ರಾಜಕರಾಣಿಯಿಂದ ನರಕಯಾತನೆ ಅನುಭವಿಸಿದ ನಾಯಕಿ, ಚಿತ್ರಹಿಂಸೆ ನೆನೆದು ಕಣ್ಣೀರಾದ ಚಿತ್ರ ನಟಿ...!
ಒಂದು ಕಡೆ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿ ಬಿದ್ದಿದೆ. ಮಾಲಿವುಡ್‌ನ ಕಾಮ ಪುರಾಣ ಬಹಿರಂಗವಾಗಿದೆ. ಇನ್ನೊಂದು ಕಡೆ ಆಂಧ್ರದಲ್ಲಿ ಮುಂಬೈ ನಾಯಕಿಯ ಮಾತುಗಳಿಂದ ತಲ್ಲಣದ ವಾತಾವರಣ ನಿರ್ಮಾಣವಾಗಿದೆ.
ಹೌದು, ಕಾದಂಬರಿ ಜೇತ್ವಾನಿ.. ಮೂಲತಃ ಅಹಮದಾಬಾದ್‌ನವರು. ಗುಜರಾತ್ ರಾಜ್ಯವನ್ನು ಚೆಸ್‌ನಲ್ಲಿ ಪ್ರತಿನಿಧಿಸಿದ್ದ ಕಾದಂಬರಿ ಅವರಿಗೆ ಈಜುವುದು ಗೊತ್ತು. ಭರತನಾಟ್ಯವೂ ಗೊತ್ತು. ಇನ್ನೂ ದ್ವೀತಿಯ ಪಿಯುಸಿಯಲ್ಲಿ ಗುಜರಾತ್ ರಾಜ್ಯಕ್ಕೆ ಟಾಪರ್ ಆಗಿದ್ದವರು ಕಾದಂಬರಿ ಜೇತ್ವಾನಿ.

ಆದರೆ, ಅದೇಗೋ ಬಣ್ಣದ ಗೀಳು ಅಂಟಿಕೊಂಡಿತು. ಹೀಗಾಗಿ ಕಾದಂಬರಿ ಆ ನಂತರ ತಮ್ಮ ವ್ಯಾಸಂಗ ಮುಂದುವರೆಸುತ್ತಾ ರೂಪದರ್ಶಿಯಾದರು. ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಾ ಬಾಲಿವುಡ್ಡನ್ನೂ ಪ್ರವೇಶಿಸಿದರು. 'ಸಡ್ಡಾ ಅಡ್ಡಾ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. ಆ ನಂತರ ಅಲ್ಲಿಂದ ಸೀದಾ ಆಂಧ್ರ ಪ್ರದೇಶಕ್ಕೆ ವಲಸೆ ಬಂದ ಕಾದಂಬರಿ, ರಾಜ್ ಕುಮಾರ್ ರೆಡ್ಡಿ ನಿರ್ದೇಶನದ 'ಯೂಜಾ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಹಾರರ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಕಾಸ್ಮೋಪೊಲಿಟನ್ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು.
ಇಂಥಾ ಕಾದಂಬರಿ ಸದ್ಯ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷದ ವಿದ್ಯಾಸಾಗರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮಾನಸಿಕವಾಗಿ ದೈಹಿಕವಾಗಿ ನನ್ನನ್ನು ಕಿರುಕುಳ ನೀಡುವುದಲ್ಲದೇ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನನ್ನೂ ವಿದ್ಯಾಸಾಗರ ಕಿಡ್ನಾಪ್ ಕೂಡ ಮಾಡಿಸಿದ್ದರು ಎಂದು ಹೇಳಿದ್ದಾರೆ.

ಅದೊಂದು ದಿನ ಜಗನ್ ಮೋಹನ್ ರೆಡ್ಡಿ ಅವರ ಆಂಧ್ರ ಪ್ರದೇಶ ಸರ್ಕಾರದ ಆದೇಶದ ಮೇರೆಗೆ ಮುಂಬೈನಲ್ಲಿರುವ ನನ್ನ ಮನೆಗೆ ಬಂದ ಪೊಲೀಸರು, ನನ್ನನ್ನ ಅಪಹರಿಸಿದರು ಎಂದಿರುವ ಕಾದಂಬರಿ, ನನ್ನ ತಂದೆ ಮತ್ತು ತಾಯಿಯನ್ನೂ ಕೂಡ ಜೈಲಿನಲ್ಲಿ ಹಾಕಿ ಅವರಿಗೆ ಚಿತ್ರಹಿಂಸೆಯನ್ನು ನೀಡಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ. ಜೈಲಿನಲ್ಲಿ ನನ್ನ ತಂದೆಗೆ ಕಿವಿ ಕೇಳಿಸದಂತೆ ಆಯಿತು, ನನ್ನ ತಾಯಿಗೆ ಹೃದಯದ ಸಮಸ್ಯೆಯಾಯಿತು ಎಂದು ಕೂಡ ಕಾದಂಬರಿ ಹೇಳಿದ್ದಾರೆ.
ಇನ್ನು 45 ದಿನಗಳ ಕಾಲ ನಮಗೆ ಕೊಡಬಾರದ ಕಷ್ಟಗಳನ್ನೆಲ್ಲ ನೀಡಿದ್ದಾರೆ ಎಂದಿರುವ ಕಾದಂಬರಿ, ನಮ್ಮ ಮನೆಯಿಂದ ಹತ್ತು ಫೋನ್‌ಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ, ನಮಗೆ ಇನ್ನೂ ನಮ್ಮ ವಸ್ತುಗಳನ್ನು ಮರಳಿ ನೀಡಿಲ್ಲ ಎಂದಿದ್ದಾರೆ. ನನ್ನ ಬ್ಯಾಂಕ್ ಖಾತೆಗಳನ್ನು ಕೂಡ ಫ್ರೀಜ್ ಮಾಡಿಸಿದ್ದಾರೆ ಎಂಬ ಆರೋಪವನ್ನು ಕೂಡ ಕಾದಂಬರಿ ಮಾಡಿದ್ದಾರೆ.
ಮುಂದುವರೆದು ಮಾತನಾಡಿರುವ ಕಾದಂಬರಿ, ಅದೃಷ್ಟವಶಾತ್ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ಅಧಿಕಾರಕ್ಕೆ ಬಂತು. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾದ ನಂತರವಷ್ಟೇ ನಾನು ಬಿಡುಗಡೆಯಾಗಿದ್ದು ಎಂದು ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯ TV5 ತೆಲುಗು ವಾಹಿನಿಯಲ್ಲಿ ತಮಗಾದ ಅನ್ಯಾಯವನ್ನು ಹೇಳುತ್ತಾ ಕಾದಂಬರಿ ಕಣ್ಣೀರು ಹಾಕಿದ್ದಾರೆ. ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಾದಂಬರಿಯ ಈ ಕಣ್ಣೀರಿಂದ ಸದ್ಯ ಆಂಧ್ರಪ್ರದೇಶದಲ್ಲಿ ಬಹುದೊಡ್ಡ ವಿವಾದದ ಅಲೆ ಎದ್ದೇಳುವ ಎಲ್ಲ ಲಕ್ಷಣ ಕಂಡು ಬರುತ್ತಿದೆ. ಚಿತ್ರರಂಗ ಮತ್ತು ರಾಜಕೀಯ ರಂಗದಲ್ಲಿ ಕಂಪನವಾಗುವ ಸಾಧ್ಯತೆ ಇದೆ.


Click it and Unblock the Notifications











