"ಇಬ್ಬರಿಂದ ನಾನು ದೂರಾಗಿದ್ಯಾಕೆ? ಅದನ್ನ ಪಬ್ಲಿಕ್‌ ಆಗಿ ಹೇಳೋಕೆ ಸಾಧ್ಯವಿಲ್ಲ"

ಕನ್ನಡ ನಟಿ ಪವಿತ್ರಾ ಲೋಕೇಶ್ ಈಗ ತೆಲುಗು ನಟ ನರೇಶ್ ಜೊತೆ ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ. ತಮ್ಮದೇ ಪ್ರೇಮಕಥೆಯನ್ನು 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ತೆರೆಗೆ ತಂದಿದ್ದಾರೆ. ನರೇಶ್ ಇಬ್ಬರಿಗೆ ಡಿವೋರ್ಸ್ ಕೊಟ್ಟು ಮೂರನೇ ಮದುವೆ ಆಗಿದ್ದಾರೆ. ಪವಿತ್ರಾ ಕೂಡ ಈ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಮದುವೆ ಆಗಿ ನಂತರ ಡಿವೋರ್ಸ್ ಪಡೆದಿದ್ದರು.

ಕೆಲ ವರ್ಷಗಳ ನಂತರ ನಟ ಸುಚೇಂದ್ರ ಪ್ರಸಾದ್ ಜೊತೆ ಪವಿತ್ರಾ ಲೋಕೇಶ್ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ(ಸುಚೇಂದ್ರ ಪ್ರಸಾದ್ ಹೇಳಿದಂತೆ ಗಾಂಧರ್ವ ವಿವಾಹ) ಇದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ 2018ರಲ್ಲಿ ಇಬ್ಬರು ದೂರಾಗಿದ್ದರು. ಆ ನಂತರ ಪವಿತ್ರಾ ಕಳೆದೆರಡು ವರ್ಷಗಳಿಂದ ನರೇಶ್ ಜೊತೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಈ ಹಿಂದಿನ ತಮ್ಮ ಎರಡು ಸಂಬಂಧಗಳ ಬಗ್ಗೆ ಪವಿತ್ರಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಹಿಂದೆ ಇಬ್ಬರ ಜೊತೆ ಜೀವನ ನಡೆಸಿ, ದೂರಾಗಿದ್ದು ಯಾಕೆ? ಅದೇ ತಪ್ಪು ಮತ್ತೆ ಆಗಲ್ವಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

Actress Pavitra Lokesh interesting comments About her past relationships

ಐ ಡ್ರೀಮ್ಸ್ ತೆಲುಗು ಯೂಟ್ಯೂಬ್‌ ಚಾನಲ್‌ನಲ್ಲಿ ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ವಿವರಿಸಿದ್ದಾರೆ. ಯಾರದ್ದು ತಪ್ಪು? ಅಸಲಿಗೆ ಆಗಿದ್ದು ಏನು? ಅನ್ನುವುದನ್ನು ವಿವರಿಸಿದ್ದಾರೆ. ತಮ್ಮ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಯಾಕೆ? ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ, ಅದನ್ನೆಲ್ಲಾ ನಾನು ಹೇಳುವುದು ಇಲ್ಲ ಎಂದು ಪವಿತ್ರಾ ಪ್ರತಿಕ್ರಿಯಿಸಿದ್ದಾರೆ.

ಪಾರದರ್ಶಕತೆ ಬಹಳ ಮುಖ್ಯ

ನರೇಶ್ ಮಿ. ಪರ್ಫೆಕ್ಟ್ ಅಂತ ಹೇಗೆ ನಂಬಿದ್ರಿ, ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಉತ್ತರಿಸಿದ್ದಾರೆ. "ನರೇಶ್ ತಮ್ಮ ಬಗ್ಗೆ ಎಲ್ಲವನ್ನು ನನ್ನ ಬಳಿ ಹೇಳಿದ್ದಾರೆ. ನಾನೇನು ಕೇಳಲೇ ಇಲ್ಲ ಅವರ ಬಳಿ. ಅದನ್ನು ಕೇಳಿದರೆ ಚೆನ್ನಾಗಿ ಇರುವುದಿಲ್ಲ. ನಮ್ಮ ರಿಲೇಷನ್‌ಶಿಪ್ ಮುರಿಯಲು ಏನೇನೋ ಮಾಡಿದರು. ಆದರೆ ಆ ಬಗ್ಗೆ ನಾನೇನು ಕೇಳಲಿಲ್ಲ ಎಂದು ಪವಿತ್ರಾ ಹೇಳಿದ್ದಾರೆ. ನಮ್ಮಿಬ್ಬರ ನಡುವೆ ಪಾರದರ್ಶಕತೆ ಇದೆ. ನನ್ನ ಬಗ್ಗೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಆದರೆ ನಾನು ಸಂತೋಷವಾಗಿ ಇರುವುದು ಬೇಡ್ವಾ? ಎಂದು ನರೇಶ್ ಕೇಳಿದ್ದಾರೆ.

Actress Pavitra Lokesh interesting comments About her past relationships

ಎರಡು ಕೈ ಸೇರಿದರೆ ಚಪ್ಪಾಳೆ

ನಿಮ್ಮಿಬ್ಬರ ಮದುವೆ ಸಂಬಂಧಗಳು ಮುರಿದು ಬೀಳಲು ಕಾರಣ, ಅವರದ್ದು ಮಾತ್ರನಾ? ನಿಮ್ಮದೇನು ತಪ್ಪಿಲ್ಲವೇ ಎನ್ನುವ ಪ್ರಶ್ನೆಗೂ ಪವಿತ್ರಾ ಉತ್ತರ ಕೊಟ್ಟಿದ್ದಾರೆ. "ಎರಡು ಕೈ ಸೇರಿದರೆ ಚಪ್ಪಾಳೆ. ಅದು ಒಳ್ಳೆಯದೇ ಆಗಿರಲಿ. ಕೆಟ್ಟದೇ ಆಗಿರಲಿ. ನಾನು ಬೇರೆಯವರ ಮೇಲೆ ಆರೋಪ ಮಾಡಿರೋದನ್ನೂ ನೋಡಿದ್ದೀರಾ? ನಾವು ಆರೋಪ ಮಾಡಿಲ್ಲ. ನನ್ನ ಜೀವನದಲ್ಲಿ ನಡೆದ ಕೆಲ ಘಟನೆಗಳು ನನ್ನನ್ನು ಕುಗ್ಗಿಸಿದವು. ಇದರಲ್ಲಿ ಯಾರು ಭಾಗಿ ಆದ್ರು, ಏನೆಲ್ಲಾ ಆಯ್ತು ಅನ್ನೋದು ಬೇಡ. ನಾನು ಯಾರ ಮೇಲು ತಪ್ಪ ಹೊರಿಸಲಿಲ್ಲ. ಸರಿ, ತಪ್ಪು ಅನ್ನುವುದು ಅವರವರ ದೃಷ್ಟಿಕೋನದಲ್ಲಿ ಇರುತ್ತದೆ. ನಮ್ಮ ಬಗ್ಗೆ ಮತ್ತೊಬ್ಬರನ್ನು ಕೇಳಿದರೆ ಅವರು ನಮ್ಮ ಬಗ್ಗೆ ಏನೇನೋ ಹೇಳುತ್ತಾರೆ"

ಹೇಳಿಕೊಳ್ಳಲು ಆಗದ ಕಾರಣಗಳಿವೆ

"ನರೇಶ್ ಅವರನ್ನು ಭೇಟಿ ಆದಮೇಲೆ ನಾನು ಬೇರೆಯವರ ಬಳಿ ಹೋಗಿ ಅವರ ಬಗ್ಗೆ ಕೇಳಿದರೆ, ಅವರು ನೂರು ಹೇಳ್ತಾರೆ. ಆದರೆ ನಾನು ಯಾರೊಟ್ಟಿಗೂ ಚರ್ಚಿಸಿಲ್ಲ. ನಮ್ಮ ಮನಸ್ಸಿಗೆ ಅನ್ನಿಸಿದ್ದು ನಾನು ಮಾಡಬೇಕು. ಸಾಮಾನ್ಯವಾಗಿ ಗಂಡ- ಹೆಂಡತಿ ಯಾಕೆ ದೂರಾಗುತ್ತಾರೆ ಅಂದ್ರೆ, ಈಗೋ ಪ್ಲಾಬ್ಲಂ, ಫ್ಯಾಮಿಲಿ ಇಶ್ಯೂ, ಇಂತಹ ಸಾಕಷ್ಟು ಕಾರಣಕ್ಕೆ ದೂರಾಗುತ್ತಾರೆ. ಆದರೆ ನರೇಶ್ ಅವರ ವಿಚಾರ ನೋಡಿದರೆ ಅದು ಹಣಕ್ಕೆ ಸಂಬಂಧಿಸಿದ್ದು. ನನ್ನ ವಿಚಾರದಲ್ಲಿ ಹೇಳಬೇಕು ಅಂದ್ರೆ, ಹೇಳಿಕೊಳ್ಳಲು ಸಾಧ್ಯವಾಗದಂತಹ ಕಾರಣಗಳಿವೆ"

Actress Pavitra Lokesh interesting comments About her past relationships

ನನ್ನ, ನರೇಶ್ ಮಧ್ಯೆ ಜಗಳ ಆಗುತ್ತದೆ

"ನಾನು ಒಬ್ಬ ಮಹಿಳೆಯಾಗಿ ಆ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾನು ಮಾತನಾಡಲ್ಲ. ಇಂತಹ ಕಾರಣಗಳಿಂದ ನಾವು ಹೊರ ಬಂದಿದ್ದೇವೆ. ಬರೀ ತಪ್ಪು ತಿಳುವಳಿಕೆಗಳಿಂದ ನಾವು ದೂರಾಗಿಲ್ಲ. ನನ್ನ, ನರೇಶ್ ಮಧ್ಯೆ ಕೂಡ ಜಗಳ ಆಗುತ್ತದೆ. ಆದರೆ ನಂತರ ಮಾತನಾಡಿಕೊಂಡು ಬಗೆಹರಿಸಿಕೊಳ್ಳುತ್ತವೆ. ನನ್ನ ಹಳೆಯ ಸಂಬಂಧಗಳಲ್ಲಿ ಇದ್ದದ್ದು ಇಂತಹ ವಿಚಾರಗಳು ಅಲ್ಲ. ನನ್ನ ವಿಚಾರಗಳನ್ನಂತು ಹೇಳಿಕೊಳ್ಳಲು ಸಾಧ್ಯವಿಲ್ಲ. ಹೇಳುವುದು ಇಲ್ಲ. ನರೇಶ್ ವಿಚಾರದಲ್ಲಿ ಏನಾಗಿತ್ತು ಅನ್ನೋದು ನನಗೆ ಗೊತ್ತಿದೆ. ಹಾಗಾಗಿ ನಾವು ಹೊರ ಬಂದೆವು." ಎಂದು ಪವಿತ್ರಾ ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.

More from Filmibeat

English summary
Actress Pavitra Lokesh interesting comments About her past relationships. She got divorced from her first husband, later she was in a live-in-relationship with actor Suchendra Prasad. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X