Lakshmi Manchu: ಸಲಿಂಗ ವಿವಾಹ ಸುಪ್ರೀಂ ತೀರ್ಪು: "ನನ್ನ ಹೃದಯ ಒಡೆದು ಹೋಯಿತು" ಎಂದ ಲಕ್ಷ್ಮೀ
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಪಂಚಪೀಠ ಮಂಗಳವಾರ ತೀರ್ಪು ಪ್ರಕಟಿಸಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಸೆಲೆಬ್ರೆಟಿಗಳು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಸಲಿಂಗ ವಿವಾಹ ಮಾಡಿಕೊಳ್ಳುವವರನ್ನು ದಂಪತಿ ಎಂದು ಹೇಳಲು ಸಾಧ್ಯವಿಲ್ಲ, ಅದು ಸಹಜೀವನ. ಆದನ್ನು ಮದುವೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು. ಕೋರ್ಟ್ ತೀರ್ಪಿನ ಬಗ್ಗೆ 'ಮೈ ಬ್ರದರ್ ನಿಖಿಲ್' ಸಿನಿಮಾ ನಿರ್ದೇಶಕ ಒನೀರ್ ಪ್ರತಿಕ್ರಿಯಿಸಿದ್ದರು. "ವಾಟ್ ಎ ಶೇಮ್" ಎಂದು ಟ್ವೀಟ್ ಮಾಡಿದ್ದರು.

ಇತ್ತೀಚೆಗೆ ತೆಲುಗು ನಟಿ ಮಂಚು ಲಕ್ಷ್ಮಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು ಈ ವಿಷಯವನ್ನು ಸಂಸತ್ತ್ ವ್ಯಾಪ್ತಿಗೆ ಬಿಟ್ಟಿದೆ. ಈ ಬಗ್ಗೆ ಮಂಚು ಲಕ್ಷ್ಮಿ ನಮ್ಮ ಹೃದಯ ಒಡೆದು ಹೋಯಿತು ಎಂದು ಬರೆದುಕೊಂಡಿದ್ದಾರೆ. ಪ್ರೀತಿ ಎಂದರೇನು ಎಂದು ಜಗತ್ತಿಗೆ ಸಾರಿದ ಈ ದೇಶ ಹೀಗೆ ಮಾಡುತ್ತಿದೆ ಎಂದಿದ್ದಾರೆ.
ಮಂಚು ಲಕ್ಷ್ಮಿ ಟ್ವೀಟ್‌ನಲ್ಲಿ ಏನಿದೆ ಅಂದ್ರೆ, "ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ನನಗೆ ನಿರಾಸೆ ತಂದಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ ಮತ್ತು ಪ್ರಪಂಚದಾದ್ಯಂತ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ. ಅವರು ಬೇರೆ ದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದಾರೆ. ನಮ್ಮ ದೇಶದಲ್ಲಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ?" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಇದೀಗ ಸಖತ್ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಮಂಚು ಲಕ್ಷ್ಮಿ 'ಮಾನ್ಸ್ಟರ್' ಚಿತ್ರದಲ್ಲಿ ಲೆಸ್ಬಿಯೆನ್ ಪಾತ್ರದಲ್ಲಿ ನಟಿಸಿದ್ದರು. ಹನಿ ರೋಸ್ ಮತ್ತು ಮಂಚು ಲಕ್ಷ್ಮಿ ಲಿಪ್‌ಲಾಕ್ ಮಾಡುವ ದೃಶ್ಯಗಳು ಇವೆ. ಅವರ ನೋವು, ಪ್ರೀತಿ ಗೊತ್ತಿರುವ ಕಾರಣಕ್ಕೆ ಮಂಚು ಲಕ್ಷ್ಮಿ ಈ ಟ್ವೀಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.


Click it and Unblock the Notifications










