'ಗೆಳೆಯ'ನ ಪತ್ನಿ ವಿರುದ್ಧ ದೂರು ನೀಡಿದ ಪವಿತ್ರಾ ಲೊಕೇಶ್

By ಫಿಲ್ಮಿಬೀಟ್ ಡೆಸ್ಕ್

ಕನ್ನಡದ ನಟಿ ಪವಿತ್ರಾ ಲೋಕೇಶ್‌ ಮತ್ತೆ ಸುದ್ದಿಗೆ ಬಂದಿದ್ದಾರೆ. ತೆಲುಗಿನ ಹಿರಿಯ ನಟ ನರೇಶ್‌ ಜೊತೆ ಲಿವಿನ್‌ ರಿಲೇಶನ್‌ಶಿಪ್‌ನಲ್ಲಿರುವ ಪವಿತ್ರಾ ಲೋಕೇಶ್ ಇದೇ ಕಾರಣಕ್ಕೆ ಸುದ್ದಿಯಾಗಿದ್ದರು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ತಮ್ಮ ಮದುವೆಯಾದವರನ್ನು ತೊರೆದು ಇದೀಗ ಒಟ್ಟಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿ, ತಮಗೆ ನ್ಯಾಯ ಸಿಗಬೇಕೆಂದು ನರೇಶ್‌ರ ಪತ್ನಿ ರಮ್ಯಾ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ್ದು, ಅದಕ್ಕೆ ಪ್ರತಿಯಾಗಿ ನರೇಶ್ ಸಹ ಸುದ್ದಿಗೋಷ್ಠಿ ನಡೆಸಿದ್ದರು.

ಈ ಪ್ರಕರಣದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಪವಿತ್ರಾ ಲೋಕೇಶ್‌ರ ಪತಿ ಸುಚೇಂದ್ರ ಪ್ರಸಾದ್ ಸಹ ಪವಿತ್ರಾರ ಬಗ್ಗೆ ಕಟುವಾಗಿ ಮಾತನಾಡಿದ್ದರು. ಇದೀಗ ಪವಿತ್ರಾ ಲೋಕೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಪವಿತ್ರಾ ಅವರು ತಮ್ಮ 'ಗೆಳೆಯ' ನರೇಶ್‌ರ ಪತ್ನಿ ರಮ್ಯಾ ವಿರುದ್ಧ ದೂರು ನೀಡಿದ್ದಾರೆ.

ಯೂಟ್ಯೂಬ್ ಚಾನೆಲ್‌, ವೆಬ್‌ ಸೈಟ್‌ಗಳ ವಿರುದ್ಧ ದೂರು

ಯೂಟ್ಯೂಬ್ ಚಾನೆಲ್‌, ವೆಬ್‌ ಸೈಟ್‌ಗಳ ವಿರುದ್ಧ ದೂರು

ತಮ್ಮ ಮಾನಹಾನಿಗೆ ಕೆಲವು ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣದ ಟ್ರೋಲ್ ಪೇಜ್‌ಗಳು ಯತ್ನಿಸುತ್ತಿವೆ ಎಂದು ಪವಿತ್ರಾ ಲೋಕೇಶ್‌ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ದೂರಿನಲ್ಲಿ ನರೇಶ್‌ರ ಮೂರನೇ ಪತ್ನಿ ರಮ್ಯಾ ರಘುಪತಿ ಬಗ್ಗೆಯೂ ದೂರು ನೀಡಿದ್ದಾರೆಂದು ಇದೀಗ ತಿಳಿದು ಬಂದಿದೆ.

ರಮ್ಯಾ ರಘುಪತಿ ವಿರುದ್ಧ ಪವಿತ್ರಾ ಲೋಕೇಶ್ ದೂರು

ರಮ್ಯಾ ರಘುಪತಿ ವಿರುದ್ಧ ಪವಿತ್ರಾ ಲೋಕೇಶ್ ದೂರು

ಪವಿತ್ರಾ ಲೋಕೇಶ್ ನೀಡಿರುವ ದೂರಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತೆಲಂಗಾಣ ಸೈಬರ್ ಪೊಲೀಸ್ ವಿಭಾಗದ ಎಸಿಪಿ ಪ್ರಸಾದ್, ''ತಮ್ಮ ಬಗ್ಗೆ ಅಶ್ಲೀಲವಾಗಿ, ಅಸಭ್ಯವಾಗಿ ಕೆಲವು ಯೂಟ್ಯೂಬ್ ಚಾನೆಲ್‌ಗಳು ಸುದ್ದಿ ಪ್ರಸಾರ ಮಾಡಿವೆ. ವೆಬ್‌ ಸೈಟ್‌ನಲ್ಲಿಯೂ ನನ್ನ ತೇಜೋಹಾನಿ ಮಾಡುವ ರೀತಿ ಸುದ್ದಿಗಳನ್ನು ಬರೆಯಲಾಗಿದೆ. ಇವುಗಳ ಹಿಂದೆ ನರೇಶ್‌ರ ಮೂರನೇ ಪತ್ನಿ ರಮ್ಯಾ ರಘುಪತಿ, ಶಿವಕುಮಾರಿ ಹಾಗೂ ರಾಮರಾವ್ ಅವರುಗಳು ಇದ್ದಾರೆ ಎಂಬ ಶಂಕೆಯನ್ನು ಪವಿತ್ರಾ ಲೋಕೇಶ್ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ'' ಎಂದಿದ್ದಾರೆ.

ಹದಿನೈದು ಯೂಟ್ಯೂಬ್‌ ಚಾನೆಲ್‌ಗಳಿಗೆ ನೊಟೀಸ್

ಹದಿನೈದು ಯೂಟ್ಯೂಬ್‌ ಚಾನೆಲ್‌ಗಳಿಗೆ ನೊಟೀಸ್

ಪವಿತ್ರಾ ಲೋಕೇಶ್ ದೂರು ನೀಡಿರುವ ಜೊತೆಗೆ ಅದಕ್ಕೆ ಪೂರಕವಾಗಿ ಕೆಲವು ಲಿಂಕ್‌ಗಳನ್ನು ಸಹ ಸಾಕ್ಷ್ಯದ ರೂಪದಲ್ಲಿ ನೀಡಿದ್ದು, ಎಲ್ಲವನ್ನೂ ಪರಿಶೀಲಿಸಿರುವ ಸೈಬರ್ ಪೊಲೀಸರು ಹದಿನೈದು ಯೂಟ್ಯೂಬ್ ಚಾನೆಲ್‌ಗಳು, ಕೆಲವು ವೆಬ್‌ಸೈಟ್‌ಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಆದರೆ ತನಿಖೆಯ ಈ ಹಂತದಲ್ಲಿ ರಮ್ಯಾ ರಘುಪತಿ, ಶಿವಕುಮಾರಿ ಹಾಗೂ ರಾಮರಾವ್ ಅವರನ್ನು ವಿಚಾರಣೆಗೆ ಕರೆಸುತ್ತಿಲ್ಲ ಎಂದು ಹೇಳಿದ್ದಾರೆ.

ಪವಿತ್ರಾಗೆ ಎರಡು ಮದುವೆ, ನರೇಶ್‌ಗೆ ಮೂರು ಮದುವೆ!

ಪವಿತ್ರಾಗೆ ಎರಡು ಮದುವೆ, ನರೇಶ್‌ಗೆ ಮೂರು ಮದುವೆ!

ನಟಿ ಪವಿತ್ರಾ ಲೋಕೇಶ್‌ ಮೊದಲೊಬ್ಬರನ್ನು ಮದುವೆಯಾಗಿ ಆ ಬಳಿಕ ನಟ ಸುಚೇಂದ್ರ ಪ್ರಸಾದ್ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಅವರಿಂದಲೂ ದೂರವಾಗಿ ನಟ ನರೇಶ್‌ ಜೊತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಇನ್ನು ನರೇಶ್‌ ಈ ವರೆಗೆ ಮೂರು ಮದುವೆಗಳನ್ನಾಗಿದ್ದಾರೆ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕನ್ನಡತಿಯಾಗಿದ್ದು ಮಾಜಿ ಮಂತ್ರಿ ರಘುಪತಿ ಅವರ ಪುತ್ರಿಯಾಗಿದ್ದಾರೆ. ರಮ್ಯಾಗೆ ಇನ್ನೂ ವಿಚ್ಛೇದನ ನೀಡದೆ ನರೇಶ್, ಪವಿತ್ರಾ ಲೊಕೇಶ್‌ ಜೊತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಓಡಿ ಶೀಘ್ರದಲ್ಲಿಯೇ ವಿವಾಹ ವಾಗಲಿದ್ದಾರೆ ಎನ್ನಲಾಗಿದೆ.

More from Filmibeat

English summary
Actress Pavithra Lokesh gave complaint against Naresh's wife Ramya Raghupati. She alleged that some YouTube channels and Web sites trying to defame her with the support of Ramya Raghupati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X