For Quick Alerts
  ALLOW NOTIFICATIONS  
  For Daily Alerts

  ಎಲ್ಲಾ ಲವ್‌ ಸ್ಟೋರಿಗಳನ್ನು ಮೀರಿಸಿದ 'ಪವಿತ್ರ' ಲವ್ ಸ್ಟೋರಿ: ಟಾಲಿವುಡ್‌ನಲ್ಲಿ ಇದೇ ಹಾಟ್ ಟಾಪಿಕ್!

  |

  ತೆಲುಗು ಚಿತ್ರರಂಗದಲ್ಲೀಗ ನಿಂತ್ರು ಕುಂತ್ರು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಲವ್ ಸ್ಟೋರಿ ಬಗ್ಗೆ ಚರ್ಚೆ ಆಗುತ್ತಿದೆ. ಇಬ್ಬರೂ ತಮ್ಮ ಮದುವೆ ಜೀವನ ಪಕ್ಕಕ್ಕಿಟ್ಟು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನುವು ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಮೈಸೂರಿನ ಹೋಟೆಲ್‌ನಲ್ಲಿ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಎದುರು ನರೇಶ್ - ಪವಿತ್ರಾ ಲೋಕೇಶ್ ಒಂದೇ ರೂಮ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡಿದ್ದ ವಿಡಿಯೂ ಸಖತ್ ವೈರಲ್ ಆಗಿತ್ತು.

  Recommended Video

  ಇದು ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ | Pavithra Lokesh and Naresh *Sandalwood

  ಪವಿತ್ರಾ ಲೋಕೇಶ್ ನಾನು ನರೇಶ್ ಆತ್ಮೀಯ ಸ್ನೇಹಿತರು ಎಂದು ಹೇಳಿದ್ದರು. ಒಂದಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹಾಗಾಗಿ ನಮ್ಮಿಬ್ಬರ ನಡುವೆ ಒಳ್ಳೆ ಸ್ನೇಹ ಇದೆ ಅಷ್ಟೆ. ಅದು ಬಿಟ್ಟು ನಾವಿಬ್ಬರು ಮದುವೆ ಆಗಿದ್ದೀವಿ ಅನ್ನುವುದೆಲ್ಲಾ ಸುಳ್ಳು ಎಂದಿದ್ದರು. ಇದೇ ಮಾತನ್ನು ನಟ ನರೇಶ್ ಕೂಡ ಹೇಳಿದ್ದರು. ಪತ್ನಿ ರಮ್ಯಾ ರಘುಪತಿ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು.

  ತಿಂಗಳಿಗೆ 25 ಲಕ್ಷ ರೂ, ಕೈ ಕೊಟ್ಟರೆ 50 ಕೋಟಿ ರೂ.: ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ ನಿಜಾನಾ?ತಿಂಗಳಿಗೆ 25 ಲಕ್ಷ ರೂ, ಕೈ ಕೊಟ್ಟರೆ 50 ಕೋಟಿ ರೂ.: ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ ನಿಜಾನಾ?

  ಸದ್ಯ ವಿವಾದ ತಣ್ಣಗಾಗಿದ್ದು, ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿದೆ. ಹಾಗಾಗಿ ಇಬ್ಬರೂ ಯಾವುದೇ ಸಿನಿಮಾದಲ್ಲಿ ನಟಿಸ್ತಿಲ್ಲ. ಇನ್ನು ವಿವಾದದ ನಂತರ ಪವಿತ್ರಾ ಲೋಕೇಶ್ ಸಿನಿಮಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿದೆ.

  ನರೇಶ್ - ಪವಿತ್ರಾರದ್ದು ಬೆಸ್ಟ್‌ ಲವ್ ಸ್ಟೋರಿ!

  ಸೋಶಿಯಲ್ ಮೀಡಿಯಾದಲ್ಲೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿ ಸಖತ್ ಟ್ರೋಲ್ ಆಗ್ತಿದೆ. ತೆಲುಗಿನ ಸೂಪರ್ ಹಿಟ್ ಸಿನಿಮಾಗಳ ಪೋಸ್ಟರ್‌ಗಳ ಜೊತೆಗೆ ಇವರಿಬ್ಬರ ಫೋಟೊ ಸೇರಿಸಿ 'ಪವಿತ್ರ ಪ್ರೇಮ' ಎಂದು ಕ್ಯಾಪ್ಷನ್ ಕೊಟ್ಟು ವೈರಲ್ ಮಾಡುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ 'ಆರ್ಯ', 'ಡಾರ್ಲಿಂಗ್', 'ಸೀರಾ ರಾಮಂ' ಸಿನಿಮಾಗಳ ಪೋಸ್ಟರ್ ಜೊತೆ ನರೇಶ್ ಹಾಗೂ ಪವಿತ್ರಾ ಫೋಟೊ ಕೊಲಾಜ್ ಮಾಡಿ ಮೀಮ್ಸ್ ಕ್ರಿಯೇಟ್ ಮಾಡಿ ಹಲ್‌ಚಲ್ ಎಬ್ಬಿಸಿದ್ದಾರೆ. ಇವರದ್ದು ನಿಜವಾದ ಲವ್ ಸ್ಟೋರಿ, ಪ್ರೀತಿಗೆ ಕಣ್ಣಿಲ್ಲ, ಇವರಿಬ್ಬರ ಕಥೆಯನ್ನು ಸಿನಿಮಾ ಮಾಡಿ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.

  ಶ್ರೀದೇವಿ ಡ್ರಾಮ ಕಂಪನಿಯಲ್ಲಿ ನರೇಶ್-ಪವಿತ್ರಾ ಮದುವೆ: ವಿಡಿಯೋ ವೈರಲ್!ಶ್ರೀದೇವಿ ಡ್ರಾಮ ಕಂಪನಿಯಲ್ಲಿ ನರೇಶ್-ಪವಿತ್ರಾ ಮದುವೆ: ವಿಡಿಯೋ ವೈರಲ್!

   ಇಬ್ಬರ ಎಂಟ್ರಿಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ

  ಇಬ್ಬರ ಎಂಟ್ರಿಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ

  ಇತ್ತೀಚೆಗೆ ರವಿತೇಜಾ ನಟನೆಯ 'ರಾಮಾರಾವ್ ಆನ್ ಡ್ಯೂಟಿ' ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಣ್ಣ- ತಂಗಿ ಆಗಿ ಬಣ್ಣ ಹಚ್ಚಿದ್ದರು. ಆಂಧ್ರದಲ್ಲಿ ಇವರಿಬ್ಬರು ಸಿಲ್ವರ್‌ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರು ಹುಚ್ಚೆದ್ದು ಶಿಳ್ಳೆ ಚಪ್ಪಾಳೆ ಹೊಡೆದು ಕಿರುಚಾಡಿದ್ದರು. ಹೀರೊ ರವಿತೇಜಾ ಎಂಟ್ರಿಗೆ ಸಿಗದ ರೆಸ್ಪಾನ್ಸ್ ಇವರಿಬ್ಬರು ತೆರೆಮೇಲೆ ಇದ್ದಷ್ಟು ಹೊತ್ತು ಕಂಡು ಬಂದಿತ್ತು.

   ಡೇಟಿಂಗ್‌ಗಾಗಿ ಇಬ್ಬರ ನಡುವೆ ಒಪ್ಪಂದ?

  ಡೇಟಿಂಗ್‌ಗಾಗಿ ಇಬ್ಬರ ನಡುವೆ ಒಪ್ಪಂದ?

  ನಟ ನರೇಶ್ ಜೊತೆ ಡೇಟಿಂಗ್ ಮಾಡುವುದಕ್ಕೆ ನಟಿ ಪವಿತ್ರಾ ಲೋಕೇಶ್ ಒಂದು ಒಪ್ಪಂದ ಮಾಡಿಕೊಂಡಿದ್ದರು ಅನ್ನುವ ಮಾತುಗಳು ಇತ್ತೀಚೆಗೆ ಕೇಳಿ ಬಂದಿತ್ತು. ಆ ಗಾಳಿ ಸುದ್ದಿ ಪ್ರಕಾರ ನರೇಶ್ ತಿಂಗಳಿಗೆ 25 ಲಕ್ಷ ರೂ. ಹಣವನ್ನು ಪವಿತ್ರಾ ಲೋಕೇಶ್‌ಗೆ ನೀಡುತ್ತಿದ್ದಾರಂತೆ. ಅಪ್ಪಿ ತಪ್ಪಿ ಪವಿತ್ರಾ ಲೋಕೇಶ್‌ಗೆ ಕೈ ಕೊಟ್ಟರೆ ಪರಿಹಾರವಾಗಿ 50 ಕೋಟಿ ರೂ. ಕೊಡುವಂತಹ ವಿಚಿತ್ರ ಒಪ್ಪಂದ ಅದು ಅನ್ನಲಾಗುತ್ತಿದೆ.

   ಮದುವೆ ಬೇಡ ಎಂದು ನಿರ್ಧಾರ

  ಮದುವೆ ಬೇಡ ಎಂದು ನಿರ್ಧಾರ

  ತೆಲುಗು ನಟ ನರೇಶ್ ಈಗಾಗಲೇ 3 ಮದುವೆ ಆಗಿದ್ದಾರೆ. ಇನ್ನು ಮುಂದೆ ಮದುವೆ ಬೇಡ, ರಿಲೇಶನ್‌ಶಿಪ್ ಸಾಕು. ಇದರಿಂದ ಫ್ಯಾಮಿಲಿ ಗಲಾಟೆ ಇರಲ್ಲ ಎಂದು ತೀರ್ಮಾನಿಸಿದ್ದಾರಂತೆ. ಬರೀ ರಿಲೇಶನ್‌ಶಿಪ್‌ಗೆ ಮಾತ್ರ ಪವಿತ್ರಾ ಲೋಕೇಶ್ ಕೂಡ ಒಪ್ಪಿದ್ದಾರೆ ಅನ್ನುವ ಗುಸುಗುಸು ಕೇಳಿಬರ್ತಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಒಪ್ಪಂದ ನಡೆದಿದೆ ಅನ್ನುವುದು ಕೆಲವರ ವಾದ.

  English summary
  Actress Pavitra Lokesh And Actor Naresh Love Affair Troll In Social Media. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X