ಮಗಳ ವಿಚಾರಕ್ಕೆ ನಟಿ ಕಣ್ಣೀರು; ವೀಡಿಯೋ ವೈರಲ್

ಟಾಲಿವುಡ್ ಕಲೆಕ್ಷನ್ ಕಿಂಗ್ ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು, ತಂದೆಯ ಹಾದಿಯಲ್ಲೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ, ಇಂಗ್ಲೀಷ್‌ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಒಂದು ಮಗುವಿನ ತಾಯಿಯಾಗಿರುವ ಈ ಚೆಲುವೆ ನಾಯಕಿಯಾಗಿ ಅಲ್ಲದೇ ಇದ್ದರೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾ ನಟಿಯಾಗಿ ಮಾತ್ರವಲ್ಲದೇ ಕಿರುತೆರೆ ನಿರೂಪಕಿಯಾಗಿಯೂ ಈಕೆ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಿನಿಮಾ ನಿರ್ಮಾಪಕಿಯಾಗಿಯೂ ತೆಲುಗು ಚಿತ್ರರಂಗದಲ್ಲಿ ಚಿರಪರಿಚಿತ. ಇದೀಗ ಲಕ್ಷ್ಮಿ ಮಂಚು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವತ: ಆಕೆಯೇ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ಲಕ್ಷ್ಮಿ ಮಂಚು ಹೀಗೆ ಕಣ್ಣೀರಾಕುತ್ತಾ ವಿಡಿಯೋ ಮಾಡಲು ಕಾರಣ ಮಗಳ ಮೇಲಿನ ಪ್ರೀತಿ. ಎರಡು ವರ್ಷಗಳ ನಂತರ ಮಗಳು ವಿದ್ಯಾಳನ್ನು ಶಾಲೆಗೆ ಕಳುಹಿಸಲು ತುಂಬಾ ಸಂಕಟವಾಯಿತು ಅಂತ ಎಮೋಷನಲ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷಗಳಿಂದ ಶಾಲೆಗಳು ಬಂದ್ ಆಗಿ ಆನ್‌ಲೈನ್ ಕ್ಲಾಸ್‌ಗಳು ನಡೀತಿತ್ತು. ಮಕ್ಕಳು ಮನೆಯಲ್ಲಿ ಹೆಚ್ಚು ಸಮಯ ಪೋಷಕರ ಜೊತೆ ಕಳೀತಿದ್ರು.

ಕೊರೊನಾ ಹಾವಳಿ ಕಮ್ಮಿ ಆಗಿ ನಿಧಾನವಾಗಿ ಶಾಲೆಗಳು ಪುನರಾರಂಭವಾಗಿದ್ದು, ಕೆಲ ಮಕ್ಕಳು ಮತ್ತೆ ಶಾಲೆಗೆ ಹೋಗಲು ರಂಪಾಟ ಮಾಡುತ್ತಿದ್ದಾರೆ. ಪೋಷಕರು ಕೂಡ ಭಾರವಾದ ಮನಸ್ಸಿನಿಂದಲೇ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಿಕೊಡುತ್ತಿದ್ದಾರೆ. ಇದೇ ರೀತಿ ಬಹಳ ದಿನಗಳ ಬಳಿಕ ಮಗಳು ವಿದ್ಯಾಳನ್ನು ಶಾಲೆಗೆ ಕಳುಹಿಸಿಕೊಟ್ಟು ನಟಿ ಲಕ್ಷ್ಮಿ ಮಂಚು ಹೀಗೆ ಭಾವುಕರಾಗಿ ಪೋಸ್ಟ್‌ ಮಾಡಿದ್ದಾರೆ.

 ಕಣ್ಣೀರು ಹಾಕುತ್ತಾ ಲಕ್ಷ್ಮಿ ಮಂಚು ಮಾತು

ಕಣ್ಣೀರು ಹಾಕುತ್ತಾ ಲಕ್ಷ್ಮಿ ಮಂಚು ಮಾತು

'ಲಾಕ್‌ಡೌನ್‌ ಕಾರಣ ಶಾಲೆಗಳ ಬಾಗಿಲು ಮುಚ್ಚಿ ಮಕ್ಕಳೆಲ್ಲಾ ಮನೆಯಲ್ಲಿ ಉಳಿಯುವಂತಾಯಿತು. ಆ ಸಮಯದಲ್ಲಿ 24 ಗಂಟೆ ವಿದ್ಯಾಳನ್ನು ಸಂಭಾಳಿಸೋದು ಹೇಗೆ ಅಂದುಕೊಂಡಿದ್ದೆ. 2 ವರ್ಷಗಳಿಂದ ಮನೆಯಲ್ಲೇ ಇದ್ದ ಕಾರಣ ನಮ್ಮಿಬ್ಬರ ನಡುವೆ ಆತ್ಮೀಯ ಬಂಧ ಏರ್ಪಟ್ಟಿತ್ತು. ಬಹಳ ದಿನಗಳ ನಂತರ ಮತ್ತೆ ಅವಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದರೆ ಏನೋ ಗೊತ್ತಿಲ್ಲದ ಸಂಕಟ. ಆಕೆಯಿಂದ ದೂರ ಇರುವುದು ಇಷ್ಟು ಕಷ್ಟ ಅಂತ ಎಂದು ಊಹಿಸಿರಲಿಲ್ಲ. ಶೀಘ್ರದಲ್ಲೇ ನನಗೆ ಇದು ಅಭ್ಯಾಸವಾಗುತ್ತದೆ ಅನ್ನಿಸುತ್ತಿದೆ' ಎಂದು ಲಕ್ಷ್ಮಿ ಮಂಚು ಹೇಳಿದ್ದಾರೆ.

 ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದ ನಟಿ

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದ ನಟಿ

ಲಕ್ಷ್ಮಿ ಮಂಚು ಚಿಕ್ಕಂದಿನಿಂದಲೂ ಸಿಕ್ಕಾಪಟ್ಟೆ ಬೋಲ್ಡ್. 2006ರಲ್ಲಿ ಚೆನ್ನೈ ಮೂಲದ ಶ್ರೀನಿವಾಸನ್ ಅವರನ್ನು ವಿವಾಹವಾಗಿದ್ದ ಲಕ್ಷ್ಮಿ ಮುಂದೆ ಸಾರೋಗೆಸಿ ಪದ್ಧತಿ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು. ಆರೋಗ್ಯ ಸಮಸ್ಯೆಯಿಂದ ಮಗು ಪಡೆಯಲು ಸಾಧ್ಯವಾಗದವರಿಗೆ ಈಕೆ ಮಾದರಿ ಆಗಿದ್ದಾರೆ.

 50 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ನಟಿ

50 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ನಟಿ

ಲಕ್ಷ್ಮಿ ಮಂಚು ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ. ಈ ವಾರವಷ್ಟೇ ನಟಿ ಮಂಚು ಲಕ್ಷ್ಮಿ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ 50 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಈ ಶಾಲೆಗಳನ್ನು ಖಾಸಗಿ ಶಾಲೆಗಳ ರೀತಿ ಅಭಿವೃದ್ಧಿ ಪಡಿಸುವ ಪಣ ತೊಟ್ಟಿದ್ದಾರೆ.

 ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ನಟೆ

ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ನಟೆ

ಫೇಸ್ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಲಕ್ಷ್ಮಿ ಮಂಚು ಪ್ರತಿದಿನ ಏನಾದರೂ ಪೋಸ್ಟ್‌ ಮಾಡುತ್ತಿರುತ್ತಾರೆ. ಇನ್ನು 'ಲಕ್ಷ್ಮಿ ಮಂಚು' ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ, ಈಕೆ ಪೋಸ್ಟ್‌ ಮಾಡುತ್ತಿರುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.

More from Filmibeat

English summary
Actress Manchu Lakshmi Emotional Video Goes Viral On Social Media. Know More.
Read more about: tollywood telugu actress movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X