For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಣ್ಣ ಹಚ್ಚಲು ಸಜ್ಜಾದ ನಟಿ ನಿಖಿತಾ ತುಕ್ರಾಲ್

  |

  ದಕ್ಷಿಣ ಭಾರತದ ಖ್ಯಾತ ನಟಿ ನಿಖಿತಾ ತುಕ್ರಾಲ್ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಮದುವೆ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಿಖಿತಾ ಸುಮಾರು ಮೂರು ವರ್ಷದ ಬಳಿಕ ಮತ್ತೆ ಕ್ಯಾಮರಾ ಮುಂದೆ ಬರ್ತಿರುವ ವಿಚಾರ ಅಭಿಮಾನಿಗಳಿಗೆ ಸಂತಸ ನೀಡಿದೆ.

  ಸುಮಾರು 10 ವರ್ಷಗಳಿಂದ ಸಿನಿಮಾರಂಗದಲ್ಲಿ ಅಕ್ಟೀವ್ ಆಗಿದ್ದ ನಿಖಿತಾ ಕನ್ನಡ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆಗಳಲ್ಲಿ ಮಿಂಚಿದ್ದಾರೆ. ಕನ್ನಡದಲ್ಲಿ ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ನಟಿ ನಿಖಿತಾ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.

  2017ರಲ್ಲಿ ಮುಂಬೈ ಮೂಲದ ವ್ಯಕ್ತಿ ಜೊತೆ ವಿವಾಹ ಬಂಧನಕ್ಕೆ ಒಳಗಾದ ನಿಖಿತಾ ನಂತರ ಸಿನಿಮಾದಿಂದ ದೂರ ಸರಿದರು. ಮುದ್ದಾದ ಮಗುವಿನ ತಾಯಿಯಾಗಿರುವ ನಿಖಿತ ಮಗಳು ಮತ್ತು ಸಂಸಾರ ಅಂತ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

  ಇತ್ತೀಚಿಗೆ ನಿಖಿತಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದರು. ಅಂದ್ಹಾಗೆ ನಿಖಿತಾ ಸದ್ಯ ಮತ್ತೆ ಬಣ್ಣ ಹಚ್ಚುತ್ತಿರುವುದು ವೆಬ್ ಸೀರಿಸ್ ಗಾಗಿ. ಹೌದು, ತೆಲುಗು ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

  Recommended Video

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

  ವೆಬ್ ಸೀರಿಸ್ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಆದರೆ ಯಾವುದರ ಬಗ್ಗೆಯೂ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಅಂದ್ಮೇಲೆ ಕನ್ನಡಕ್ಕೆ ವಾಪಸ್ ಆಗ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ. ಅದೇನೆ ಇರ್ಲಿ ಸದ್ಯದಲ್ಲೇ ವೆಬ್ ಸೀರಿಸ್ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬರಲಿದ್ದಾರೆ.

  English summary
  Actress Nikita Thukral is back in front of the Camera.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X