For Quick Alerts
  ALLOW NOTIFICATIONS  
  For Daily Alerts

  ಆಚಾರ್ಯ ಸೆಟ್‌ಗೆ ಬಂದ ಕಾಜಲ್: ನವಜೋಡಿಯನ್ನು ಅಭಿನಂದಿಸಿದ ಮೆಗಾಸ್ಟಾರ್

  |

  ಉದ್ಯಮಿ ಗೌತಮ್ ಜೊತೆ ಹೊಸ ಜೀವನ ಆರಂಭಿಸಿದ್ದ ನಟಿ ಕಾಜಲ್ ಅಗರ್‌ವಾಲ್ ಡಿಸೆಂಬರ್ 15 ರಿಂದ ಚಿತ್ರೀಕರಣ ಆರಂಭಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಕಾಜಲ್ ಪಾಲ್ಗೊಂಡಿದ್ದಾರೆ.

  ಪತಿ ಗೌತಮ್ ಜೊತೆ ಅಚಾರ್ಯ ಸೆಟ್‌ಗೆ ಆಗಮಿಸಿದ ಕಾಜಲ್ ಅಗರ್‌ವಾಲ್ ಜೋಡಿಯನ್ನು ಮೆಗಾಸ್ಟಾರ್ ಚಿರಂಜೀವಿ ಸ್ವಾಗತಿಸಿ ಅಭಿನಂದಿಸಿದರು. ಇಬ್ಬರಿಗೂ ಹೂಗುಚ್ಛ ನೀಡಿ ಶುಭಾಶಯ ತಿಳಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್ವಾಲ್'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್ವಾಲ್

  ಕಾಜಲ್ ದಂಪತಿಗೆ ಸರ್ಪ್ರೈಸ್ ನೀಡಬೇಕು ಎಂದು ಮೊದಲೇ ನಿರ್ಧರಿಸಿದ್ದ ಆಚಾರ್ಯ ತಂಡ, ಸೆಟ್‌ನಲ್ಲಿ ಕೇಕ್ ಕತ್ತರಿಸಿ ನವಜೋಡಿಗೆ ಶುಭಕೋರಿದರು.

  ಮದುವೆ ಬಳಿಕ ಮೊದಲ ಸಿನಿಮಾದ ಚಿತ್ರೀಕರಣ ಆರಂಭಿಸಿರುವ ಕಾಜಲ್‌ಗೆ ಪತಿ ಗೌತಮ್ ಸಾಥ್ ನೀಡಿದರು. ಚಿತ್ರೀಕರಣದ ಸ್ಥಳಕ್ಕೆ ಖುದ್ದು ತಾವೇ ಡ್ರಾಪ್ ಮಾಡಿದರು.

  ಮದುವೆ ನಂತರ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ ಕಾಜಲ್ ಅಗರ್‌ವಾಲ್ಮದುವೆ ನಂತರ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ ಕಾಜಲ್ ಅಗರ್‌ವಾಲ್

  ಅಕ್ಟೋಬರ್ 30 ರಂದು ಗೌತಮ್ ಮತ್ತು ಕಾಜಲ್ ಅಗರ್‌ವಾಲ್ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ವಿವಾಹವಾಗಿದ್ದರು. ಕೊರೊನಾ ಭೀತಿಯಿಂದ ಕೆಲವೇ ಆಪ್ತರು ಮಾತ್ರ ಕಾಜಲ್ ಮದುವೆಯಲ್ಲಿ ಭಾಗಿಯಾಗಿದ್ದರು.

  Actress Kajal Agarwal joins Acharya shoot today

  ಮದುವೆ ನಂತರ ನವದಂತಿ ಹನಿಮೂನ್‌ಗಾಗಿ ಮಾಲ್ಡೀವ್ಸ್‌ ಪ್ರಯಾಣ ಮಾಡಿದ್ದರು. ನಂತರ ಚೆನ್ನೈನ ಲೀಲಾ ಪ್ಯಾಲೇಸ್‌ಗೆ ಭೇಟಿ ಮಾಡಿದರು. ಈ ವೇಳೆ ತಮಿಳಿನಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಸಹ ಮಾಡಿದರು.

  ಕುಮಾರಣ್ಣನಿಗೆ ವಿಶ್ ಮಾಡಿದ Modi, Yeddyurappa | Filmibeat Kannada

  ಈಗ ಆಚಾರ್ಯ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ರಾಮ್ ಚರಣ್ ತೇಜ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದ ಪ್ಲಾನ್ ಪ್ರಕಾರ 2021ರ ಬೇಸಿಗೆ ರೆಜೆ ವೇಳೆ ಆಚಾರ್ಯ ತೆರೆಗೆ ಬರಲು ಸಜ್ಜಾಗಿದೆ.

  English summary
  Actress Kajal Aggarwal and Gautham Kitchlu took Blessings from Megastar Chiranjeevi on the Sets of Acharya. as Kajal Agarwal joins the shoot today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X