Nithya Menen: ಮದುವೆ ಬಗ್ಗೆ 'ಕೋಟಿಗೊಬ್ಬ'ನ ಸುಂದರಿ ನಿತ್ಯಾ ಮೆನನ್ ಹೇಳಿದ್ದೇನು?

ಸಿನಿಮಾ ನಟಿಯರ ಮದುವೆ ವಿಷಯ ಯಾವಾಗಲು ದೊಡ್ಡ ಸುದ್ದಿಯಾಗುತ್ತದೆ. ಅದರಲ್ಲೂ 25, 30 ವರ್ಷ ತುಂಬಿದರೇ ಸಾಕು ನಟಿಯರ ಮದುವೆ ಸುದ್ದಿಯ ಹಿಂದೆ ಬೀಳುತ್ತಾರೆ ಜನ. ನಟಿ ನಿತ್ಯಾ ಮೆನನ್ ಮದುವೆ ಕೂಡ ಹೆಚ್ಚು ಸುದ್ದಿಯಲ್ಲಿರುತ್ತದೆ. ಕಳೆದ ವರ್ಷ ಕೂಡ ಅವರು ಮಲಯಾಳಂನ ಪ್ರಖ್ಯಾತ ನಟನನ್ನು ಮದುವೆಯಾಗುತ್ತಾರೆ ಎಂದು ವದಂತಿ ಹರಡಿತ್ತು.

ನಿತ್ಯಾ ಮೆನನ್ ಇತ್ತೀಚೆಗೆ 'ಕುಮಾರಿ ಶ್ರೀಮತಿ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಮದುವೆ ವದಂತಿ ಬಗ್ಗೆ ನಟಿ ನಿತ್ಯಾ ಮೆನನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟನೆ ನೀಡಿ ವಿಡಿಯೋ ಹಂಚಿಕೊಂಡಿದ್ದರು. ತಾವು ಮದುವೆಯಾಗುತ್ತಿಲ್ಲ ಇದೆಲ್ಲ ಕಟ್ಟು ಕಥೆ ಎಂದಿದ್ದರು. ಇದಾದ ಬಳಿಕ ಈಗ ಮತ್ತೆ ಅವರ ಮದುವೆ ಬಗ್ಗೆ ಮಾತನಾಡಿದ್ದಾರೆ.

actress-nithya-menon

ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ನಿತ್ಯಾ ಮೆನನ್

ನ್ಯೂಸ್ 18 ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ನಟಿ ನಿತ್ಯಾ ಮೆನನ್ ಮದುವೆಯಾಗಲು ತನ್ನ ಮೇಲೆ ಯಾವುದೇ ಕೌಟುಂಬಿಕ ಒತ್ತಡವಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಸಮಾಜದ ನಿರೀಕ್ಷೆಗಳಿಗೆ ಬಲಿಯಾಗುವುದಕ್ಕಿಂತ ಹೆಚ್ಚಾಗಿ ತನ್ನ ಆಸೆಯಂತೆ ಬದುಕಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

"ನಾನು ಈಗ ಇದನ್ನು ಮೀರಿ ಬೆಳೆದಿದ್ದೇನೆ. ನಾನು ಏನು ಮಾಡಬೇಕೆಂದು ಯಾರಾದರೂ ಹೇಳಬೇಕು ಎಂದು ನನಗೆ ಅನಿಸುವುದಿಲ್ಲ. ಆ ನಿಟ್ಟಿನಲ್ಲಿ ನನ್ನ ಹೆತ್ತವರು ನನಗೆ ಬೆಂಬಲ ನೀಡಿದ್ದಾರೆ. ಅವರು ನನಗೆ ಸ್ವಾತಂತ್ರ್ಯದ ಅಮೂಲ್ಯ ಉಡುಗೊರೆ ನೀಡಿದ್ದಾರೆ. ಸ್ವಾತಂತ್ರ್ಯವಿಲ್ಲದ ಜೀವನ ನಾನು ಊಹಿಸಲು ಸಾಧ್ಯವಿಲ್ಲ. ಅದನ್ನು ನನ್ನ ತಂದೆ ತಾಯು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.

ಇನ್ನು, "ತಾನು ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವುದನ್ನು ನೋಡಲು ನನ್ನ ಕುಟುಂಬ ಹೆಚ್ಚು ಸಂತೋಷಪಡುತ್ತದೆ. ಆದರೆ ಅವರನ್ನೇ ಮದುವೆಯಾಗಲು ಎಂದಿಗೂ ಒತ್ತಾಯಿಸುವುದಿಲ್ಲ. ನನ್ನ ಜೊತೆಗೆ ಒಬ್ಬರು ಇಲ್ಲದಿದ್ದರೇ ನಾನು ಖುಷಿಯಾಗಿರುವುದಿಲ್ಲ ಎಂದು ಅವರು ಕೂಡ ಭಾವಿಸುವುದಿಲ್ಲ" ಎಂದು ಕುಟುಂಬದ ಬಗ್ಗೆ ತಿಳಿಸಿದ್ದಾರೆ.

actress-nithya-menon

ಅಜ್ಜಿಯಿಂದ ಮದುವೆಯಾಗಲು ಒತ್ತಡವಿತ್ತು!

ಇನ್ನು, ತನ್ನ ಅಜ್ಜಿ ಇದ್ದಾಗ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು ಎಂದು ನಟಿ ನಿತ್ಯಾ ಮೆನನ್ ಬಹಿರಂಗಪಡಿಸಿದ್ದಾರೆ. ಅವರು ಸಂಪ್ರದಾಯವನ್ನು ಹೆಚ್ಚು ಅನುಸರಿಸುತ್ತಿದ್ದರು. ಸೂಕ್ತವಾದ ಸಮಯದಲ್ಲಿ ಮದುವೆಯಾಗಬೇಕು ಎನ್ನುತ್ತಿದ್ದರು. ನಾನು ಎಷ್ಟು ದೊಡ್ಡ ನಟಿ ಎಂಬುದನ್ನು ಆಕೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಯುವತಿಗೆ 30 ವರ್ಷ ತುಂಬಿದ ತಕ್ಷಣ ಆಕೆ ಹಲವಾರು ಒತ್ತಡಗಳಿಗೆ ಒಳಗಾಗಬೇಕಾಗುತ್ತದೆ. ಜನರು ಹೇಳಿದ ಕೆಲಸಗಳನ್ನು ಮಾಡಿದರೇ ನಿಮ್ಮನ್ನು ಒಳ್ಳೆಯವರು ಎಂದು ಲೇಬಲ್ ಮಾಡಲಾಗುತ್ತದೆ. ಇಲ್ಲದಿದ್ದರೇ ನಿಮ್ಮನ್ನು ಕೆಟ್ಟವರು ಎನ್ನಲಾಗುತ್ತದೆ ಎಂದು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಅನುಭವಿಸುವ ಕಷ್ಟವನ್ನು ತಿಳಿಸಿದ್ದಾರೆ.

ನಟಿ ನಿತ್ಯಾ ಮೆನನ್ಸ್ ಸಿನಿಮಾಗಳು

ನಿತ್ಯಾ ಮೆನನ್ ಅವರ D50ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2024 ರಲ್ಲಿ ಬಿಡುಗಡೆಯಾಗಲಿದೆ. ನಟ ಧನುಷ್ ಅವರ 50 ನೇ ಸಿನಿಮಾ ಇದಾಗಿದ್ದು, ಅವರೆ ಬರೆದು, ನಿರ್ದೇಶಿಸಿ ಮತ್ತು ನಟಿಸಲಿದ್ದಾರೆ. ಚಿತ್ರದಲ್ಲಿ ಎಸ್‌.ಜೆ ಸೂರ್ಯ, ಸಂದೀಪ್ ಕಿಶನ್ ಮತ್ತು ಕಾಳಿದಾಸ್ ಜಯರಾಮ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರ 'ಕುಮಾರಿ ಶ್ರೀಮತಿ' ವೆಬ್ ಸರಣಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Actress Nithya Menen on her marriage plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X