For Quick Alerts
  ALLOW NOTIFICATIONS  
  For Daily Alerts

  ಮೆಹ್ರೀನ್ ಮುಖದ ತುಂಬಾ ಸೂಜಿ: 'ನೀ ಸಿಗೋವರೆಗು' ಸಿನಿಮಾ ನಟಿಗೆ ಏನಾಯ್ತು?

  |

  ತೆಲುಗು, ಪಂಜಾಬಿ, ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರುವ ಬೆಡಗಿ ಮೆಹ್ರೀನ್ ಕೌರ್ ಪಿರ್ಜಾದಾ. 'ನೀ ಸಿಗೋವರೆಗು' ಕನ್ನಡ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೋಡಿಯಾಗಿ ಈ ಪಂಜಾಬಿ ಬೆಡಗಿ ಮಿಂಚಿದ್ದಾರೆ.

  ಮೆಹ್ರೀನ್ ಕೌರ್ ಮುಖದ ತುಂಬಾ ಸೂಜಿಗಳನ್ನು ಚುಚ್ಚಿಕೊಂಡಿರುವ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊದಲಿಗೆ ಈ ಫೋಟೊ ನೋಡಿ ಕೆಲವರು ಆತಂಕಗೊಂಡಿದ್ದಾರೆ. ಮುದ್ದು ಮುಖದ ಚೆಲುವೆಗೆ ಏನಾಯ್ತು? ಯಾಕೆ ಹೀಗೆಲ್ಲಾ ಮುಖಕ್ಕೆ ಸೂಜಿ ಎಂದು ಅಚ್ಚರಿಗೊಂಡಿದ್ದಾರೆ. ಅಂದಹಾಗೆ ಇದು ಯಾವುದೋ ಕಾಯಿಲೆಗೆ ತೆಗೆದುಕೊಳ್ಳುತ್ತಿರುವ ಚಿಕಿತ್ಸೆ ಅಲ್ಲ, ಬದಲಿಗೆ ಸೌಂದರ್ಯವೃದ್ಧಿಗೆ ಮಾಡಿಸಿಕೊಂಡಿರುವ ಥೆರಪಿ. ಹೌದು ಮೆಹ್ರೀನ್ ಆಕ್ಯು ಸ್ಕಿನ್‌ ಲಿಫ್ಟ್ ಎನ್ನುವ ಸ್ಕಿನ್ ಥೆರಫಿ ತೆಗೆದುಕೊಂಡಿದ್ದಾರೆ. ಅದರ ಭಾಗವಾಗಿ ಹೀಗೆ ಮುಖಕ್ಕೆ ಸೂಜಿಗಳನ್ನು ಚುಚ್ಚಿಕೊಂಡಿದ್ದಾರೆ.

  'ಸಲಾರ್ ನೋಡಿ ಮಾತೇ ಹೊರಡುತ್ತಿಲ್ಲ.. ಪ್ರಭಾಸ್ ಮತ್ತೆ ತಿರುಗೇಟು ಕೊಡ್ತಾರೆ' ಎಂದ ವಿಮರ್ಶಕ!'ಸಲಾರ್ ನೋಡಿ ಮಾತೇ ಹೊರಡುತ್ತಿಲ್ಲ.. ಪ್ರಭಾಸ್ ಮತ್ತೆ ತಿರುಗೇಟು ಕೊಡ್ತಾರೆ' ಎಂದ ವಿಮರ್ಶಕ!

  ಆಕ್ಯುಸ್ಕಿನ್‌ಲಫ್ಟ್ ಥೆರಫಿ ಮೂಲಕ ತಮ್ಮ ಮುಖದ ಚರ್ಮದ ಕಾಂತಿ ಹೆಚ್ಚಿಸಿದ ವೈದ್ಯರಿಗೆ ಕೃತಜ್ಞತೆ ಎಂದು ಫೋಟೊ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ಕೃಷ್ಣಗಾಡಿ ವೀರ ಪ್ರೇಮಗಾದ' ತೆಲುಗು ಚಿತ್ರದ ಮೂಲಕ ಮೆಹ್ರೀನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮುಂದೆ 'ಮಹಾನುಭಾವುಡು', 'ರಾಜಾ ದಿ ಗ್ರೇಟ್', 'ನೋಟಾ', F2, F3 ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮಹಾನುಭಾವುಡು' ಚಿತ್ರದ ನಟನೆಗಾಗಿ ಸಂತೋಷಂ ಫಿಲ್ಮ್ ಅವಾರ್ಡ್ ಕೂಡ ಧಕ್ಕಿದೆ.

  Actress Mehreen Pirzada Took Acu skin lift skin tightening treatment

  ಸದ್ಯ 'ಸ್ಪಾರ್ಕ್' ಹಾಗೂ 'ನೀ ಸಿಗೋವರೆಗು' ಸಿನಿಮಾಗಳಲ್ಲಿ ಮೆಹ್ರೀನ್ ಬಣ್ಣ ಹಚ್ಚಿದ್ದಾರೆ. 'ನೀ ಸಿಗೋವರೆಗು' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದು ಸೆಂಚುರಿ ಸ್ಟಾರ್ ನಟನೆಯ 124ನೇ ಸಿನಿಮಾ. ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು. ಚಿತ್ರದಲ್ಲಿ 2 ಶೇಡ್‌ಗಳಿರೋ ಪಾತ್ರದಲ್ಲಿ ಮೆಹ್ರೀನ್ ಮಿಂಚಿದ್ದಾರೆ. ರಾಮ್ ಧೂಲಿಪುಡಿ ಈ ರೊಮ್ಯಾಂಟಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು 'ಜನುಮದ ಜೋಡಿ' ಹಾಗೂ 'ನಮ್ಮೂರ ಮಂದಾರ ಹೂವೆ' ಸ್ಟೈಲ್ ಸಿನಿಮಾ ಎಂದು ಶಿವರಾಜ್‌ಕುಮಾರ್ ಹೇಳಿದ್ದರು.

  English summary
  Actress Mehreen Pirzada Took Acu skin lift skin tightening treatment. She has appeared in successful Telugu films including Mahanubhavudu, Raja the Great and F2 Fun and Frustration. now She acting in kannada movie Nee Sigoovaregu. Know more.
  Thursday, December 1, 2022, 22:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X