Lakshmi Manchu: ಕ್ಯಾಮೆರಾ ಮುಂದೆ ಯುವಕನಿಗೆ ಹೊಡೆದು, ತನ್ನದೆ ಸರಿ ಎಂದ ನಟಿ ಲಕ್ಷ್ಮಿ ಮಂಚು!
ಇತ್ತೀಚೆಗೆ, ನಟಿ ಲಕ್ಷ್ಮಿ ಮಂಚು ಅವರ ವೀಡಿಯೊ ಒಂದು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು, ತನ್ನ ಸಂದರ್ಶನದಲ್ಲಿ ಕ್ಯಾಮೆರಾ ಮುಂದೆ ನಡೆದು ಅಡ್ಡ ಬಂದ ವ್ಯಕ್ತಿಯನ್ನು ಹೊಡೆದಿದ್ದಾರೆ. ಇದಕ್ಕೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ನಟಿಯೇ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ಇದರ ಬಗ್ಗೆ ಮಾತನಾಡಿರುವ ಲಕ್ಷ್ಮಿ ಮಂಚು, ನಾನು ಏನು ಮಾಡಿದ್ದೇನೋ ಅದು ಸರಿಯಾಗಿದೆ. ಆ ಏಟಿಗೆ ಆ ವ್ಯಕ್ತಿ ಅರ್ಹರು ಎಂದು ಹೇಳಿದ್ದಾರೆ. ಇನ್ನೂ ವೈರಲ್ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು ಟ್ರೋಲರ್‌ಗಳನ್ನೇ ವ್ಯಂಗ್ಯವಾಡಿದ್ದಾರೆ.

ನಾನು ಮಾಡಿದ್ದು ಸರಿ ಎಂದ ನಟಿ ಲಕ್ಷ್ಮಿ ಮಂಚು!
"ನಾನು ರೆಡ್ ಕಾರ್ಪೆಟ್ ಮೇಲೆ ಇದ್ದೇನೆ ಎಂದು ಆ ವ್ಯಕ್ತಿಗೆ ಚೆನ್ನಾಗಿ ತಿಳಿದಿತ್ತು. ಇದು ಯಾರೋ ಸುಮ್ಮನೆ ಮಾಡುತ್ತಿದ್ದ ವೀಡಿಯೊವಲ್ಲ. ಆದರೆ ಆ ವ್ಯಕ್ತಿ ತುಂಬಾ ನಿರ್ಲಕ್ಷದಿಂದಿ ಇದ್ದರು. ನನ್ನ ಮುಂದೆ ಇರುವ ಕ್ಯಾಮೆರಾಗೆ ಅಡ್ಡಿ ಮಾಡಿ ನಡೆದರು. ನಾನೊಬ್ಬ ನಟಿ. ನನ್ನ ಕ್ಯಾಮರಾ ಮುಂದೆ ಬರಬೇಡಿ. ಯಾವತ್ತೂ ಯಾವುದೇ ಕಲಾವಿದರ ಜೊತೆ ಹಾಗೆ ಮಾಡಬೇಡಿ" ಎಂದಿದ್ದಾರೆ.
"ಅವರು ಯಾವುದಕ್ಕೆ ಅರ್ಹನೋ ಅದನ್ನು ಸರಿಯಾಗಿ ಪಡೆದುಕೊಂಡಿದ್ದಾರೆ. ಕೆಲವು ಬೇಸಿಕ್ ಗುಣಗಳನ್ನು ಜನರು ಅಳವಡಿಸಿಕೊಳ್ಳಬೇಕು. ಅದರೆ, ಕೆಲವರು ಅದನ್ನು ಮರೆತುಬಿಡುತ್ತಾರೆ. ನಾನು ಅವರಿಗೆ ಕಪಾಳಮೋಕ್ಷ ಮಾಡಿದ್ದೇನೆ. ಅವನು ಅದಕ್ಕೆ ಅರ್ಹ. ಏಕೆಂದರೆ ನಾನು ನನ್ನ ದಾರಿ ತಪ್ಪಿ ಆ ಕಡೆ ಹೋಗಿಲ್ಲ. ಅವರು ನಾನಿದ್ದ ಕಡೆ ಬಂದಿದ್ದಾರೆ" ಎಂದು ಹೇಳಿದ್ದಾರೆ.

ವೈರಲ್ ವೀಡಿಯೊದಲ್ಲಿ, ನಟಿ ದುಬೈನ ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ SIIMA ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಸಂದರ್ಶಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಕ್ಯಾಮರಾ ಮುಂದೆ ನಡೆಯುತ್ತಾನೆ. ಕೋಪಗೊಂಡ ಲಕ್ಷ್ಮಿ ಮಂಚು ಅವನ ಬೆನ್ನಿಗೆ ಹೊಡೆದಿದ್ದಾರೆ. ಜೊತೆಗೆ ಕೆಟ್ಟ ಶಬ್ದದಿಂದ ಬೈದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕೂಡ ಅವರ ಸಂದರ್ಶನಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದಾಗ, 'ಕ್ಯಾಮೆರಾ ಹಿಂದೆಯಿಂದ ಹೋಗಪ್ಪ. ಇದು ಬೇಸಿಕ್ ತಿಳುವಳಿಕೆ' ಎಂದಿದ್ದಾರೆ.
ಅಲ್ಲಿನವರು ಘಟನೆಯನ್ನು ರೆಕಾರ್ಡ್ ಮಾಡದಂತೆ ಕ್ಯಾಮೆರಾಪರ್‌ಸನ್‌ಗೆ ಕೇಳಿದರು ಎಂದು ತನಗೆ ತಿಳಿದಿತ್ತು ಎಂದು ನಟಿ, ಕ್ಲಿಪ್ ಹೊರಬರುತ್ತದೆ ಎಂದೂ ನನಗೆ ತಿಳಿದಿತ್ತು. ಆದರೆ, ನಾನೇಕೆ ಹೆದರಲಿ ಎಂದಿದ್ದಾರೆ. ನಾನು ಹಲವರನ್ನು ಸಂದರ್ಶನ ಮಾಡಿದ್ದೇನೆ. ಅಲ್ಲಿ ಮಾತನಾಡಿದ ಹಲವು ಜನರು ಆಮೇಲೆ ಕೆಲವು ವಿಷಯಗಳನ್ನು ಪ್ರಸಾರ ಮಾಡಬೇಡಿ ಎಂದು ಕೇಳಿಕೊಳ್ಳುತ್ತಾರೆ. ನಾನು ಅವುಗಳನ್ನು ಪ್ರಸಾರ ಮಾಡಿಸಿಲ್ಲ. ಆದರೆ, ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಅವರ ಪುತ್ರಿ ಹೇಳಿದ್ದಾರೆ.
ಇನ್ನು, ಜನರು ವಿಡಯೋ ನೋಡಿ ತಪ್ಪಾಗಿ ತಿಳಿದುಕೊಳ್ಳುವ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದಿದ್ದಾರೆ. "ಇಂದಿನ ಜಗತ್ತಿನಲ್ಲಿ, ನಿಜವಾಗಿಯೂ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಯಾರಿಗೂ ಸಮಯ ಅಥವಾ ತಾಳ್ಮೆ ಇಲ್ಲ. ಎಲ್ಲರೂ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್ಲವನ್ನೂ ಸಾಬೀತುಪಡಿಸಲು ನಾನು ಬದುಕುತ್ತಿಲ್" ಎಂದು ಟ್ರೋಲರ್ಸ್‌ಗಳಿಗೆ ಛಾಟಿ ಬೀಸಿದ್ದಾರೆ.


Click it and Unblock the Notifications











