For Quick Alerts
  ALLOW NOTIFICATIONS  
  For Daily Alerts

  ಮಾದಕ ವಸ್ತು ಸೇವನೆ: ಮುಂಬೈನಲ್ಲಿ ತೆಲುಗು ನಟಿ ಬಂಧನ

  |

  ಸಿನಿಮಾ ರಂಗದ ಮಾದಕ ವಸ್ತು ಪ್ರಕರಣಗಳಿಗೆ ಅಂತ್ಯವೇ ಇದ್ದಂತಿಲ್ಲ. ಬಾಲಿವುಡ್, ಸ್ಯಾಂಡಲ್‌ವುಡ್‌, ಪಕ್ಕದ ಟಾಲಿವುಡ್‌ನಲ್ಲಿ ಈಗಾಗಲೇ ಹಲವಾರು ಮಂದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಇನ್ನೂ ಈ ಡ್ರಗ್ಸ್‌ ಕೋರರ ಸಂಖ್ಯೆ ಕಡಿಮೆ ಆದಂತಿಲ್ಲ.

  ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನೈರಾ ಶಾ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

  ಮಂಬೈನ ಜೆಡಬ್ಲು ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ತಂಗಿದ್ದ ನೈರಾ ಹಾಗೂ ಆಕೆಯ ಗೆಳೆಯ ಆಶಿಕ್ ಸಾದಿಕ್ ಹಸೈನ್ ಅವರುಗಳು ಮಾದಕ ವಸ್ತು ಸೇವಿಸಿದ್ದಾರೆ ಎಂದು ಮುಂಬೈ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

  ಭಾನುವಾರದಂದು ನಟಿಯು ಹೋಟೆಲ್‌ನಲ್ಲಿ ಅನುಮತಿ ಪಡೆಯದೇ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು ನೈರಾ ಹಾಗೂ ಆಶಿಕ್ ಅನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ಖಚಿತಗೊಂಡಿದೆ. ಇಬ್ಬರನ್ನೂ ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಬಂಧಿಸಲಾಗಿದೆ.

  ಸಂಚಾರಿ ವಿಜಯ್ ಸಾವಿಗೆ ಕನ್ನಡದಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ ಅಮೆರಿಕ ರಾಯಭಾರ ಕಚೇರಿ | Filmibeat Kannada

  ನೈರಾ ತೆಲುಗು ಹಾಗೂ ಕೆಲವು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. 'ಇ ಈ', 'ಬುರ್ರ ಕಥ', 'ಮಿರುಗ' ಇನ್ನೂ ಕೆಲವು ಸಿನಿಮಾಗಳಲ್ಲಿ ನೈರಾ ನಟಿಸಿದ್ದಾರೆ.

  English summary
  Telugu movie actress Naira Shah arrested in Mumbai for consuming drugs. Her friend also arrested by Mumbai police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X