20 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದೂರು ಸಲ್ಲಿಸಿದ ಮಾಜಿ ಬಿಗ್‌ಬಾಸ್ ಸ್ಪರ್ಧಿ

ಮಾಜಿ ಬಿಗ್‌ಬಾಸ್ ಸ್ಪರ್ಧಿ (ತೆಲುಗು) ಕರಾಟೆ ಕಲ್ಯಾಣಿಯ ಜಗಳ ಶೀಘ್ರದಲ್ಲಿ ಮುಗಿವಂತೆ ಕಾಣುತ್ತಿಲ್ಲ. ಕಳೆದ ವಾರ, ಯೂಟ್ಯೂಬರ್ ಒಬ್ಬನನ್ನು ನಡು ರಸ್ತೆಯಲ್ಲಿ ಹಿಡಿದು ಬಟ್ಟೆ ಹರಿಯುವಂತೆ ಹೊಡೆದಿದ್ದ ಕರಾಟೆ ಕಲ್ಯಾಣಿ, ಆ ದಿನದಿಂದ ಸತತವಾಗಿ ಸುದ್ದಿಯಲ್ಲಿದ್ದಾರೆ.

ಯೂಟ್ಯೂಬರ್ ಶ್ರೀಕಾಂತ್ ರೆಡ್ಡಿ ಎಂಬಾತನನ್ನು ನಡು ರಸ್ತೆಯಲ್ಲಿ ಹೊಡೆದ ಕರಾಟೆ ಕಲ್ಯಾಣಿ ಅಲ್ಲಿಂದಲೇ ವಿಡಿಯೋ ಮಾಡಿ, ಆತ ತನಗೆ ದುಡ್ಡು ಕೊಟ್ಟು ಬಳಸಿಕೊಳ್ಳಲು ಬಂದ, ತನ್ನ ಸೊಂಟ ಮುಟ್ಟಿದ, ಅಸಭ್ಯವಾಗಿ ವರ್ತಿಸಿದ ಹಾಗಾಗಿ ಹೊಡೆದೆ ಎಂದಿದ್ದರು.

ಆದರೆ ಏಟು ತಿಂದ ಶ್ರೀಕಾಂತ್ ರೆಡ್ಡಿ ಹೇಳಿದ್ದೇ ಬೇರೆ, ತಾನು ಮಾಡುತ್ತಿರುವ ಪ್ರ್ಯಾಂಕ್ ವಿಡಿಯೋ ನಿಲ್ಲಿಸುವಂತೆ ಕರಾಟೆ ಕಲ್ಯಾಣಿ ಹೇಳಿದಳು, ನಾನು ಒಪ್ಪಲಿಲ್ಲ ಆಗ ಹಣಕ್ಕೆ ಬೇಡಿಕೆ ಇಟ್ಟಳು ಅದಕ್ಕೂ ಒಪ್ಪದಿದ್ದಾಗ ಹಲ್ಲೆ ಮಾಡಿದಳು ಎಂದಿದ್ದ. ಇಬ್ಬರೂ ಪರಸ್ಪರರ ವಿರುದ್ಧ ದೂರು ನೀಡಿದರು. ಆ ಬಳಿಕ ಕರಾಟೆ ಕಲ್ಯಾಣಿ ಆ ಪೊಲೀಸ್ ಠಾಣೆಯ ಎಸ್‌ಐ ವಿರುದ್ಧವೂ ಕೆಲವು ಆರೋಪಗಳನ್ನು ಮಾಡಿದರು. ಆ ನಂತರ ನಡೆದ ಘಟನೆಗಳಿಂದಾಗಿ ಕರಾಟೆ ಕಲ್ಯಾಣಿ ನಾಪತ್ತೆಯಾಗಿದ್ದರು.

Actress Karate Kalyani Gave Complaint Against 20 YouTube Channel

ಈಗ ಕರಾಟೆ ಕಲ್ಯಾಣಿ ಮತ್ತೆ ಬಂದಿದ್ದು, ಸುಮಾರು 20 ಯೂಟ್ಯೂಬ್ ಚಾನೆಲ್‌ಗಳು ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿಯರನ್ನು ಇಟ್ಟುಕೊಂಡು ಕೆಟ್ಟದಾಗಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡುವ ಯೂಟ್ಯೂಬ್ ಚಾನೆಲ್‌ಗಳನ್ನು ಹುಡುಕಿ-ಹುಡುಕಿ ಕರಾಟೆ ಕಲ್ಯಾಣಿ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸಿದ, ತಮ್ಮ ನಿಂದನೆ ಮಾಡಿದ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧವೂ ಸಹ ಕರಾಟೆ ಕಲ್ಯಾಣಿ ದೂರು ನೀಡಿದ್ದಾರೆ.

ಶ್ರೀಕಾಂತ್ ರೆಡ್ಡಿ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಕರಾಟೆ ಕಲ್ಯಾಣಿ ವಿರುದ್ಧ ಇನ್ನು ಕೆಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಅದರ ಬೆನ್ನಲ್ಲೆ ಕರಾಟೆ ಕಲ್ಯಾಣಿ ಅಕ್ರಮವಾಗಿ ಮಗುವನ್ನು ಖರೀದಿಸಿದ್ದಾಳೆ ಎಂಬ ಆರೋಪವೂ ಬಂದ ಕಾರಣ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕರಾಟೆ ಕಲ್ಯಾಣಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಆ ವೇಳೆಗೆ ಕರಾಟೆ ಕಲ್ಯಾಣಿ ನಾಪತ್ತೆಯಾಗಿದ್ದರು.

ಕರಾಟೆ ಕಲ್ಯಾಣಿ ವಿರುದ್ಧ ಅಕ್ರಮವಾಗಿ ಮಕ್ಕಳನ್ನು ಖರೀದಿಸುವ, ಮಾರಾಟ ಮಾಡುವ ಆರೋಪಗಳು ಕೇಳಿ ಬಂದಿದ್ದವು. ಕೆಲ ದಿನಗಳ ಬಳಿಕ ಹಠಾತ್ತನೆ ಪ್ರತ್ಯಕ್ಷವಾದ ಕರಾಟೆ ಕಲ್ಯಾಣಿ ತಾನು ದತ್ತು ತೆಗೆದುಕೊಂಡಿದ್ದ ಹಸುಗೂಸು ಹಾಗೂ ಆ ಕೂಸಿನ ಪೋಷಕರೊಂದಿಗೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ತಾನು ಆ ಮಗುವನ್ನು ಖರೀದಿಸಿಲ್ಲವೆಂದು, ದತ್ತು ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಈ ಘಟನೆ ಬಳಿಕ ಇದೀಗ ಸುಮಾರು 20 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

More from Filmibeat

English summary
Actress Karate Kalyani gave complaint against 20 YouTube channel. She beaten a you tuber in middle road few days back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X