For Quick Alerts
  ALLOW NOTIFICATIONS  
  For Daily Alerts

  ನಟಿ ಕೀರ್ತಿ ಸುರೇಶ್ ದೇಹಾಕಾರ ಮತ್ತು ಬಿಕಿನಿ ಕಹಾನಿ

  |

  ನಟಿ ಕೀರ್ತಿ ಸುರೇಶ್ ತಮ್ಮ ಅಭಿನಯ ಪ್ರತಿಭೆಯಿಂದ ಎತ್ತರೆತ್ತರಕ್ಕೆ ಏರುತ್ತಿದ್ದಾರೆ. ನಟನೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿರುವ ಅವರು ತಮ್ಮನ್ನು ತಾವು ಹೊಸ ಹೊಸ ನಟನಾ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.

  'ಮಹಾನಟಿ' ಸಿನಿಮಾದ ನಟನೆಯಿಂದಾಗಿ ಸಿನಿಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಸ್ಥಾನಭದ್ರಪಡಿಸಿಕೊಂಡಿರುವ ಕೀರ್ತಿ ಸುರೇಶ್, ಇತ್ತೀಚಿಗೆ ದೇಹತೂಕವನ್ನು ಇಳಿಸುವ ಕಾರ್ಯಕ್ಕೆ ಮುಂದಾಗಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

  ಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾ

  ಮಹನಾಟಿ ಸಿನಿಮಾದಲ್ಲಿ ಗುಂಡು-ಗುಂಡಗೆ ಮುದ್ದಾಗಿದ್ದ ಕೀರ್ತಿ ಸುರೇಶ್, ಈಗ ತೆಳ್ಳಗೆ ಕಡ್ಡಿಯಂತಾಗಿದ್ದಾರೆ. ಆದರೆ ಈ ಬದಲಾವಣೆಗೆ ಕಾರಣ ಬಿಕಿನಿ ಎನ್ನಲಾಗುತ್ತಿದೆ.

  ಸಿನಿಮಾವೊಂದರಲ್ಲಿ ಬಿಕಿನಿ ಧರಿಸಲೆಂದು ಕೀರ್ತಿ ಸುರೇಶ್ ಸಣ್ಣಗಾಗಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೀರ್ತಿ ಸುರೇಶ್ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

  ಬಿಕಿನಿ ಧರಿಸಲು ಸಣ್ಣಗಾಗುತ್ತಿದ್ದಾರೆಯೇ ಕೀರ್ತಿ

  ಬಿಕಿನಿ ಧರಿಸಲು ಸಣ್ಣಗಾಗುತ್ತಿದ್ದಾರೆಯೇ ಕೀರ್ತಿ

  ಕೀರ್ತಿ ಸುರೇಶ್ ಅವರು ದೊಡ್ಡ ನಟನೊಬ್ಬನ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರ ಮಾಡುತ್ತಿದ್ದು, ಸಿನಿಮಾದಲ್ಲಿ ಬಿಕಿನಿ ಧರಿಸುವ ದೃಶ್ಯವಿದ್ದು, ಹಾಗಾಗಿಯೇ ಕೀರ್ತಿ ಸುರೇಶ್ ಸಣ್ಣ ಆಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ದಟ್ಟವಾಗಿಯೇ ಹರಿದಾಡಿತ್ತು.

  ಸುತಾರಾಂ ನಿರಾಕರಿಸಿದ ಕೀರ್ತಿ

  ಸುತಾರಾಂ ನಿರಾಕರಿಸಿದ ಕೀರ್ತಿ

  ಆದರೆ ಬಿಕಿನಿ ಧರಿಸುವ ಸುದ್ದಿಯನ್ನು ಸುತಾರಾಂ ನಿರಾಕರಿಸಿರುವ ಕೀರ್ತಿ ಸುರೇಶ್. ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ಬಿಕಿನಿ ಧರಿಸುವುದಿಲ್ಲ ಎಂದಿದ್ದಾರೆ. ಗಾಳಿ ಸುದ್ದಿ ಹರಡಿರುವವರ ಬಗ್ಗೆ ಸಿಟ್ಟಾಗಿಯೇ ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

  ಹಿರಿಯ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಖ್ಯಾತ ಹಾಸ್ಯನಟಹಿರಿಯ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಖ್ಯಾತ ಹಾಸ್ಯನಟ

  'ದೇಹತೂಕ ಇಳಿಸಿಕೊಳ್ಳುವುದು ವೈಯಕ್ತಿಕ ನಿರ್ಧಾರ'

  'ದೇಹತೂಕ ಇಳಿಸಿಕೊಳ್ಳುವುದು ವೈಯಕ್ತಿಕ ನಿರ್ಧಾರ'

  ದೇಹತೂಕ ಇಳಿಸಿಕೊಳ್ಳುವುದು ವೈಯಕ್ತಿಕ ನಿರ್ಣಯವಾಗಿತ್ತು, ಸತತ ಒಂದು ವರ್ಷ ಕಷ್ಟಪಟ್ಟು ದೇಹತೂಕ ಇಳಿಸಿಕೊಂಡಿದ್ದೇನೆ. ಇದಕ್ಕೂ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.

  ಸಿನಿಮಾದಿಂದ ಹಿಂದೆ ಸರಿದಿದ್ದರು ಕೀರ್ತಿ

  ಸಿನಿಮಾದಿಂದ ಹಿಂದೆ ಸರಿದಿದ್ದರು ಕೀರ್ತಿ

  ಹಿಂದೊಮ್ಮೆ ಸಿನಿಮಾದಲ್ಲಿ ನಿರ್ಮಾಪಕರು ಬಿಕಿನಿ ಧರಿಸಲು ಹೇಳಿದ್ದರು. ಆದರೆ ನನಗೆ ಸರಿಬರಲಿಲ್ಲವಾದ್ದರಿಂದ ಆ ಸಿನಿಮಾದಿಂದಲೇ ಹಿಂದೆ ಸರಿಯುವ ನಿರ್ಣಯ ತಳೆದಿದ್ದೆ ಎಂದು ಕೀರ್ತಿ ಸುರೇಶ್ ಹೇಳಿದರು.

  English summary
  Actress Keerthi Suresh lashes out wearing bikini rumor. News spread that Keerthi Suresh loosing weight because she is wearing bikini in upcoming movie.
  Monday, May 11, 2020, 20:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X