For Quick Alerts
  ALLOW NOTIFICATIONS  
  For Daily Alerts

  5 ಫ್ಲಾಟ್, 1 ಪ್ರೈವೆಟ್ ಜೆಟ್.. ಅಬ್ಬಬ್ಬಾ ನಯನತಾರಾ ಬಳಿ ಒಟ್ಟು ಎಷ್ಟು ಕೋಟಿ ಸಂಪತ್ತು ಇದೆ ಗೊತ್ತಾ?

  |

  ಲೇಡಿ ಸೂಪರ್ ಸ್ಟಾರ್ ನಯನತಾರಾ ಹವಾ ಜೋರಾಗಿದೆ. ಮದುವೆ ನಂತರ ಕೂಡ ನಯನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ನಯನತಾರಾ ಆಸ್ತಿ ಮೌಲ್ಯ ಎಷ್ಟು ಎನ್ನುವ ವಿಚಾರ ಹಾಟ್ ಟಾಪಿಕ್ ಆಗಿದೆ. ನಯನತಾರಾ ಬರೋಬ್ಬರಿ 160 ಕೋಟಿ ರೂ. ಆಸ್ತಿಯ ಒಡತಿ ಎನ್ನಲಾಗ್ತಿದೆ.

  ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡ ನಯನತಾರ ಎರಡ್ಮೂರು ಬಾರಿ ನಿಜಜೀವನದಲ್ಲಿ ಪ್ರೀತಿಯಲ್ಲಿ ಸೋತಿದ್ದರು. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲೂ ಕಾಣಿಸಿಕೊಂಡು ನಯನ್ ಕೋಟಿ ಕೋಟಿ ಸಂಭಾವನೆ ಪಡೀತಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಈ ಚೆಲುವೆ ಸದ್ಯ ಸೌತ್‌ ಸಿನಿದುನಿಯಾದ ನಂಬರ್‌ ವನ್ ಹೀರೊಯಿನ್ ಆಗಿ ಮೆರಿತ್ತಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರವೊಂದಕ್ಕೆ 10 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ.

  ನಯನತಾರಾ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳಲ್ಲಿ ಫುಲ್ ಟೆನ್ಶನ್!ನಯನತಾರಾ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳಲ್ಲಿ ಫುಲ್ ಟೆನ್ಶನ್!

  ಈವರೆಗೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಯನತಾರ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಈ ಕೇರಳ ಚೆಲುವೆ ಬಳಿ 150 ಕೋಟಿ. ರೂ ಅಧಿಕ ಸಂಪತ್ತು ಇದೆ ಎನ್ನಲಾಗ್ತಿದೆ. ನಯನತಾರಾ ಮೂಲತಃ ಕ್ರಿಶ್ಚಿಯನ್ ಆಗಿದ್ದು, ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್.

  3 ನಗರಗಳಲ್ಲಿ ಐಷಾರಾಮಿ ಫ್ಲಾಟ್‌ಗಳು

  3 ನಗರಗಳಲ್ಲಿ ಐಷಾರಾಮಿ ಫ್ಲಾಟ್‌ಗಳು

  ನಟಿ ನಯನತಾರಾ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ 2, ಚೆನ್ನೈನಲ್ಲಿ 4 ಐಷಾರಾಮಿ ಫ್ಲಾಟ್‌ಗಳು ಇದೆಯಂತೆ. ಇನ್ನು ಕೇರಳದಲ್ಲಿ ಒಂದು ನಿವಾದ ಇದ್ದು ಅಲ್ಲಿ ತಂದೆ ತಾಯಿ ವಾಸವಾಗಿದ್ದಾರೆ. ಇನ್ನು ಮದುವೆಯಾದ ಬೆನ್ನಲ್ಲೇ ತನ್ನ ಪತಿ ವಿಘ್ನೇಶ್ ಶಿವನ್‌ಗೆ ನಯನ್, ಐಷಾರಾಮಿ ಬಂಗಲೆಯೊಂದನ್ನು ಗಿಫ್ಟ್ ನೀಡಿದ್ದರು. ಇದರ ಬೆಲೆ ಬರೋಬ್ಬರಿ 20 ಕೋಟಿ ರೂ. ಎನ್ನಲಾಗಿತ್ತು. ಹೈದರಾಬಾದ್‌ನಲ್ಲಿರುವ ಫ್ಲಾಟ್‌ಗಳ ಬೆಲೆ 10ರಿಂದ 15 ಕೋಟಿ ರೂ. ಅನ್ನುವ ಅಂದಾಜಿದೆ.

  ಬಾರ್ಸಿಲೋನಾದ ಬೀದಿಗಳಲ್ಲಿ ಬಾವುಟ ಹಿಡಿದು ನಿಂತ ವಿಕ್ಕಿ- ನಯನತಾರಾಬಾರ್ಸಿಲೋನಾದ ಬೀದಿಗಳಲ್ಲಿ ಬಾವುಟ ಹಿಡಿದು ನಿಂತ ವಿಕ್ಕಿ- ನಯನತಾರಾ

  ಪ್ರೈವೇಟ್ ಜೆಟ್ ಖರೀದಿಸಿದ ನಯನತಾರಾ

  ಪ್ರೈವೇಟ್ ಜೆಟ್ ಖರೀದಿಸಿದ ನಯನತಾರಾ

  ಇತ್ತೀಚೆಗೆ ನಟಿ ನಯನತಾರಾ ಪ್ರೈವೇಟ್ ಜೆಟ್ ಖರೀದಿಸಿರುವುದಾಗಿ ಗುಸುಗುಸ ಕೇಳಿಬಂದಿತ್ತು. ಗಂಡ ಹೆಂಡತಿ ಜೆಟ್‌ನಲ್ಲಿ ಊರುರು ಸುತ್ತಾಡಿದ ಫೋಟೊಗಳನ್ನು ಶೇರ್ ಮಾಡಿದ್ದರು. ಸಿನಿಮಾ ಮಾತ್ರವಲ್ಲದೇ ನಯನತಾರಾ ವ್ಯಾಪಾರ ಕ್ಷೇತ್ರದಲ್ಲೂ ಹಣ ತೊಡಗಿಸಿದ್ದಾರೆ. ಡಾಕ್ಟರ್ ವನಿತಾ ರಾಜನ್ ಜೊತೆ ಸೇರಿ ಲಿಪ್ ಬಾಂಬ್ ಕಂಪೆನಿ ನಡೆಸುತ್ತಿದ್ದಾರೆ. ಗಂಡ ಹೆಂಡತಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

  ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ

  ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ

  ಹೀರೊಗಳ ರೀತಿಯಲ್ಲೇ ಲೇಡಿ ಸೂಪರ್ ಸ್ಟಾರ್ ನಯನತಾರ ಸಂಭಾವನೆ ಡಿಮ್ಯಾಂಡ್ ಮಾಡ್ತಾರೆ. ಸಿನಿಮಾ ಶೂಟಿಂಗ್‌ನಲ್ಲಿ ಮಾತ್ರ ಭಾಗವಹಿಸುತ್ತಾರೆ. ಸಿನಿಮಾ ಪ್ರಮೋಷನ್‌ಗೆ ಹೋಗುವುದು ಕಡಿಮೆ. ಆದರೂ ಈಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. 'ನಾನುಂ ರೌಡಿತಾನ್' ಸಿನಿಮಾ ನಿರ್ದೇಶನದ ಸಮಯದಲ್ಲಿ ವಿಘ್ನೇಶ್ ಶಿವನ್ ಜೊತೆ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ನಂತರ ಪ್ರೀತಿಗೆ ತಿರುಗಿ ಇದೇ ವರ್ಷ ಜೂನ್ 9ಕ್ಕೆ ಈ ಜೋಡಿ ಹಸೆಮಣೆ ಏರಿತ್ತು.

  ದುಬೈನಲ್ಲಿ ವಿಘ್ನೇಶ್ ಬರ್ತ್‌ಡೇ ಸೆಲೆಬ್ರೇಷನ್

  ದುಬೈನಲ್ಲಿ ವಿಘ್ನೇಶ್ ಬರ್ತ್‌ಡೇ ಸೆಲೆಬ್ರೇಷನ್

  ಮಲಯಾಳಂನ 'ಗೋಲ್ಡ್', ತೆಲುಗಿನ 'ಗಾಡ್‌ಫಾದರ್', ಹಿಂದಿ 'ಜವಾನ್' ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಮದುವೆ ನಂತರ ಗಂಡ ವಿಘ್ನೇಶ್ ಶಿವನ್ ಜೊತೆ ವಿದೇಶಗಳಿಗೆ ಪ್ರವಾಸ ಹೋಗಿ ಬಂದಿದ್ದಾರೆ. ಸದ್ಯ ವಿಘ್ನೇಶ್ ಶಿವನ್ 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಜೋಡಿ ದುಬೈನಲ್ಲಿ ಮೋಜು ಮಸ್ತಿ ಮಾಡ್ತಿದೆ. ಬುರ್ಜ್ ಖಲೀಫ್ ಎದುರಿನ ಹೋಟೆಲ್‌ನಲ್ಲಿ ಕೇಕ್ ಕಟ್ ಮಾಡಿ ನಯನತಾರಾ ತಮ್ಮ ಗಂಡನ ಹುಟ್ಟುಹಬ್ಬ ಆಚರಿಸಿದ್ದಾರೆ.

  English summary
  Actress Nayanthara Net Worth Apart from luxurious flats in Hyderabad And Chennai. Know More.
  Sunday, September 18, 2022, 13:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X