ನಿಶ್ಚಿತಾರ್ಥ ಸಂಭ್ರಮದಲ್ಲಿ ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ

By ಫಿಲ್ಮ್ ಡೆಸ್ಕ್

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕುಟುಂಬದ ಏಕೈಕ ಹೆಣ್ಣು ಮಗಳು ನಟಿ ನಿಹಾರಿಕಾ ಕೊನಿಡೆಲಾ ಅವರ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಉದ್ಯಮಿ ಚೈತನ್ಯ ಜೊನ್ನಲಗೆಡ್ಡ ಅವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Recommended Video

ಎಲ್ಲಾ ನಮಗೆ ಬೇಕು ಅನ್ನೋರಲ್ಲ ನಾವು | ShivaRajKumar | DCM Ashwath Narayan | Filmibeat Kannada

ಗೌಪ್ಯವಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ನಿಹಾರಿಕಾ ನಿಶ್ಚಿತಾರ್ಥದ ಸುದ್ದಿ ಕಳೆದ ಕೆಲವು ತಿಂಗಳ ಹಿಂದೆಯೇ ವೈರಲ್ ಆಗಿತ್ತು. ರಹಸ್ಯವಾಗಿ ನಿಹಾರಿಕಾ ಎಂಜೇಗ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಭಾವಿ ಪತಿಯನ್ನು ಪರಿಚಯಿಸಿ ಎಂಗೇಜ್ ಮೆಂಟ್ ಇನ್ನೂ ನಡೆದಿಲ್ಲ ಎಂದು ಹೇಳಿದ್ದರು. ಮುಂದೆ ಓದಿ..

ನಿಹಾರಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಮೆಗಾಸ್ಟಾರ್ ಕುಟುಂಬ

ನಿಹಾರಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಮೆಗಾಸ್ಟಾರ್ ಕುಟುಂಬ

ಹೈದರಾಬಾದ್ ನಲ್ಲಿ ನಡೆಯುತ್ತಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಚಿರಂಜೀವಿ, ರಾಮ್ ಚರಣ್ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದ್ದಂತೆ ಇಡೀ ಕುಟುಂಬ ನಿಹಾರಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ತಿಂಗಳ ಹಿಂದೆ ಭಾವಿ ಪತಿಯನ್ನು ಪರಿಚಯಿಸಿದ್ದ ನಿಹಾರಿಕಾ

ತಿಂಗಳ ಹಿಂದೆ ಭಾವಿ ಪತಿಯನ್ನು ಪರಿಚಯಿಸಿದ್ದ ನಿಹಾರಿಕಾ

ಕಳೆದ ತಿಂಗಳು ನಿಶ್ಚಿತಾರ್ಥದ ಸುದ್ದಿ ವೈರಲ್ ಆಗುತ್ತಿದ್ದಂತೆ ನಿಹಾರಿಕಾ ಭಾವಿ ಪತಿಯನ್ನು ಪರಿಚಯಿಸಿದ್ದರು. ಭಾವಿ ಜೊತೆ ಫೋಟೋ ಹಂಚಿಕೊಂಡಿದ್ದ ನಿಹಾರಿಕಾ ಅಧಿಕೃತವಾಗಿ ಎಂಗೇಜ್ ಮೆಂಟ್ ನಡೆದಿಲ್ಲ. ಆದರೆ ಎಂಗೇಜ್ ಆಗಿರುವ ವಿಚಾರವನ್ನು ಅನೌನ್ಸ್ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಇವತ್ತು ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಯಾರು?

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಯಾರು?

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಚೈತನ್ಯ ಜೊನ್ನಲಗೆಡ್ಡ ಉದ್ಯಮಿ. ಹೈದರಾಬಾದ್ ನ ಖ್ಯಾತ ಎಂ ಎನ್ ಸಿ ಕಂಪನಿಯನ್ನು ನಡೆಸುತ್ತಿದ್ದಾರೆ. ಚೈತನ್ಯ ಗುಂಟೂರ್ ನ ಇನ್ಸ್ ಪೆಕ್ಟರ್ ಜನರೆಲ್ ಆಫ್ ಪೊಲೀಸ್ ಪ್ರಭಾಕರ್ ರಾವ್ ಅವರ ಪುತ್ರ. ಹೈದರಾಬಾದ್ ನಲ್ಲಿಯೆ ಹುಟ್ಟಿ ಬೆಳೆದ ಚೈತನ್ಯ ವಿದ್ಯಾಭ್ಯಾಸ ಸಹ ಹೈದರಾಬಾದ್ ನಲ್ಲಿಯೇ ಮುಗಿಸಿದ್ದಾರೆ.

ವರ್ಷದ ಕೊನೆಯಲ್ಲಿ ಮದುವೆ

ವರ್ಷದ ಕೊನೆಯಲ್ಲಿ ಮದುವೆ

ಚೈತನ್ಯ, ಮೆಗಾಸ್ಟಾರ್ ಕುಟುಂಬದವರು ಹುಡುಕಿದ ಹುಡುಕ. ಕುಟುಂಬದವರು ಹುಡುಕಿದ ಹುಡುಗನನ್ನೆ ಇಷ್ಟಪಟ್ಟು ಅರೆಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ನಿಹಾರಿಕಾ ಮದುವೆ ಈ ವರ್ಷದ ಕೊನೆಯಲ್ಲಿ ಅತವಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Actress Niharika to get engaged with Chaitanya on August 13th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X