ನಟಿ ಕೀರ್ತಿ ಸುರೇಶ್ ಬಂದರೆ ಬರೀ ಬ್ಯಾಡ್ ಲಕ್!
ದಕ್ಷಿಣ ಭಾರತೀಯ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯರಲ್ಲಿ ನಟಿ ಕೀರ್ತಿ ಸುರೇಶ್ ಕೂಡ ಒಬ್ಬರು. ಕೀರ್ತಿ ಸುರೇಶ್ ಮಹಾನಟಿ ಸಿನಿಮಾದ ಬಳಿಕ ಚಿತ್ರರಂಗದಲ್ಲಿ ಭಾರೀ ಬೇಡಿಕೆಯನ್ನು ಹೊಂದಿರುವಂತಹ ನಟಿ. ಮಹಾನಟಿ ಯಶಸ್ಸು ಬಳಿಕ ಕೀರ್ತಿ ಸುರೇಶ್ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತಿದ್ದಾರೆ. ಮಿಸ್ ಇಂಡಿಯಾ, ಪೆಂಗ್ವಿನ್ ಚಿತ್ರಗಳು ಮಹಿಳಾ ಪ್ರಧಾನ ಚಿತ್ರವಾಗಿ ಹೊರಹೊಮ್ಮಿವೆ. ಈಗ ಸಖಿ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಕೀರ್ತಿ ಸುರೇಶ್ ಸಿದ್ಧರಾಗಿದ್ದಾರೆ. ಚಿತ್ರದ ಟೈಟಲ್ "ಗುಡ್ ಲಕ್ ಸಖಿ". ಆದರೆ ಸಿನಿಮಾ ಕಥೆಯಲ್ಲಿ ಈ ಸಖಿಯದ್ದು ಬರೀ ಬ್ಯಾಡ್ ಲಕ್.
ಹೌದು ಗುಡ್ ಲಕ್ ಅನ್ನೋದು ಟೈಟಲ್‌ನಲ್ಲಿ ಇದ್ದರೆ ಬ್ಯಾಡ್ ಲಕ್ ಅನ್ನೋದು ಚಿತ್ರದಲ್ಲಿ ಹೇಗೆ ಅಡಗಿದೆ ಎಂಬುದನ್ನು ಚಿತ್ರ ತಂಡ ಹಾಡಿನ ಮೂಲಕ ಪರಿಚಯಿಸಿದೆ. ಈ ಸಖಿ ಎಂಥಾ ಬ್ಯಾಡ್ ಲಕ್ ಅಂದರೆ ಆಕೆ ಕಣ್ಣು ಹಾಕಿದರೆ ಸಾಕು, ಎಲ್ಲವೂ ಕ್ಷಣ ಮಾತ್ರದಲ್ಲೇ ಧ್ವಂಸ ಆಗಿ ಬಿಡುತ್ತದೆ. ಎಲ್ಲರೂ ಈ ಸಖಿಯಿಂದ ಆದಷ್ಟು ದೂರ ಇರಬೇಕು. ಆಕೆಯ ಕಣ್ಣಿಗೆ ಬಿದ್ದರೆ ಅದುವೇ ಅಪಶಕುನ ಎಂದು ಭಾವಿಸುತ್ತಾರೆ. ಹಾಗಾಗಿ ಇಡೀ ಗ್ರಾಮಸ್ಥರು ಸಖಿಯನ್ನು ಶಪಿಸುತ್ತಾರೆ. ಇಂತಹ ಸನ್ನಿವೇಶವನ್ನು ಒಳಗೊಂಡಿರುವ ಹಾಡೊಂದು ರಿಲೀಸ್ ಆಗಿದೆ.
ಬ್ಯಾಡ್ ಲಕ್ ಎನ್ನುವ ಸಾಹಿತ್ಯದ ಜೊತೆಗೆ ಹಾಡು ಶುರುವಾಗುತ್ತೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರ ಹೇಗಿರಲಿದೆ ಎನ್ನುವ ಪರಿಚಯ ಹಾಡಿನಲ್ಲಿ ಇದೆ. ನಟಿ ಕೀರ್ತಿ ಸುರೇಶ್ ಹಳ್ಳಿ ಹುಡುಗಿಯ ಅವತಾರದಲ್ಲಿ ಗಮನ ಸೆಳೆಯುತ್ತಾರೆ. ಈ ಹಾಡಿಗೆ ಸದ್ಯ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅದೃಷ್ಟ, ದುರಾದೃಷ್ಟ ಎನ್ನುವುದು ಕೇವಲ ಮನುಷ್ಯ ಕಲ್ಪಿಸಿಕೊಂಡಿರುವ ಕಲ್ಪನೆ ಎನ್ನುವ ವಿಚಾರವನ್ನು ಕೀರ್ತಿ ಸುರೇಶ್ ಹಾಡಿನ ಮೂಲಕ ಹೇಳುತ್ತಾರೆ. ಚಿತ್ರದಲ್ಲಿ ಇದೇ ಪ್ರಮುಖ ಅಂಶ ಎನ್ನುವುದು ಈ ಹಾಡಿನಿಂದ ಗೊತ್ತಾಗುತ್ತದೆ. ಇನ್ನು ಚಿತ್ರಕ್ಕೆ ಗುಡ್ ಲಕ್ ಸಖಿ ಎನ್ನುವ ಟೈಟಲ್ ಇದೆ. ಹಾಗಾಗಿ ಚಿತ್ರದ ನಾಯಕಿಯ ಬ್ಯಾಡ್ ಲಕ್ ಹೇಗೆ ಗುಡ್ ಲಕ್ ಆಗಿ ಪರಿವರ್ತನೆ ಆಗುತ್ತೆ ಎನ್ನುವುದು ಸಿನಿಮಾದಲ್ಲಿ ಅಡಗಿರುವ ವಿಶೇಷತೆ ಎನ್ನಲಾಗಿದೆ.

ಮಹಾನಟಿ ಸಿನಿಮಾದ ಬಳಿಕ ಕೀರ್ತಿ ಸುರೇಶ್ ಮತ್ತೊಂದು ಈ ಚಿತ್ರದ ಮೂಲಕ ನೀರೀಕ್ಷೆ ಹುಟ್ಟಿಸಿದ್ದಾರೆ. ಇನ್ನು ಮಹಾನಟಿ ಬಳಿಕ ಅಂತಹ ಯಾವುದೇ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿಲ್ಲ. ಇದು ಕೂಡ ಅಭಿಮಾನಿಗಳಲ್ಲಿ ಅಸಮಾಧಾನ ತಂದಿತ್ತು. ಹಾಗಾಗಿ ಕೀರ್ತಿ ಸುರೇಶ್ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಆಯ್ಕೆ ಮಾಡಿದ್ದಾರೆ. ಗುಡ್ ಲಕ್ ಸಖಿ ಚಿತ್ರ ಮೂಲಕ ಮತ್ತೊಂದು ಯಶಸ್ಸು ದಕ್ಕಿಸಿಕೊಳ್ಳಲಿದ್ದಾರೆ. ಈ ಹಾಡು ಸಿನಿಮಾದ ಮೇಲೆ ಮತ್ತು ಸಿನಿಮಾದ ಕಥೆಯ ಮೇಲೆ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಜೊತೆಗೆ ಆದಿ ಪಿನಿಸೆಟ್ಟಿ ಮತ್ತು ಜಗಪತಿಬಾಬು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮಹಾ ನಟಿ ಸಿನಿಮಾದ ಬಳಿಕ ಕೀರ್ತಿ ಸುರೇಶ್ ತಮ್ಮ ಲುಕ್ ಬದಲಿಸಿಕೊಂಡಿದ್ದರು. ಮಹಾನಟಿ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಬಳಿಕ ತುಂಬಾ ತೂಕ ಇಳಿಕೆ ಮಾಡಿಕೊಂಡು ಫೊಟೋ ಶೂಟ್ ಮೂಲಕ ಪ್ರತ್ಯಕ್ಷ ಆಗಿದ್ದರು. ಆದರೆ ಕೀರ್ತಿಯ ಆ ಹೊಸ ಲುಕ್ ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಮತ್ತೆ ಕೊಂಚ ತೂಕ ಹೆಚ್ಚಿಸಿ ಕೊಂಡು ಮತ್ತೆ ಬಬ್ಲಿ ಲುಕ್‌ನಲ್ಲಿ ವಾಪಸ್ ಆಗಿದ್ದಾರೆ. ಹಾಗಾಗಿ ಸದ್ಯ ಕೀರ್ತಿ ಸಾಲ ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕೀರ್ತಿ ಸುರೇಶ್ ಅಭಿನಯದ ಅಣ್ಣಾತೆ ಸಿನಿಮಾ ರಿಲೀಸ್ ಆಗಿದೆ. ರಜನಿಕಾಂತ್‌ಗೆ ತಂಗಿಯಾಗಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ಕೀರ್ತಿ ಸುರೇಶ್ ಪಾತ್ರಕ್ಕೂ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದರ ಜೊತೆಗೆ ಮಹೇಶ್ ಬಾಬು ಜೊತೆಗೆ ಸರ್ಕಾರು ವಾರಿ ಪಾಠ, ಚಿರಂಜೀವಿ ಜೊತೆಗೆ ಭೋಳಾ ಶಂಕರ್ ಚಿತ್ರಗಳಲ್ಲಿ ನಟಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ.


Click it and Unblock the Notifications











