನ'.. 'ಗೆಜ್ಜೆಪೂಜೆ'.. 'ಪ್ರೇರಣಾ'.. 'ಕಿನ್ನರಿ'.. 'ಮೂರು ಗಂಟು'.. 'ಕಸ್ತೂರಿ ನಿವಾಸ'.. ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾಗಿ, ಕನ್ನಡಿಗರ ಹೃದಯವನ್ನ ಗೆದ್ದವರು ಜ್ಯೋತಿ ರೈ.
ಆದರೆ.. ಅದೇನಾಯ್ತೋ ಗೊತ್ತ್ ಇಲ್ಲ. ಅವಕಾಶ.. ಹಣ.. ಕೀರ್ತಿ.. ಎಲ್ಲವನ್ನೂ ನೀಡಿದ್ದ ಕನ್ನಡದ ಕಿರುತೆರೆಯನ್ನ ಎಡಗಾಲಿನಲ್ಲಿ ಒದ್ದ ಜ್ಯೋತಿ ರೈ ಆ ನಂತರ ಸೀದಾ ಆಂಧ್ರಪ್ರದೇಶದ ಫ್ಲೈಟ್ ಹತ್ತಿದರು. ತೆಲುಗು ಕಿರುತೆರೆಯಲ್ಲಿ ಠಿಕಾಣಿ ಹೂಡಿದರು. ಕನ್ನಡ ಕಿರುತೆರೆ ಪ್ರೇಕ್ಷಕರ ದುರಾದೃಷ್ಟಾನಾ..? ಆಂಧ್ರದವರ ಅದೃಷ್ಟಾನಾ..? 'ಗುಪ್ಪೆಡಂತ ಮನಸು' ಧಾರಾವಾಹಿ ಇವರಿಗೆ ಹೈದ್ರಾಬಾದ್‌ನಲ್ಲಿ ಅಪಾರ ಯಶಸ್ಸನ್ನ ತಂದು ಕೊಟ್ಟಿತ್ತು. ಅಲ್ಲಿಂದಾಚೆ ತೆಲುಗಿನಲ್ಲಿಯೇ ಒಂದಾದ ಮೇಲೊಂದು ಧಾರಾವಾಹಿಯನ್ನ ಮಾಡಿದ ಜ್ಯೋತಿ ರೈ ಮೊನ್ನೆ ಮೊನ್ನೆ ವೈರಲ್ ಆದ ಅಶ್ಲೀಲ ವಿಡಿಯೋ ಮೂಲಕ ಕರ್ನಾಟಕದಲ್ಲಿ ಸದ್ದು ಮಾಡಿದರು.

ವೈರಲ್ ಆದ ಆ ಅಶ್ಲೀಲ ವಿಡಿಯೋ ನಿಜಕ್ಕೂ ಜ್ಯೋತಿ ರೈ ಅವರದ್ದೇನಾ..? ಅಥವಾ ಅದು ಡೀಪ್ ಫೇಕ್ ವಿಡಿಯೋನಾ..? ಅಥವಾ ಕಿರಾತಕರು ಜ್ಯೋತಿ ರೈ ಅವರ ಹೆಸರಿಗೆ ಮಸಿ ಬಳಿಯಲು ಮಾಡಿರುವ ಪ್ರಯತ್ನನಾ.. ? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆಯಾದರೂ ಸದ್ಯಕ್ಕೆ ಜ್ಯೋತಿ ರೈ, ಮದುವೆಯ ಕುರಿತು ಮಾತನಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಎಲ್ಲರ ಚಿತ್ತವನ್ನ ಕದಿದ್ದಾರೆ.
ಹೌದು, ಕನ್ನಡದಿಂದ ಕಾಣೆಯಾದ ನಂತರ ತೆಲುಗು ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಜ್ಯೋತಿ ರೈ, ಸದ್ಯಕ್ಕೆ ನಾಯಕಿಯಾಗಿ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟವನ್ನ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಹೆಸರು ಎ ಮಾಸ್ಟರ್ ಪೀಸ್. ಈ ಚಿತ್ರದ ನಿರ್ದೇಶಕ ಬೇರೆ ಯಾರು ಅಲ್ಲ ಬದಲಿಗೆ ಜ್ಯೋತಿ ರೈ ಅವರ ಎರಡನೇ ಗಂಡ ಸುಕು ಪೂರ್ವಜ್ ಅನ್ನುವುದು ವಿಶೇಷ. ಮೊನ್ನೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಇದೇ ಸಮಾರಂಭದಲ್ಲಿ ಜ್ಯೋತಿ ರೈ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದ ನಂತರ ಸುಕು ಪೂರ್ವಜ್ ನನ್ನ ಪತಿ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ.. ಅಸಲಿಗೆ 20ರ ಪ್ರಾಯದಲ್ಲಿಯೇ ಪದ್ಮನಾಭ್ ರೈ ಅವರ ಜೊತೆ ಜ್ಯೋತಿ ರೈ ಮದುವೆಯಾಗಿದ್ದರು. ಇವರ ಪ್ರೀತಿಯ ಸಂಕೇತ ಎನ್ನುವಂತೆ ಇಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಅದ್ಯಾರ ಕಣ್ಣು ಬಿತ್ತೋ..? ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.
ಹೀಗೆ ಪತಿಯಿಂದ ದೂರವಾದ ಜ್ಯೋತಿ ರೈ ಆ ನಂತರ ಕಂಡು ಬಂದಿದ್ದು ಇದೇ 'ಎ ಮಾಸ್ಟರ್ ಪೀಸ್' ಚಿತ್ರದ ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ. ಈ ಚಿತ್ರದ ಸಮಯದಲ್ಲಿ ಇಬ್ಬರ ನಡುವೆ ಆದ ಪ್ರೇಮಾಂಕುರ, ಇವರಿಬ್ಬರ ಚಿತ್ರಕ್ಕಿಂತ ಆಗ ಹೆಚ್ಚು ಸುದ್ದಿ ಮಾಡಿತ್ತು. ಇದಕ್ಕೆ ಪೂರಕವಾಗಿ ಕಳೆದ ವರ್ಷ ಜುಲೈ ಆಸು ಪಾಸಿನಲ್ಲಿ ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಸುಕು ಪೂರ್ವಜ್ ಅವರ ಹೆಸರನ್ನ ಸೇರಿಸಿಕೊಂಡರು. ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡಿದರು.

ಹೆಸರಿನಲ್ಲಿ ಆದ ಈ ಬದಲಾವಣೆಯನ್ನ ಕಂಡ ಅನೇಕರು ಜ್ಯೋತಿ ರೈ ಮತ್ತು ಸುಕು ಪೂರ್ವಜ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಮಾತನಾಡಿದರು. ಇನ್ನೂ ಕೆಲವರು ಮದುವೆಯಾಗದೇ ಒಂದೇ ಸೂರಿನಡಿ ಇಬ್ಬರು ಹಗಲು ರಾತ್ರಿ ಕಳೆಯುತ್ತಿದ್ದಾರೆ ಎಂದರು. ಈ ಚರ್ಚೆಯ ನಡುವೆ ಈ ವರ್ಷದ ಆರಂಭದಲ್ಲಿ ಸುಕು ಪೂರ್ವಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜೊತೆಗಿರುವ ಫೋಟೋ ಹಂಚಿಕೊಂಡ ಜ್ಯೋತಿ ರೈ ತಮ್ಮ ಬರಹದಲ್ಲಿ ಸುಕು ಪೂರ್ವಜ್ ಅವರನ್ನ 'ಪತಿ' ಅಂತಲೇ ಸಂಬೋಧಿಸಿದ್ದರು. ನಿಮ್ಮನ್ನ ಪತಿಯಾಗಿ ಪಡೆದ ನಾನೇ ಪುಣ್ಯವಂತೆ. ನಿಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳು ಡಾರ್ಲಿಂಗ್. ಲವ್ ಯೂ'' ಎಂದು ಸುಕು ಪೂರ್ವಜ್ ಕುರಿತಾಗಿ ಜ್ಯೋತಿ ರೈ ಬರೆದುಕೊಂಡಿದ್ದರು.
ನಾವಿಬ್ಬರು ಭೇಟಿಯಾಗಿ ಒಂದು ವರ್ಷ ಕಳೆದಿದೆ. ಅಂದಿನಿಂದ ಲೈಫ್ ಸಂಪೂರ್ಣವಾಗಿ ಬದಲಾಗಿದೆ. ನನಗೆ ಆಗುತ್ತಿರುವ ಫೀಲಿಂಗ್‌ನ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ನಿಮ್ಮ ಪ್ರೀತಿ, ಅಪ್ಪುಗೆ, ಮುತ್ತು, ಬೆಂಬಲ, ಪ್ರೋತ್ಸಾಹ, ಸಕಾರಾತ್ಮಕ ಯೋಚನೆಗಳಿಗೆ ಧನ್ಯವಾದಗಳು. ನಿಮ್ಮ ತಾಳ್ಮೆ, ಪ್ರಾಮಾಣಿಕತೆ, ಕಾಳಜಿಗೆ ಥ್ಯಾಂಕ್ಸ್. ನೀವು ನನ್ನ ಜೀವನವನ್ನ ಪರಿಪೂರ್ಣಗೊಳಿಸಿದ್ದೀರಿ. ನಿಮ್ಮನ್ನ ಪತಿಯಾಗಿ ಪಡೆದ ನಾನೇ ಪುಣ್ಯವಂತೆ. ನಿಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳು ಡಾರ್ಲಿಂಗ್. ಲವ್ ಯೂ ಎಂದು ಕೂಡ ಬರೆದುಕೊಂಡು ಸುಕು ಪೂರ್ವಜ್ ಅವರಿಗೆ ಶುಭಾಶಯವನ್ನ ಕೋರಿದ್ದರು ಜ್ಯೋತಿ ರೈ.

ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ .. ಸಭೆ ಸಮಾರಂಭದಲ್ಲಿ.. ಜ್ಯೋತಿ ರೈ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಸುಕು ಪೂರ್ವಜ್ ಅವರನ್ನ ನಾನು ಮದುವೆಯಾಗಿದ್ದೇನೆ ಎಂದು ಎಲ್ಲರೆದುರು ಸಾರ್ವಜನಿಕವಾಗಿ ಹೇಳಿರಲಿಲ್ಲ.
ಆದರೆ ಈಗ ಜ್ಯೋತಿ ರೈ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಾ ಈ ಚಿತ್ರದ ಮೂಲಕ ನನ್ನ ಬದುಕಿನ ದಿಕ್ಕು ಬದಲಾಯಿತು ಎಂದಿದ್ದಾರೆ. ಸುಕು ಪೂರ್ವಜ್ ಅವರನ್ನ ಪತಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇ ಅಂದಿದ್ದಾರೆ. ಇನ್ಮುಂದೆ ಹೆಚ್ಚೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸುವ ಭರವಸೆಯನ್ನೂ ಕೂಡ ಜ್ಯೋತಿ ರೈ ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಇಷ್ಟೇ ಅಲ್ಲ ಇದು ನನ್ನ ನಾನು ನಾಯಕಿಯಾಗಿ ಮಾಡ್ತಿರುವ ಮೊದಲ ಪ್ರಯತ್ನ ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಇರಲಿ ಎಂದು ಆಂಧ್ರಕ್ಕೆ ಕೈ ಮುಗಿದು ಮನವಿಯನ್ನೂ ಮಾಡಿಕೊಂಡಿದ್ದಾರೆ ಜ್ಯೋತಿ ರೈ
ಸದ್ಯಕ್ಕೆ ಜ್ಯೋತಿ ರೈ ಅವರ ಈ ಮನದಾಳದ ಮಾತುಗಳ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. ಕಿರುತೆರೆಯ ಮೂಲಕ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಜ್ಯೋತಿ ರೈ, ಹಿರಿತೆರೆಯಲ್ಲಿಯೂ ಅದೇ ಜಾದೂ ಮಾಡ್ತಾರೆ ಅನ್ನುವ ಪ್ರಶ್ನೆ ಕೂಡ ಅನೇಕರಿಗೆ ಕಾಡ್ತಿದೆ. ಇನ್ನೂ ಇವರ ಅಭಿಮಾನಿ ವಲಯದಲ್ಲಿ ತಮ್ಮ ನೆಚ್ಚಿನ ನಾಯಕಿ, ನಾಯಕಿಯಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸಂಭ್ರಮ ಮನೆ ಮಾಡಿದೆ. ಇದೆಲ್ಲದರ ನಡುವೆ ಜ್ಯೋತಿ ರೈ ಅವರ ಕಾರಣಕ್ಕೆ 'ಎ ಮಾಸ್ಟರ್ ಪೀಸ್' ಚಿತ್ರಕ್ಕೆ ವ್ಯಾಪಕವಾದ ಪ್ರಚಾರ ಕೂಡ ಸಿಕ್ತಿದೆ.


Click it and Unblock the Notifications











