ಪ್ರಭಾಸ್ 'ಸಲಾರ್' ಚಿತ್ರದಲ್ಲಿ ಇರ್ತಾರಾ ಜ್ಯೋತಿಕಾ? ಇಲ್ಲಿದೆ ಮಾಹಿತಿ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಸಲಾರ್ ಸಿನಿಮಾದ ದಿನಕೊಂದು ಸುದ್ದಿ ಕೇಳಿಬರುತ್ತಿದೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದೆ.

ಸದ್ಯ ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಕೊರೊನಾ ಕಡಿಮೆ ಆಗುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಲು ಪ್ರಶಾಂತ್ ನೀಲ್ ತಂಡ ಸಿದ್ಧವಾಗಿದೆ. ಈ ನಡುವೆ ಚಿತ್ರದಲ್ಲಿ ದಕ್ಷಿಣದ ಖ್ಯಾತ ನಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಭಾಸ್ ಸಹೋದರಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಿಜಕ್ಕೂ ಜ್ಯೋತಿಕಾ ನಟಿಸುತ್ತಾರಾ? ಈ ಬಗ್ಗೆ ಮೂಲಗಳು ಏನು ಹೇಳುತ್ತಿವೆ? ಮುಂದೆ ಓದಿ..

'ಸಲಾರ್'ನಲ್ಲಿಲ್ಲ ಜ್ಯೋತಿಕಾ

'ಸಲಾರ್'ನಲ್ಲಿಲ್ಲ ಜ್ಯೋತಿಕಾ

ಸಲಾರ್ ಚಿತ್ರಕ್ಕೆ ಜ್ಯೋತಿಕಾ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜ್ಯೋತಿಕಾ ಸಲಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಚಿತ್ರತಂಡಕ್ಕೆ ಹತ್ತಿರವಾದ ಮೂಲ ತಿಳಿಸಿದ್ದು, ಸಲಾರ್ ನಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ ಎನ್ನುವುದನ್ನು ತಳ್ಳಿಹಾಕಿದ್ದಾರೆ.

ಪ್ರಿಯಾಂಕಾ ಉಪೇಂದ್ರ ನಟಿಸುತ್ತಾರಾ?

ಪ್ರಿಯಾಂಕಾ ಉಪೇಂದ್ರ ನಟಿಸುತ್ತಾರಾ?

ಇನ್ನು ಇದೇ ಪಾತ್ರಕ್ಕೆ ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ಹೆಸರು ಸಹ ಕೇಳಿ ಬಂದಿತ್ತು. ಪ್ರಿಯಾಂಕಾ, ನಟ ಪ್ರಭಾಸ್ ಸಹೋದರಿಯಾಗ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ಸಹ ತಳ್ಳಿ ಹಾಕಿದೆ ಮೂಲಗಳು.

ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ

ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ

ಪ್ರಭಾಸ್ ತಾಯಿಯ ಪಾತ್ರದಲ್ಲಿ ನಟಿ ರಮ್ಯಾ ಕೃಷ್ಣ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ರಮ್ಯಾ ಸಲಾರ್ ನಲ್ಲೂ ಜೊತೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಭರ್ಜರಿ ಆಕ್ಷನ್ ಜೊತೆಗೆ 'ತಾಯಿ ಸೆಂಟಿಮೆಂಟ್' ಸಾಮಾನ್ಯ ಅಂಶ. 'ಸಲಾರ್'ನಲ್ಲಿಯೂ ತಾಯಿ ಸೆಂಟಿಮೆಂಟ್ ದೃಶ್ಯಗಳು ಇರಲಿದ್ದು, ತಾಯಿ ಪಾತ್ರಕ್ಕೆ ಅನುಭವಿ ನಟಿಯಾದ ರಮ್ಯಕೃಷ್ಣರನ್ನು ಆಯ್ಕೆ ಮಾಡಿದ್ದಾರೆ ಪ್ರಶಾಂತ್ ನೀಲ್.

Recommended Video

ಕಿರಣ್ ರಾಜ್ ಮನವಿಯನ್ನು ಸ್ವೀಕರಿಸುತ್ತಾರಾ ಸಿಎಂ ಯಡಿಯೂರಪ್ಪ ?? | Filmibeat Kannada
ಆರ್ಮಿ ಅಧಿಕಾರಿ ಪಾತ್ರದಲ್ಲಿ ಪ್ರಭಾಸ್

ಆರ್ಮಿ ಅಧಿಕಾರಿ ಪಾತ್ರದಲ್ಲಿ ಪ್ರಭಾಸ್

ಸಲಾರ್ ನಲ್ಲಿ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಒಂದು ಪಾತ್ರದಲ್ಲಿ ಸೇನಾ ಅಧಿಕಾರಿಯಾದರೆ ಮತ್ತೊಂದು ಪಾತ್ರ ಯಾವುದು ಎನ್ನುವುದು ಸದ್ಯದ ಕುತೂಹಲ. ಮೊದಲ ಬಾರಿಗೆ ಪ್ರಭಾಸ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ಆರ್ಮಿ ಉಡುಪಿನಲ್ಲಿ ಪ್ರಭಾಸ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

More from Filmibeat

English summary
Actress Jyotika not part of Prabhas and Prashanth Neel's Salaar movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X