ನಿಶ್ಚಿತಾರ್ಥ ಮುರಿದುಕೊಂಡ ನಟಿ ಮೆಹ್ರೀನ್: ಈ ಮದ್ವೆ ಆಗಲ್ಲ ಎಂದ ನಟಿ
ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೂರೇ ತಿಂಗಳಲ್ಲಿ ಸಂಬಂಧಕ್ಕೆ ಅಂತ್ಯವಾಡಿದ್ದಾರೆ ನಟಿ ಮೆಹ್ರೀನ್ ಪಿರ್ಝಾದಾ. ಕಳೆದ ಮಾರ್ಚ್ ತಿಂಗಳಲ್ಲಿ ರಾಜಕಾರಣಿ ಪುತ್ರನ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಮದುವೆಗೂ ತಯಾರಿ ನಡೆದಿತ್ತು. ಆದ್ರೀಗ, ದಿಢೀರ್ ಅಂತ ನಿಶ್ಚಿತಾರ್ಥ ಬ್ರೇಕ್ ಅಪ್ ಆಯಿತು ಎಂದು ಪ್ರಕಟಿಸಿದ್ದಾರೆ.
ನಿಶ್ಚಿತಾರ್ಥದೊಂದಿಗೆ ಸಂಬಂಧ ಮುರಿದುಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ ಮೆಹ್ರೀನ್, ಅಸಲಿ ಕಾರಣ ಏನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಹಾಗಾದ್ರೆ, ಮೆಹ್ರೀನ್ ಪಿರ್ಝಾದಾ ಎಂಗೇಜ್‌ಮೆಂಟ್ ಬ್ರೇಕ್ ಅಪ್ ಆಗಲು ಕಾರಣವೇನು? ನಟಿ ಹಾಕಿರುವ ಪೋಸ್ಟ್‌ನಲ್ಲಿ ಏನಿದೆ? ಮುಂದೆ ಓದಿ...

ಮಾರ್ಚ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು
ನಟಿ ಮೆಹ್ರೀನ್ ಪಿರ್ಝಾದಾ ಮತ್ತು ಭವ್ಯ ಬಿಷ್ಣೋಯಿ ಅವರ ನಿಶ್ಚಿತಾರ್ಥ ಮಾರ್ಚ್ 12 ರಂದು ಜೈಪುರದಲ್ಲಿ ನೆರವೇರಿತ್ತು. ಭವ್ಯ ಬಿಷ್ಣೋಯಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ. ಕಾಂಗ್ರೆಸ್ ಆಡಳಿತದಲ್ಲಿ ಮೂರು ಬಾರಿ ಭಜನ್ ಲಾಲ್ ಹರ್ಯಾಣ ಮುಖ್ಯಮಂತ್ರಿಯಾಗಿದ್ದರು. ಬಿಷ್ಣೋಯಿ ಅವರ ತಂದೆ ಕುಲ್‌ದೀಪ್ ಬಿಷ್ಣೋಯಿ ಸಹ ಶಾಸಕರಾಗಿದ್ದರು.

ಮೂರೇ ತಿಂಗಳಿಗೆ ಸಂಬಂಧ ಅಂತ್ಯ
ನಿಶ್ಚಿತಾರ್ಥ ಮುರಿದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ''ಭವ್ಯ ಬಿಷ್ಣೋಯಿ ಮತ್ತು ನಾನು ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದು, ಮದುವೆ ಅಗದಿರಲು ತೀರ್ಮಾನಿಸಿದ್ದೇವೆ. ಇದು ಸೌಹಾರ್ದಯುತವಾಗಿ ಮತ್ತು ಉತ್ತಮ ಹಿತಾಸಕ್ತಿಗಾಗಿ ತೆಗೆದುಕೊಳ್ಳಲ್ಪಟ್ಟ ನಿರ್ಧಾರ" ಎಂದು ಮೆಹ್ರೀನ್ ಸ್ಪಷ್ಟನೆ ನೀಡಿದ್ದಾರೆ.

ನನ್ನ ಖಾಸಗಿ ವಿಷಯವನ್ನು ಗೌರವಿಸಿ
''ಈ ಕ್ಷಣದಿಂದ ಭವ್ಯ ಬಿಷ್ಣೋಯಿಯೊಂದಿಗೆ, ಅವರ ಕುಟುಂಬ ಸದಸ್ಯರೊಂದಿಗೆ ಮತ್ತು ಅವರ ಸ್ನೇಹಿತರೊಂದಿಗೆ ಯಾವುದೇ ರೀತಿಯ ಒಡನಾಟ ಇರುವುದಿಲ್ಲ ಎಂದು ಗೌರವಾನ್ವಿತವಾಗಿ ತಿಳಿಸಲು ಬಯಸುತ್ತಿದ್ದೇನೆ. ಇದು ನನ್ನ ಖಾಸಗಿ ವಿಚಾರವಾಗಿರುವುದರಿಂದ ಪ್ರತಿಯೊಬ್ಬರು ಗೌರವಿಸುತ್ತಾರೆ ಎಂದು ಭಾವಿಸಿದ್ದೇನೆ. ಇನ್ನುಳಿದಂತೆ ನನ್ನ ಕೆಲಸ ಮುಂದುವರಿಸಲು ನಿರ್ಧರಿಸಿದ್ದು, ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಕೊಡಲು ಇಷ್ಟಪಡುತ್ತೇನೆ'' ಎಂದು ನಟಿ ಮೆಹ್ರೀನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Recommended Video

ಮೆಹ್ರೀನ್ ಮುಂದಿನ ಸಿನಿಮಾಗಳು
ಮೆಹ್ರೀನ್ ಸಿನಿಮಾ ವಿಚಾರಕ್ಕೆ ಬಂದ್ರೆ ವೆಂಕಟೇಶ್ ಮತ್ತು ವರುಣ್ ತೇಜ ನಟಿಸುತ್ತಿರುವ 'ಎಫ್ 3' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2016ರಲ್ಲಿ ಮೆಹ್ರೀನ್ ತೆಲುಗು ಇಂಡಸ್ಟ್ರಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿದ್ದಾರೆ. ಮಹಾನುಭಾವಡು, ರಾಜ ದಿ ಗ್ರೇಟ್, ನೋಟಾ, ಕವಚಂ, ಎಫ್ 2, ಪಟಾಸ್, ಅಶ್ವತ್ಥಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











