ಮತ್ತೆ 6 ಫೋಟೊ ಹಂಚಿಕೊಂಡ ಜ್ಯೋತಿ ರೈ; 'ಟ್ಯಾಟೂ ಮತ್ತು ಪತಿ ಸಿಕ್ಕಾಪಟ್ಟೆ ಲಕ್ಕಿ' ಎಂದು ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿ ಜ್ಯೋತಿ ರೈ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತೆಲುಗು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಫೋಟೋಗಳಿಗೆ ನೆಟ್ಟಿಗರು ಕೂಡ ಕಾಮೆಂಟ್‌ಗಳನ್ನು ಮಾಡುತ್ತಾ ಇರುತ್ತಾರೆ.

ಜ್ಯೋತಿ ರೈ ಕರಾವಳಿ ಮೂಲದವರು. ಕನ್ನಡ ಕಿರುತೆರೆಯಿಂದಲೇ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ತೆಲುಗು ಕಿರುತೆರೆ ಕಡೆ ಮುಖ ಮಾಡಿದ್ದರು. ಅಲ್ಲಿ ಅವರಿಗೆ ಯಶಸ್ಸು ಸಿಕ್ಕಿತ್ತು. ಈ ಮಧ್ಯೆ ಕನ್ನಡದ ಕೆಲವು ಸಿನಿಮಾಗಳಲ್ಲೂ ಜ್ಯೋತಿ ರೈ ನಟಿಸಿ ಸೈ ಎನಿಸಿಕೊಂಡಿದ್ದರು. 38 ವರ್ಷದ ನಟಿ ತೆರೆಮೇಲೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡರೂ, ತೆರೆ ಹಿಂದೆ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ.

Actress Jyothi Rai shared new photo shoots netizens says husband is lucky

ಸದ್ಯ ಜ್ಯೋತಿ ರೈ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಖತ್ ಗ್ಲಾಮರ್ ಅವತಾರದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಜ್ಯೋತಿ ರೈ ಶೇರ್ ಮಾಡಿಕೊಂಡಿರುವ ಆರೂ ಫೋಟೋಗಳ ಬಗ್ಗೆನೂ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಬೋಲ್ಡ್‌ ಫೋಟೋಶೂಟ್‌ಗಳಿಂದಲೇ ಸದ್ದು ಮಾಡುತ್ತಿರುವ ಜ್ಯೋತಿ ರೈ ಮತ್ತೊಮ್ಮೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಬ್ಬ ಹರಿದಿನಗಳಲ್ಲಿ ಜ್ಯೋತಿ ರೈ ಸೀರೆಯುಟ್ಟು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ಕೆಲವು ದಿನಗಳಲ್ಲಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡು ಮತ್ತೆ ಹುಡುಗರ ಹೃದಯಕ್ಕೆ ಝಲ್ ಎಂದಿದ್ದಾರೆ.

ಮಿರ ಮಿರ ಮಿಂಚುವ ಕಾಸ್ಟ್ಯೂಮ್‌ನಲ್ಲಿ ನಟಿ ಜ್ಯೋತಿ ರೈ ಗ್ಲಾಮರ್ ಲುಕ್ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಆರು ಫೋಟೋಗಳಲ್ಲಿ ಯಾವುದು ಬೆಸ್ಟ್ ಅಂತ ತಾವೇ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾ ರೀಲ್ ಮಾಡಿ ಹಾಕಿದ್ದಾರೆ. ಈ ಗ್ಲಾಮರಸ್ ಫೋಟೋಗಳ ಬಗ್ಗೆ ನೆಟ್ಟಿಗರು ಮಜವಾಗಿ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಂದ್ಹಾಗೆ ನಟಿ ಜ್ಯೋತಿ ರೈ ಗೋಲ್ಡನ್ ಕಲರ್‌ನ ಬ್ಯಾಕ್ ಲೆಸ್ ಶಿಮ್ಮರ್ ಮಿನಿ ಡ್ರೆಸ್ ತೊಟ್ಟಿದ್ದಾರೆ. ಹಾಗೇ ಕ್ಯಾಮರಾಗೆ ತಮ್ಮ ಎದೆಯ ಮೇಲಿರುವ ಟ್ಯಾಟೂ ಕಾಣುವಂತೆ ಪೋಸ್ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜ್ಯೋತಿ ಇತ್ತೀಚೆಗೆ ಪೋಸ್ಟ್ ಮಾಡುತ್ತಿರುವ ಫೋಟೊಗಳಲ್ಲಿ ಸಖತ್ ಸ್ಲಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಶಾರ್ಟ್, ಗ್ಲಾಮರಸ್ ಫೋಟೊಗಳಿಗೆ ನೆಟ್ಟಿಗರು ಫಿದಾ ಆಗಿ ಹೀಗೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

"ಪೋಸ್ ಸಖತ್ ಆಗಿದೆ. ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದೀರಿ ಜ್ಯೋತಿ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ಇನ್ನೂ ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿ ಮೇಡಂ" ಎಂದು ಕನ್ನಡಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಬ್ಬರು ನೆಟ್ಟಿಗರು "ಟ್ಯಾಟು ಹಾಗೂ ನಿಮ್ಮ ಪತಿ ಇಬ್ಬರೂ ತುಂಬಾನೇ ಅದೃಷ್ಟವಂತರು" ಎಂದು ಹೇಳಿದ್ದಾರೆ. ಒಟ್ನಲ್ಲಿ ಜ್ಯೋತಿ ರೈ ಟ್ರೆಡಿಷನಲ್ ಲುಕ್‌ನಲ್ಲಿ ಬಂದರೂ, ಗ್ಲಾಮರಸ್ ಲುಕ್‌ನಲ್ಲಿ ಬಂದರೂ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದಾರೆ.

More from Filmibeat

English summary
Actress Jyothi Rai shared bold photos
Read more about: actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X