ದೇಹದ ಮೇಲೆ ಮಚ್ಚೆ ಎಷ್ಟಿವೆ? ಪತ್ರಕರ್ತನ ಪ್ರಶ್ನೆಗೆ ಸಿಟ್ಟಾದ ನಟಿ

ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುವ ಕಿರುಕುಳ, ಅಶ್ಲೀಲತೆಯನ್ನು ಕೆಲವೊಮ್ಮೆ ಸಿನಿಮಾ ಪ್ರೆಸ್ ಮೀಟ್‌ಗಳಲ್ಲಿ, ಸಂದರ್ಶನಗಳಲ್ಲಿ ಸಹ ಎದುರಿಸುತ್ತಾರೆ. ನಟಿಯರು ತುಸು ಗ್ಲಾಮರಸ್ ಪಾತ್ರಗಳಿಗೆ ಹೆಸರಾಗಿದ್ದರಂತೂ ಕತೆ ಮುಗಿದಂತೆಯೇ. ಅವರ ಮೇಲೆ ಅಶ್ಲೀಲ, ಅಸಭ್ಯ ಪ್ರಶ್ನೆಗಳ ದಾಳಿಯೇ ನಡೆಸುತ್ತಾರೆ ಕೆಲ ಪತ್ರಕರ್ತರು.

ಮೊದಲಿಗೆ ಬಾಲಿವುಡ್‌ನಲ್ಲಿ ಮಾತ್ರವೇ ಇದ್ದ ಈ ಅಸಭ್ಯ ಪ್ರಶ್ನೆ ಕೇಳುವ, ಖಾಸಗಿ ಪ್ರಶ್ನೆಗಳನ್ನು ಕೇಳುವ ಸಂಪ್ರದಾಯ ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾ ಪತ್ರಕರ್ತರಿಗೂ ಅಂಟಿಕೊಂಡಿದೆ. ಅದರಲ್ಲಿಯೂ ಡಿಜಿಟಲ್ ಪತ್ರಿಕೋದ್ಯಮ ಹೆಚ್ಚಾದ ಬಳಿಕ 'ರುಚಿ-ರುಚಿಯಾದ' ಕಂಟೆಂಟ್‌ಗಾಗಿ ಈ ರೀತಿಯ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿದೆ.

ಇದೀಗ ಯುವ ನಟಿಯೊಬ್ಬರು ಇಂಥಹಾ ಅಶ್ಲೀಲ ಪ್ರಶ್ನೆಯನ್ನು ಎದುರಿಸಬೇಕಾಗಿದೆ. ನಟಿಯ ದೇಹದ ಮೇಲೆ ಎಷ್ಟು ಮಚ್ಚೆಗಳಿವೆ ಎಂದು ಎಣಿಸಿದ್ದೀರ ಎಂದು ನಟನಿಗೆ ಪತ್ರಕರ್ತರೊಬ್ಬರು ಅಸಭ್ಯ ಪ್ರಶ್ನೆ ಕೇಳಿದ್ದಾರೆ. ಆದರೆ ಆ ಯುವನಟ ಆ ಪ್ರಶ್ನೆಯನ್ನು ನಗುತ್ತಲೇ ನಿರಾಕರಿಸಿ ಘನತೆ ಪ್ರದರ್ಶಿಸಿದ್ದಾರೆ.

''ಹುಟ್ಟು ಮಚ್ಚೆಗಳು ಎಷ್ಟಿವೆ ಎಣಿಸಿದ್ದೀರ?''

''ಹುಟ್ಟು ಮಚ್ಚೆಗಳು ಎಷ್ಟಿವೆ ಎಣಿಸಿದ್ದೀರ?''

ತೆಲುಗಿನಲ್ಲಿ 'ಡಿಜೆ ಟಿಲ್ಲು' ಹೆಸರಿನ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕಿ ನೇಹಾ ಶೆಟ್ಟಿ ಸೇರಿದಂತೆ ಚಿತ್ರತಂಡ ಸೇರಿತ್ತು. ಆಗ ಪತ್ರಕರ್ತನೊಬ್ಬ, 'ಟ್ರೇಲರ್‌ನಲ್ಲಿ ಹದಿನಾರು ಮಚ್ಚೆಗಳು ಎಂಬ ವಿಷಯ ಇದೆ. ನೀವು ನಟಿಯ ದೇಹದ ಮೇಲೆ ಎಷ್ಟು ಮಚ್ಚೆಗಳಿವೆ ಎಂದು ಎಣಿಸಿದ್ದೀರ? ಆ ಅವಕಾಶ ನಿಮಗೇನಾದರೂ ಸಿಕ್ಕಿದೆಯಾ? ಎಂದು ಪ್ರಶ್ನೆ ಮಾಡಿದ್ದಾನೆ.

ಪ್ರಶ್ನೆಗೆ ಉತ್ತರಿಸದ ನಟ ಸಿದ್ದು ಜೊನ್ನಲಗಡ್ಡ

ಪ್ರಶ್ನೆಗೆ ಉತ್ತರಿಸದ ನಟ ಸಿದ್ದು ಜೊನ್ನಲಗಡ್ಡ

ಪ್ರಶ್ನೆ ಕೇಳಿ ಶಾಕ್ ಆದ ಸಿನಿಮಾದ ನಾಯಕ ನಟ ಸಿದ್ದು ಜೊನ್ನಲಗಡ್ಡ ವಿನಯವಾಗಿಯೇ, 'ಸರ್ ನಾನು ಈ ಪ್ರಶ್ನೆಗೆ ಉತ್ತರಿಸಿದೇ ಇರಲು ಇಚ್ಛಿಸುತ್ತೇನೆ'' ಎಂದು ಹೇಳಿ ಸುಮ್ಮನಾದರು. ಪ್ರಶ್ನೆ ಕೇಳಿದಾಗ ಅಲ್ಲಿಯೇ ಇದ್ದ ನಟಿ ನೇಹಾ ಶೆಟ್ಟಿ ಸಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ಮತ್ತೊಬ್ಬ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವುದರಲ್ಲಿ ನಿರತರಾದರು. ಆದರೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತನ ಪ್ರಶ್ನೆಯ ಕುರಿತಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ನಟಿ ಆಕ್ರೊಶ

ಟ್ವಿಟ್ಟರ್‌ನಲ್ಲಿ ನಟಿ ಆಕ್ರೊಶ

ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನಟಿ ನೇಹಾ ಶೆಟ್ಟಿ, ''ಟ್ರೇಲರ್‌ನಲ್ಲಿ ಪತ್ರಕರ್ತನೊಬ್ಬ ಈ ಪ್ರಶ್ನೆ ಕೇಳಿದ್ದು ದುರಾದೃಷ್ಟಕರ. ಆದರೆ ಈ ಘಟನೆಯು ಆ ಪತ್ರಕರ್ತನ ವ್ಯಕ್ತಿತ್ವವನ್ನು ಜಗಜ್ಜಾಹೀರು ಮಾಡಿದೆ. ಆತನಿಗೆ ಸ್ವತಃ ತನ್ನ ಮೇಲೆ, ಮನೆಯಲ್ಲಾಗಲಿ, ಉದ್ಯೋಗ ಸ್ಥಳದಲ್ಲಾಗಲಿ ತನ್ನ ಸುತ್ತಲೂ ಇರುವ ಮಹಿಳೆಯರ ಮೇಲೆ ಎಷ್ಟು ಗೌರವ ಇದೆಯೆಂಬುದನ್ನು ತೋರಿಸುತ್ತದೆ'' ಎಂದಿದ್ದಾರೆ. ಅದೇ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆ ಪತ್ರಕರ್ತ, 'ರೊಮ್ಯಾಂಟಿಕ್ ಸಿನಿಮಾ ಆಗಿದ್ದ ಕಾರಣ ನಾನು ಹಾಗೆ ರೊಮ್ಯಾಂಟಿಕ್ ಪ್ರಶ್ನೆ ಕೇಳಿದೆನೇ ಹೊರತು, ಕೆಟ್ಟ ಉದ್ದೇಶ ನನಗೆ ಇರಲಿಲ್ಲ'' ಎಂದಿದ್ದಾನೆ.

ನಿರ್ಮಾಪಕ ಸಹ ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ

ನಿರ್ಮಾಪಕ ಸಹ ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ

ಆದರೆ ಅದೇ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಾಗ ವಂಶಿ ಸಹ ನಟಿಯ ಬಗ್ಗೆ ಇಂಥಹುದೇ ಒಂದು ಕಮಂಟ್ ಮಾಡಿದ್ದಾರೆ. ಆ ವಿಡಿಯೋವನ್ನು ನಟಿಯ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಕೆಲವರು ಪೋಸ್ಟ್ ಮಾಡಿದ್ದಾರೆ. ಪತ್ರಕರ್ತರೊಬ್ಬರು, ಈ ಸಿನಿಮಾ ನಾಗವಂಶಿಯವರ ಬಯೋಪಿಕ್ ಅಲ್ಲ ತಾನೆ ಎಂದು ತಮಾಷೆಯಾಗಿ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ನಾಗ ವಂಶಿ, 'ಇಂಥಹಾ ಅಂದವಾದ ನಾಯಕಿಗೆ ಮುತ್ತು ಕೊಡುವ ಅವಕಾಶ ಸಿಕ್ಕರೆ ನಾನೇ ನಟನೆ ಮಾಡುತ್ತಿದ್ದೇ ಬೇರೆ ಯಾರಿಗೋ ಏಕೆ ಅವಕಾಶ ಬಿಟ್ಟುಕೊಡುತ್ತಿದ್ದೆ'' ಎಂದಿದ್ದಾರೆ. ನಾಗ ವಂಶಿ ಆಡಿದ ಮಾತಿನ ಬಗ್ಗೆಯೂ ಮಾತನಾಡಿ ಎಂದು ಕೆಲವು ನೆಟ್ಟಿಗರು ನಟಿಯನ್ನು ಒತ್ತಾಯಿಸಿದ್ದಾರೆ.

More from Filmibeat

English summary
Actress Neha Shetty angry on journalist asking about her birth marks on body. She lambasted on journalist on twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X