ನಾನು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೆ.. ಅದನ್ನು ಇತ್ತೀಚೆಗೆ ವೈರಲ್ ಮಾಡಿಬಿಟ್ರು- ಮಾನಸ ಚೌಧರಿ

ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಪವರ್‌ಫುಲ್. ಬೇಡ ಅಂದ್ರು ಅದು ಎಲ್ಲರನ್ನು ಸೆಳೆಯುತ್ತದೆ. ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸಲು ಇದು ಒಳ್ಳೆ ವೇದಿಕೆ. ಆದರೆ ಇದೇ ಸೋಶಿಯಲ್ ಮೀಡಿಯಾ ಟ್ರೋಲ್ ಕಾರಣಕ್ಕೆ ಕೆಲವರು ಮಾನಸಿಕ ಕಿರುಕುಳ ಅನುಭವಿಸುತ್ತಾರೆ.

ಸಾಕಷ್ಟು ನಟಿಯರು ಟ್ರೋಲ್ಸ್ ಬಗ್ಗೆ ಮಾತನಾಡಿದ್ದಾರೆ. ಅದರಿಂದ ಹೇಗೆಲ್ಲಾ ಮಾನಸಿಕ ಹಿಂಸೆ ಅನುಭವಿಸಬೇಕಾಯಿತು, ಇವತ್ತಿಗೂ ಕಿರುಕುಳ ತಪ್ಪಿಲ್ಲ ಎನ್ನುವವರು ಇದ್ದಾರೆ. ಇನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿರುವ ತಮ್ಮದೇ ಕೆಲ ಫೋಟೊ, ವಿಡಿಯೋಗಳನ್ನು ಅಳಿಸಿ ಹಾಕಬೇಕು ಎಂದು ಬಯಸುವವರು ಇದ್ದಾರೆ. ನಟಿ, ಮಾಡೆಲ್ ಮಾನಸ ಚೌಧರಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Actress Manasa Choudhary Opens Up on Viral Ad and the Mental Toll of Social Media Trolls

ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದವರು ಮಾನಸ ಚೌಧರಿ. ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಆಕೆ ನಟಿಸಿದ್ದಾರೆ. ಅದಕ್ಕೂ ಮುನ್ನ 'ಎಮೋಜಿ', 'ಬಬಲ್ ಗಮ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದರು. ಆಂಧ್ರದ ಪುತ್ತೂರಿನಲ್ಲಿ ಹುಟ್ಟಿದ ಮಾನಸ ಚೆನ್ನೈನಲ್ಲಿ ಓದಿ ಬೆಳೆದವರು. ಶಾಲೆ, ಕಾಲೇಜು ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್ ಆರಂಭಿಸಿದ್ದರು.

ಸಾಕಷ್ಟು ಜಾಹೀರಾತುಗಳಲ್ಲಿ ಮಾನಸ ಮಿಂಚಿದ್ದಾರೆ. ಒಳ ಉಡುಪಿನ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಅದು ಅಷ್ಟೇನು ವೈರಲ್ ಆಗಿರಲಿಲ್ಲ. ಆದರೆ 'ಬಬಲ್ ಗಮ್' ಎಂಬ ಸಿನಿಮಾ ಬಂದು ಹೋದ ಬಳಿಕ ಆಕೆಯನ್ನು ಜನ ಗುರ್ತಿಸಲು ಶುರು ಮಾಡಿದರು. ಇದ್ದಕ್ಕಿಂದಂತೆ ಆಕೆ ಹಿಂದೆ ಮಾಡಿದ್ದ ಒಳ ಉಡುಪಿನ ಜಾಹೀರಾತು ವೀಡಿಯೋ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ವೈರಲ್ ಆಗಿಬಿಡ್ತು.

ಮಾನಸಾ ಮಾತನಾಡಿ "ನಾನು ಮಾಡೆಲಿಂಗ್ ಕ್ಷೇತ್ರದಿಂದ ಬಂದವಳು. 'ಬಬಲ್ ಗಮ್' ಚಿತ್ರದಲ್ಲಿ ಕೂಡ ಕೊಂಚ ಹಾಟ್ ದೃಶ್ಯಗಳಲ್ಲಿ ನಟಿಸಿದ್ದೆ. ಬಳಿಕ ಅಂತಹ ದೃಶ್ಯಗಳಿಗೆ ನೋ ಎನ್ನುತ್ತಿದ್ದೇನೆ. ಇದೇ ಕಾರಣಕ್ಕೆ ಕೆಲ ಸಿನಿಮಾಗಳನ್ನು ಕೈಬಿಟ್ಟಿದ್ದೇನೆ. ಆದರೆ ಅಷ್ಟು ಸುಲಭವಾಗಿ ನೋ ಎಂದು ಹೇಳಲು ಕಷ್ಟ. ಆದರೂ ಅದು ಪುನರಾವರ್ತನೆ ಆಗಬಾರದು ಎಂದುಕೊಂಡಿದ್ದೇನೆ" ಎಂದು Filmy Focus Originals ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿದ್ದಾರೆ.

ನಟ, ನಟಿಯರಿಗೆ ಒಂದು ಇಮೇಜ್ ಕ್ರಿಯೇಟ್ ಆಗಿಬಿಟ್ಟರೆ ಅಂಥದ್ದೇ ಪಾತ್ರಗಳು ಹುಡುಕಿ ಬರ್ತಾವೆ. ಹಾಟ್ ದೃಶ್ಯಗಳಲ್ಲಿ ನಟಿಸಿಬಿಟ್ಟರೆ ಅದನ್ನು ಉದಾಹರಣೆ ಕೊಟ್ಟು ಬೇರೆ ಚಿತ್ರಗಳಲ್ಲಿ ನಟಿಸುವಂತೆ ಹೇಳುವವರೇ ಹೆಚ್ಚು. ನಾನು ಸಿನಿಮಾಗಳಲ್ಲಿ ನಟಿಸುವ ಮುನ್ನ ನಟಿಸಿದ್ದ ಜಾಹೀರಾತುಗಳನ್ನು ಆ ಬಳಿಕ ಬಳಸಿಕೊಂಡರು ಎಂದು ಮಾನಸಾ ನೆನಪಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ನಟಿಸೋ ಮುನ್ನ ಒಂದು ಜಾಹೀರಾತುಗಳಲ್ಲಿ ನಟಿಸಿದ್ದ ಆ ಬಳಿಕ ಅದನ್ನು ಚೆನ್ನಾಗಿ ಬಳಸಿಕೊಂಡರು. "ಒಂದು ಜಾಹೀರಾತಿನಲ್ಲಿ ನಟಿಸಿದ್ದೆ. ಅದು ಯಾವ್ದು ಅಂತ ಹೇಳಲ್ಲ. 'ಬಬಲ್ ಗಮ್' ಸಿನಿಮಾ ಬಳಿಕ ಆ ಜಾಹೀರಾತು ರೀಲ್ಸ್ ರೂಪದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು. ನಿಜಕ್ಕೂ ಕೆಟ್ಟದಾಗಿತ್ತು. ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಬೇಸರವಾಗಲಿಲ್ಲ. ಆದರೆ ಅದು ವೈರಲ್ ಆದ ಪರಿ ಬೇಸರ ಮೂಡಿಸಿತು" ಎಂದಿದ್ದಾರೆ. ಒಳ ಉಡುಪಿನ ಜಾಹೀರಾತು ಅಲ್ವಾ ಎಂದು ನಿರೂಪಕ ಕೇಳಿದ್ದಕ್ಕೆ 'ಹೌದು' ಎಂದು ಮಾನಸಾ ಹೇಳಿದ್ದಾರೆ.

ಆ ಜಾಹೀರಾತನ್ನು ಮರೆಸುವಂತೆ ಕೆಲಸ ಮಾಡಿ ಗಮನ ಸೆಳೆಯಬೇಕು ಎಂದು ಮಾನಸಾ ಹೇಳಿದ್ದಾರೆ. ಆದರೂ ಏನು ಮಾಡಲು ಸಾಧ್ಯವಿಲ್ಲ. ನಾನು ನಟಿಸಿದ್ದೇನೆ. ಗೂಗಲ್ ಇಂದ ತೆಗೆಯಲು ಸಾಧ್ಯವಿಲ್ಲ. ಎಲ್ಲಾ ಗೊತ್ತಿದ್ದು ಮಾಡಿದ್ದು. ಅದಕ್ಕೆ ಬೇಸರ ಏನು ಇಲ್ಲ. ಕರಿಯರ್‌ಗೆ ಪೆಟ್ಟು ಕೊಡಬಹುದು ಅನಿಸುತ್ತೆ. ಆಗ ಮಾಡೆಲಿಂಗ್ ಕ್ಷೇತ್ರದಲ್ಲಿದ್ದೆ. ಚಿತ್ರರಂಗದಲ್ಲಿ ಇದು ಹಿನ್ನಡೆಗೆ ಕಾರಣವಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ವಿವರಿಸಿದ್ದಾರೆ.

More from Filmibeat

Read more about: actress model
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X