ಆಂಧ್ರ ಸಿಎಂ ಜಗನ್‌ ಬೆಂಬಲಿಗರ ವಿರುದ್ಧ ನಟಿ ಮಾಧವಿ ಬೆಂಕಿ

ಆಂಧ್ರಪ್ರದೇಶ ಸಿಎಂ ಜಗನ್‌ಮೋಹನ್ ರೆಡ್ಡಿ ಬೆಂಬಲಿಗರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ ನಟಿ ಮಾಧವಿ ಲತಾ.

ತೆಲುಗು ಚಿತ್ರರಂಗದ ನಟಿ, ಬಿಜೆಪಿ ಕಾರ್ಯಕರ್ತೆಯೂ ಆಗಿರುವ ನಟಿ ಮಾಧವಿ ಲತಾಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದರು. ಇದರ ವಿರುದ್ಧ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಕಮೀಷನರ್ ವಿಸಿ ಸಜ್ಜನರ್‌ಗೆ ಲಿಖಿತ ದೂರು ನೀಡಿದ್ದಾರೆ ನಟಿ.

ನಟಿ ಮಾಧವಿ, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ವಿರುದ್ಧ ಕೆಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. 'ಜಗನ್ ಮೋಹನ್ ಸರ್ಕಾರವು ಹಿಂದುಗಳ ಮಂದಿರಗಳನ್ನು ಒಡೆಯುತ್ತಿದೆ' ಎಂಬರ್ಥದ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

Actress Madhavi Latha Gave Complaint Against Trolls

ಇದರ ನಂತರ ಮಾಧವಿ ಲತಾ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಹೆಚ್ಚಾದವು. ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಧವಿ ಲತಾ, 'ನನ್ನ ರಾಜಕೀಯ ಎದುರಾಳಿಗಳು ಬೇಕೆಂದೇ ನನ್ನ ಗುರಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ದಾಳಿ ಮಾಡುತ್ತಿದ್ದಾರೆ. ನನ್ನ ಚಾರಿತ್ರ್ಯ ವಧೆಗೆ ಪ್ರಯತ್ನಗಳು ನಡೆಯುತ್ತಿವೆ' ಎಂದಿದ್ದಾರೆ ಮಾಧವಿ.

'ಈ ವಿಷಯವನ್ನು ಇಷ್ಟಕ್ಕೇ ಬಿಡುವುದಿಲ್ಲ. ನನ್ನನ್ನು ಮಾನಸಿಕವಾಗಿ ಕೊಲ್ಲುವ ಪ್ರಯತ್ನ ಮಾಡುತ್ತಿರುವ ಗುಂಪಿಗೆ ಕಾನೂನು ರೀತಿ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ' ಎಂದಿದ್ದಾರೆ ನಟಿ ಮಾಧವಿ ಲತಾ.

Actress Madhavi Latha Gave Complaint Against Trolls

Recommended Video

ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

2018 ರಲ್ಲಿ ಶ್ರೀ ರೆಡ್ಡಿ ವಿವಾದವಾದಾಗ ನಟಿ ಮಾಧವಿ ಲತಾ ಫಿಲಂ ಚೇಂಬರ್ ಎದುರು ಶ್ರೀರೆಡ್ಡಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ಪವನ್ ಕಲ್ಯಾಣ್ ಹಾಗೂ ಇತರರ ವಿರುದ್ಧ ಹೇಳಿಕೆ ನೀಡಿದ್ದ ಶ್ರೀರೆಡ್ಡಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಆಗ ನಟಿ ಮಾಧವಿ ಅವರನ್ನು ಬಂಧಿಸಿದ್ದ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು.

More from Filmibeat

English summary
Telugu actress Madhavi Latha gave complaint to Cyberabad police against trolls who threatening her on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X