ಹಾದಿ ಬದಲಿಸಿದ 'ಉಪ್ಪೆನ' ಬೇಬಮ್ಮ: ಸದ್ದು ಮಾಡುತ್ತಿದೆ ಕೃತಿ ಶೆಟ್ಟಿ ಮುತ್ತಿನ ದೃಶ್ಯ!

ನಟಿ ಕೃತಿ ಶೆಟ್ಟಿ ಒಂದೇ ಸಿನಿಮಾದಿಂದ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹಲ್-ಚಲ್ ಎಬ್ಬಿಸಿದ್ದಾರೆ. ತೆಲುಗಿನ 'ಉಪ್ಪೆನ' ಸಿನಿಮಾದಲ್ಲಿ ನಟಿಸಿರುವ ಕೃತಿ ಸದ್ಯ ಬಹು ಭಾಷೆಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಿನಿಪ್ರೇಕ್ಷಕರ ಮನಸ್ಸಲ್ಲಿ ಮೊದಲ ಸಿನಿಮಾದ ಮೂಲಕವೇ ಸ್ಥಾನಗಿಟ್ಟಿಸಿ ಕೊಂಡಿದ್ದಾರೆ.

ಕೃತಿ ಶೆಟ್ಟಿ ನೋಡಲು ಮಾತ್ರವಲ್ಲ, ಅಭಿನಯದಲ್ಲೂ ಸೈ ಎನಿಸಿಕೊಂಡಿದ್ದಾರೆ. 'ಉಪ್ಪೆನ' ಚಿತ್ರ ಕೃತಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿರುವ ಸಿನಿಮಾ. ಮೊದಲ ಸಿನಿಮಾದಲ್ಲಿ ಕೃತಿ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ದೇಸಿ ಲುಕ್‌ನಲ್ಲಿ ಎಂಟ್ರಿ ಕೃತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಆದರೆ ಈಗ ಕೊಂಚ ಗ್ಲ್ಯಾಮರ್‌ ಆಗಿ ಕಾಣಿಸಿಕೊಳ್ಳಲು ಕೃತಿ ಮುಂದಾಗಿದ್ದಾರೆ. ನಟ ನಾನಿ ಜೊತೆಗೆ ಅಭಿನಯಿಸಿರುವ 'ಶ್ಯಾಮ್‌ ಸಿಂಗ ರಾಯ್‌' ಚಿತ್ರದಲ್ಲಿ ಕೃತಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಲೀಸ್‌ ಆಗಿರುವ ಈ ಚಿತ್ರದ ಟೀಸರ್‌ಕೃತಿ ಪಾತ್ರದ ಬಗ್ಗೆ ಹೇಳುತ್ತಿದೆ.

ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಕೃತಿ ಶೆಟ್ಟಿ!

ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಕೃತಿ ಶೆಟ್ಟಿ!

ದೊಡ್ಡ ತಾರ ಬಳಗ ಹೊಂದಿರುವ 'ಶ್ಯಾಮ್‌ ಸಿಂಗ ರಾಯ್‌' ಚಿತ್ರದಲ್ಲಿ ನಟ ನಾನಿಗೆ ಕೃತಿ ಶೆಟ್ಟಿ ಜೊತೆಯಾಗಿದ್ದಾರೆ. ಸದ್ಯ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಈ ಟೀಸರ್‌ನಲ್ಲಿ ಹೆಚ್ಚಾಗಿ ಗಮನ ಸೆಳೆದಿರುವುದು ಕೃತಿ ಶೆಟ್ಟಿ ಮುತ್ತಿನ ಸೀನ್. ಹಾಗಂತಾ ಈ ಮುತ್ತಿದ ದೃಶ್ಯ ಕೆಟ್ಟದಾಗಿ ಏನು ಇಲ್ಲ. ಆದರೂ ನಟಿ ಕೃತಿ ಇಲ್ಲಿ ಕೊಂಚ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕೃತಿ ಗ್ಲ್ಯಾಮ್‌ ಪಾತ್ರಗಳಲ್ಲಿ ಅಭಿನಯಿಸೋಕೆ ಹೆಜ್ಜೆ ಇಟ್ಟಿದ್ದಾರೆ.

ಈ ಮುತ್ತಿನ ದೃಶ್ಯ ಈಗ ಟಾಲಿವುಡ್‌ನಲ್ಲಿ ಬಿಸಿ ಬಿಸಿ ಸುದ್ದಿ ಆಗಿದೆ. ಇದಕ್ಕೆ ಕಾರಣ ಕೃತಿ ಶೆಟ್ಟಿ ಈ ಹಿಂದೆ ನೀಡಿದ್ದ ಹೇಳಿಕೆ.

ಪರದೆಯ ಹಾಟ್‌ ರೊಮ್ಯಾನ್ಸ್‌ಗೆ ಮಣೆ ಹಾಕುವುದಿಲ್ಲ ಎಂದಿದ್ದ ಕೃತಿ ಶೆಟ್ಟಿ!

ಪರದೆಯ ಹಾಟ್‌ ರೊಮ್ಯಾನ್ಸ್‌ಗೆ ಮಣೆ ಹಾಕುವುದಿಲ್ಲ ಎಂದಿದ್ದ ಕೃತಿ ಶೆಟ್ಟಿ!

'ಉಪ್ಪೆನ' ಚಿತ್ರ ಬಿಡುಗಡೆಯಾದಾಗ ಬೆಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು. ಸ್ಕಿನ್ ಶೋಗಳಿಗೆ ಮತ್ತು ಪರದೆಯ ಮೇಲೆ ಹಾಟ್ ರೊಮ್ಯಾನ್ಸ್‌ಗಳಿಗೆ ನಾನು ಮಣೆ ಹಾಕುದಿಲ್ಲ ಎಂದು ಕೃತಿ ಶೆಟ್ಟಿ ಹೇಳಿಕೊಂಡಿದ್ದರು.

ಆದರೆ ಈಗ ನಾನಿ ಜೊತೆಗೆ ರೊಮ್ಯಾಂಟಿಕ್‌ ದೃಶ್ಯದಲ್ಲಿ ನಟಿಸುವುದರ ಜೊತೆಗೆ ಮುತ್ತಿನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವೇ ತೆಲುಗು ಸಿನಿಮಾ ರಂಗದಲ್ಲಿ ಸುದ್ದಿ ಆಗುತ್ತಿದೆ.

ರಶ್ಮಿಕಾ ಮಂದಣ್ಣ ದಾರಿ ಹಿಡಿದ ಕೃತಿ ಶೆಟ್ಟಿ!

ರಶ್ಮಿಕಾ ಮಂದಣ್ಣ ದಾರಿ ಹಿಡಿದ ಕೃತಿ ಶೆಟ್ಟಿ!

ಗೀತಾ ಗೋವಿಂದಂ ಸಿನಿಮಾದಲ್ಲಿನ ಮುತ್ತಿನ ದೃಶ್ಯದಿಂದ ನಟಿ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ಕೃತಿ. ಮೈ ಕಾಣಿಸುವ ಮತ್ತು ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಾನು ಅಭಿನಯಿಸವುದಿಲ್ಲ ಎಂದು ಹೇಳಿಕೊಂಡಿದ್ದ ಕೃತಿ ಈಗ ತಮ್ಮ ವರಸೆ ಬದಲಿಸಿದ್ದಾರೆ.

ಸಮಂತಾ, ಕಾಜಲ್ ಅಗರ್ವಾಲ್, ತ್ರಿಶಾ ಮತ್ತು ಇತರ ಅನೇಕ ಟಾಪ್ ಸ್ಟಾರ್‌ ನಟಿಯರು ತಮ್ಮ ಚಿತ್ರಗಳಲ್ಲಿ ಈ ಹಿಂದೆ ಇಂತಹ ಸ್ಮೂಚ್ ದೃಶ್ಯಗಳನ್ನು ಮಾಡಿದ್ದಾರೆ. ಹಾಗಾಗಿ 'ಉಪ್ಪೆನ' ಸುಂದರಿ ತನ್ನ ಹಾದಿಯನ್ನು ಬದಲಾಯಿಸಿ ಕೊಂಡಿದ್ದಾಳೆ ಮತ್ತು ಚಿತ್ರರಂಗದ ಸೂತ್ರಗಳನ್ನು ಫಾಲೋ ಮಾಡುತ್ತಿದ್ದಾಳೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.

ಕರುನಾಡಿನ ಕುವರಿ ಕೃತಿ ಶೆಟ್ಟಿ!

ಕರುನಾಡಿನ ಕುವರಿ ಕೃತಿ ಶೆಟ್ಟಿ!

ಕೃತಿ ಶೆಟ್ಟಿ ಮೂಲತಃ ಮಂಗಳೂರಿನವರು. ಕೃತಿ ತನ್ನ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಮಂಗಳೂರಿನಲ್ಲಿಯೇ ಮುಗಿಸಿದ್ದಾರೆ. ಕೃತಿ ಶೆಟ್ಟಿಯನ್ನು 'ಉಪ್ಪೆನ' ಸಿನಿಮಾ ನಾಯಕಿಯಾಗಿ ಆಯ್ಕೆ ಮಾಡುವ ಮುನ್ನ ನಿರ್ದೇಶಕ ಬುಚ್ಚಿಬಾಬು 2000 ಕ್ಕೂ ಹೆಚ್ಚು ಯುವತಿಯರನ್ನು ಆಡಿಷನ್ ಮಾಡಿದ್ದರಂತೆ. 2000 ಯುವತಿಯರನ್ನು ಮೀರಿಸಿ ಕೃತಿ ಶೆಟ್ಟಿ ಅವಕಾಶ ಪಡೆದುಕೊಂಡು ಈಗ ಬೇಡಿಕೆಯ ನಟಿ ಆಗಿದ್ದಾರೆ. ಮೊದಲ ಸಿನಿಮಾದ ಬಳಿಕ ಕೃತಿ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.

More from Filmibeat

English summary
Actress Krithi Shetty Kissing Scene Viral In Shyam Singha Roy Movie Teaser Because Of Her Previous statement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X