ಹುಟ್ಟುಹಬ್ಬದಂದೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಮಿತಾ

ಬಹುಭಾಷಾ ನಟಿ ನಮಿತಾ ಇಂದು (ಮೇ 10) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಗೆ ಸ್ನೇಹಿತರು, ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣದ ಮೂಲಕ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಫೇಮಸ್‌ ಆಗಿದ್ದ ನಟಿ ನಮಿತಾ ಅವರು ಇಂದು 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬದ ದಿನದಂದೇ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

ಸದ್ಯ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳ ಜೊತೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ನಮಿತಾ ಟ್ವಿಟರ್‌ನಲ್ಲಿ ತಮ್ಮ ಮೊದಲ ಮಗುವಿನ ಬೇಬಿ ಬಂಪ್ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ "ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ನನ್ನ ಜೀವನದ ಹೊಸ ದಿನಗಳು ಆರಂಭವಾಗುತ್ತಿದೆ." ಎಂದು ಬರೆದುಕೊಂಡಿದ್ದಾರೆ.

ಇನ್ನು ನಟಿ ಈ ಹಿಂದೆ ಹೇಳಿದಂತೆ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸ್ಪೆಷಲ್ ನ್ಯೂಸ್‌ ನೀಡಿದ್ದಾರೆ. ಪೋಟೊವನ್ನು ನೋಡಿದ ಅಭಿಮಾನಿಗಳು ನಮಿತಾಗೆ ಶುಭಾಶಯ ಕೋರುತ್ತಿದ್ದಾರೆ. ತಮ್ಮ 41ನೇ ವಯಸ್ಸಿನಲ್ಲಿ ನಟಿ ನಮಿತಾ ಬೇಬಿ ಬಂಪ್ ಪೋಟೊಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಬ್ಲಾಕ್‌ ಡ್ರೆಸ್‌ನಲ್ಲಿ ಕ್ಯೂಟ್‌ ಆಗಿ ಬೇಬಿ ಬಂಪ್‌ ಪೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಸದ್ಯ ನಮಿತಾ ಅವರ ಈ ಬೇಬಿ ಬಂಪ್ ಪೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಮಿತಾ ಅನೇಕ ಸ್ಟಾರ್‌ ನಟರ ಜೊತೆ ಸ್ಕ್ರೀನ್ ಶೇರ್‌ ಮಾಡಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ ಎಲ್ಲಾ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಮಿತಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 2017ರಲ್ಲಿ ಗೆಳಯ ವೀರೇಂದ್ರ ಅವರನ್ನು ಮದುವೆಯಾದ ಬಳಿಕ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ದೂರವೇ ಉಳಿದಿದ್ದರು. ಈಗಲೂ ಸಹ ಅವರ ಅಪಾರ ಅಭಿಮಾನಿಗಳು ಮತ್ತೆ ನಮಿತಾ ಬಣ್ಣದ ಪರದೆ ಮೇಲೆ ಬರಬೇಕು ಎಂದು ಬಯಸುತ್ತಿದ್ದಾರೆ.

Actress Namitha announces pregnancy by Sharing Baby Bump Pic

ಕನ್ನಡದಲ್ಲಿ ಕೇಜ್ರಿಸ್ಟಾರ್ ರವಿಚಂದ್ರನ್ ಜೊತೆ ನಮಿತಾ ಹೂ, ನೀಲಕಂಠ ಸಿನಿಮಾಗಳಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಇದಾದ ಬಳಿಕ ನಟ ದರ್ಶನ್ ಜೊತೆ 'ಇಂದ್ರ' ಸಿನಿಮಾದಲ್ಲೂ ತಮ್ಮ ಅದ್ಬುತ ನಟನೆ ಮೂಲಕವೇ ಕನ್ನಡಿಗ ಪ್ರೇಕ್ಷಕರನ್ನ ರಂಜಿಸುವಲ್ಲಿ ನಮಿತಾ ಯಶಸ್ವಿಯಾಗಿದ್ದರು. ನಂತರ 'ಬೆಂಕಿ ಬಿರುಗಾಳಿ' ಸಿನಿಮಾದಲ್ಲೂ ನಟಿಸಿದ್ದರು. ಹೀಗಾಗಿ ನಮಿತಾ ಕನ್ನಡ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ನಮಿತಾ ಮತ್ತೆ ಸಿನಿಮಾಗಳನ್ನು 1998 ರಲ್ಲಿ ನಮಿತಾ ತಮ್ಮ 17ನೇ ವರ್ಷದಲ್ಲೇ ಮಿಸ್ ಸೂರತ್ ಕಿರೀಟವನ್ನು ಪಡೆದುಕೊಂಡಿದ್ದರು. ಆದಾದ ಬಳಿಕ 2001 ರಲ್ಲಿ ಮಿಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಮೂರನೇ ರನ್ನರ್ ಆಪ್ ಆಗಿದ್ದರು. ನಂತರ ಟಿವಿ ಸಿರಿಯಲ್‌ನಲ್ಲಿ ನಟಿಸಿ ಬೆಳ್ಳಿತೆರೆಗೆ 2002 ರಲ್ಲಿ ತೆಲುಗಿನ 'ಸೊಂತಮ್' ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯಕ್ಕೆ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ನಮಿತಾ ಬಿಜೆಪಿ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಮಿತಾ ಮತ್ತೆ ಸಿನಿಮಾ ಲೋಕಕ್ಕೆ ಬರಲಿ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಇಂದು ನಟಿ ನಮಿತಾ ಸ್ಪೆಷಲ್ ನ್ಯೂಸ್‌ ಏನೆಂದು ತಿಳಿಯಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

More from Filmibeat

English summary
South Indian Actress Namitha announces pregnancy on 41st birthday sharing cute baby bump photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X