ಶಿವಣ್ಣನ ಜೊತೆ ನಟಿಸಬೇಕಿದ್ದ ನಟಿಯ ಎಗ್‌ ಫ್ರೀಜಿಂಗ್; ವೀಡಿಯೋ ಹಂಚಿಕೊಂಡು ಶಾಕ್ ಕೊಟ್ಟ ಚೆಲುವೆ

ಇತ್ತೀಚೆಗೆ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಎಗ್‌ ಫ್ರೀಜ್ ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದರು. ರಾಖಿ ಸಾವಂತ್​, ಪ್ರಿಯಾಂಕಾ ಚೋಪ್ರಾ, ಏಕ್ತಾ ಕಪೂರ್​, ಉಪಾಸನಾ ಕಾಮನೇನಿ, ಸಾನಿಯಾ ಮಿರ್ಜಾ ಸೇರಿದಂತೆ ಹಲವು ನಟಿಯರು ಎಗ್‌ ಫ್ರೀಜ್ ಮಾಡಿಸಿ ಮಕ್ಕಳನ್ನು ಪಡೆಯುವ ತಂತ್ರಜ್ಞನದ ಮೊರೆ ಹೋಗಿದ್ದಾರೆ.

ತಡವಾಗಿ ಮಗು ಮಾಡಿಕೊಳ್ಳಲು ಬಯಸುವವರು ಭವಿಷ್ಯದ ಬಗ್ಗೆ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ. ವಯಸ್ಸಾದಂತೆ ಅಂಡಾಣು ಶಕ್ತಿ ಕ್ಷೀಣಿಸುತ್ತದೆ. ಹಾಗಾಗಿ ಎಗ್‌ ಫ್ರೀಜಿಂಗ್ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ವ್ಯವಸ್ಥೆ ಭಾರತಕ್ಕೆ ಬಂದು ವರ್ಷಗಳೇ ಕಳೆದಿದೆ. ಈ ಬಗ್ಗೆ ಅರಿವು ಇರುವವರು ವರ್ಷಗಳ ಹಿಂದೆಯೇ ಅಂಡಾಣು ಶೇಖರಿಸಿಟ್ಟು ಈಗ ಮಕ್ಕಳನ್ನು ಪಡೆಯುತ್ತಿದ್ದಾರೆ.

Actress Mehreen Pirzada reveals her egg freezing journey video viral

ನಟಿ ಮೃಣಾಲ್ ಠಾಕೂರ್ ಬರೀ ಎಗ್‌ ಫ್ರೀಜಿಂಗ್ ಬಗ್ಗೆ ಆಲೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ ಮತ್ತೊಬ್ಬ ನಟಿ ಮೆಹ್ರೀನ್ ಪಿರ್ಜಾದಾ ತಮ್ಮ ಎಗ್‌ ಫ್ರೀಜಿಂಗ್ ಮಾಡಿಸಿದ್ದಾರೆ. ಆ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಂತ ಹಂತವಾಗಿ ತಾವು ಹೇಗೆ ಈ ಪ್ರಕ್ರಿಯೆಗೆ ಒಳಗಾದೆ, ಅದಕ್ಕೆ ವೈದ್ಯರ ಸಹಕಾರ ಹೇಗಿತ್ತು, ಈ ವಿಚಾರವನ್ನು ತಾವು ಹಂಚಿಕೊಂಡಿದ್ಯಾಕೆ? ಎಂದು ವಿವರಿಸಿದ್ದಾರೆ.

ಪಂಜಾಬ್ ಸಿಕ್‌ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದ ನಟಿ ಮೆಹ್ರೀನ್ ಪಿರ್ಜಾದಾ ಮೊದಲಿಗೆ ಮಾಡೆಲಿಂಗ್ ಆರಂಭಿಸಿದರು. ಬಳಿಕ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಎಗ್‌ ಫ್ರೀಜಿಂಗ್ ಬಗ್ಗೆ ಆಕೆ ಇನ್‌ಸ್ಟ್ರಾಂನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. "ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಈಗ ಎಗ್‌ ಫ್ರೀಜಿಂಗ್ ಪ್ರಕ್ರಿಯೆ ಮುಗಿದಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ. ಆದರೆ ಇದು ನನ್ನ ವೈಯಕ್ತಿಕ ವಿಚಾರ ಅಲ್ಲವೇ? ಇದನ್ನು ಎಲ್ಲರಿಗೂ ಹೇಳಬೇಕಾ? ಬೇಡ್ವಾ? ಎಂದು ಸಾಕಷ್ಟು ಆಲೋಚಿಸಿದ್ದೆ" ಎಂದಿದ್ದಾರೆ.

"ನನ್ನಂತೆ ಸಾಕಷ್ಟು ಮಹಿಳೆಯರು ಪ್ರಪಂಚದಲ್ಲಿದ್ದಾರೆ. ಮದುವೆ, ಮಕ್ಕಳು ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರ ಭವಿಷ್ಯಕ್ಕಾಗಿ ಇದು ಬಹಳ ಮುಖ್ಯ ಎಂದು ಭಾವಿಸಿದೆ. ಈ ಬಗ್ಗೆ ನಾವು ದೊಡ್ಡದಾಗಿ ಮಾತನಾಡುತ್ತಿಲ್ಲ. ಆದರೆ ತಂತ್ರಜ್ಞಾನದ ಸಹಾಯದಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ" ಎಂದು ಮೆಹ್ರೀನ್ ಹೇಳಿದ್ದಾರೆ.

"ತಾಯಿ ಆಗಬೇಕು ಎನ್ನುವುದು ನನ್ನ ಕನಸು. ಆದರೆ ಅದು ಕೆಲ ವರ್ಷಗಳು ತಡವಾಗಬಹುದು. ಆ ಕಾರಣಕ್ಕೆ ಅದನ್ನು ಬಿಡೋಕೆ ಸಾಧ್ಯವಿಲ್ಲ. ಅದಕ್ಕೆ ಈ ಎಗ್ ಫ್ರೀಜಿಂಗ್. ಆಸ್ಪತ್ರೆ ಅಂದ್ರೆ ಭಯಪಡುವ ನನ್ನಂತಹವರಿಗೆ ಇದು ನಿಜಕ್ಕೂ ಸವಾಲೇ ಸರಿ. ಯಾಕಂದರೆ ಇಂಜೆಕ್ಷನ್‌ ಕಾರಣಕ್ಕೆ ಆಸ್ಪತ್ರೆಗೆ ಹೋದ ಪ್ರತಿ ಬಾರಿ ನಾನು ತಲೆ ಸುತ್ತಿ ಬೀಳುತ್ತಿದ್ದೆ. ಆದರೆ ಎಗ್ ಫ್ರೀಜಿಂಗ್ ಒಳ್ಳೆದಾ ಅಂದ್ರೆ? ಕಂಡಿತ ಹೌದು ಎನ್ನುತ್ತೇನೆ" ಎಂದಿದ್ದಾರೆ.

"ನೀವು ಏನೇ ಮಾಡಿದರು ನಿಮಗಾಗಿ ಮಾಡಿ. ಈ ಜರ್ನಿಯಲ್ಲಿ ನನ್ನ ಬೆಂಬಲಕ್ಕೆ ನಿಂತ ಗೈನಕಾಲಿಜಿಸ್ಟ್‌ ಡಾ. ರಿಮ್ಮಿ ಹಾಗೂ ತಮ್ಮ ತಾಯಿಗೆ ಧನ್ಯವಾದಗಳು" ಎಂದು ಮೆಹ್ರೀನ್ ಬರೆದುಕೊಂಡಿದ್ದಾರೆ. ಸಾಕಷ್ಟು ಜನ ಲೈಕ್ಸ್, ಕಾಮೆಂಟ್ಸ್ ಮೂಲಕ ಈ ಪೋಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಅಂಡಾಣು ಶೇಖರಣೆ?

ಇತ್ತೀಚೆಗೆ ಕೆಲವರು ಬಹಳ ತಡವಾಗಿ ಮದುವೆ ಆಗುತ್ತಿದ್ದಾರೆ. ಅದರಲ್ಲೂ ಸಿನಿಮಾ ತಾರೆಯರು ಈ ವಿಚಾರದಲ್ಲಿ ಮುಂದೆ ಇದ್ದಾರೆ. ಮದುವೆ, ಮಕ್ಕಳು ಅಂತ ಯೋಚಿಸಿದ್ರೆ ಕರಿಯರ್‌ಗೆ ತೊಂದರೆ ಆಗುತ್ತದೆ ಎಂಧು ಭಾವಿಸುತ್ತಾರೆ. ಆದರೆ 30 ವರ್ಷಗಳ ಬಳಿಕ ಗರ್ಭಧಾರಣೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಟಿಯರು ಚಿಕ್ಕ ವಯಸ್ಸಿನಲ್ಲೇ ತಮ್ಮ ಆರೋಗ್ಯಕರ ಅಂಡಾಣು ಶೇಖರಿಸಿ ಇಟ್ಟುಕೊಳ್ಳುತ್ತಾರೆ. ತಾವು ಬಯಸಿದಾಗ ಮಗು ಪ್ಲಾನ್ ಮಾಡಿಕೊಳ್ಳುತ್ತಾರೆ. ಇದನ್ನೇ ಎಗ್‌ ಫ್ರೀಜಿಂಗ್ ಎಂದು ಕರೆಯುತ್ತಾರೆ.

ಕನ್ನಡ ಚಿತ್ರದಲ್ಲೂ ಮೆಹ್ರೀನ್

ನಟಿ ಮೆಹ್ರೀನ್ ತೆಲುಗು, ತಮಿಳು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ 'ನೀ ಸಿಗೋವರೆಗೂ' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಶಿವಣ್ಣ ಜೋಡಿಯಾಗಿ ನಟಿಸಬೇಕಿದೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತಿದೆ.

More from Filmibeat

English summary
Mehreen Pirzada shares her egg freezing process video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X