ವ್ಯಾಲಂಟೈನ್ಸ್ ಡೇ ದಿನ ಪಬ್‌ನಲ್ಲಿ ಪ್ರಿಯಕರನ ತಲೆಗೆ ಹೊಡೆದ ನಟಿ ಪಾಯಲ್; ಅಷ್ಟಕ್ಕೂ ಏನಾಯ್ತು?

ಬಹುಭಾಷಾ ನಟಿ ಪಾಯಲ್ ರಜಪೂತ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಡಾಲಿ ಧನಂಜಯ್ ನಟನೆಯ 'ಹೆಡ್‌ಬುಷ್' ಚಿತ್ರದಲ್ಲಿ ರೇಷ್ಮಾ ಪಾತ್ರದಲ್ಲಿ ನಟಿಸಿದ್ದರು. ದೆಹಲಿ ಮೂಲದ ಪಾಯಲ್ ತಮ್ಮ ಬೋಲ್ಡ್ ಪಾತ್ರಗಳಿಂದ ಗಮನ ಸೆಳೆಯುತ್ತಾರೆ. ತೆಲುಗಿನ 'RX100' ಚಿತ್ರದಲ್ಲಿ ಆಕೆಯ ಹಾಟ್ ಅವತಾರವನ್ನು ಪಡ್ಡೆಹುಡುಗರು ಇನ್ನು ಮರೆತ್ತಿಲ್ಲ.

ಪಾಯಲ್ ರಜಪೂತ್‌ಗೆ ಒಳ್ಳೆ ಅವಕಾಶಗಳು ಮಾತ್ರ ಸಿಗಲೇಯಿಲ್ಲ. ಅದೇ ಕಾರಣಕ್ಕೆ ಆರಕ್ಕೇರದ ಮೂರಕ್ಕಿಳಿದ ನಟಿಯಾಗಿ ಉಳಿದುಬಿಟ್ಟಿದ್ದಾರೆ. 'ಕಾಂತಾರ' ಪ್ರೀಕ್ವೆಲ್‌ ಚಿತ್ರಕ್ಕೆ ಆಡಿಷನ್ ಕೊಡುವ ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಕೇಳಿ ಆಕೆ ಇತ್ತೀಚೆಗೆ ಸುದ್ದಿಯಾಗಿದ್ದರು. ಕಳೆದ ವರ್ಷ 'ಮಂಗಳವಾರಂ' ಎನ್ನುವ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು.

Actress Payal Rajput hits boyfriend Saurabhh Dhingra with bottle

'ಆರ್‌ಡಿಎಕ್ಸ್ ಲವ್', 'ವೆಂಕಿಮಾಮ', 'ಡಿಸ್ಕೋರಾಜ', 'ಜಿನ್ನಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದರು. ಅನಗನಗ ಓ ಅತಿಥಿ, 3 ರೋಜಸ್ ರೀತಿಯ ಓಟಿಟಿ ಸಿನಿಮಾ, ಸೀರಿಸ್‌ನಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಸೈಕಲಾಜಿಕಲ್ ಮಿಸ್ಟರಿ ಥ್ರಿಲ್ಲರ್ ಮಂಗಳವಾರಂ ಕೊಂಚ ಮಟ್ಟಿಗೆ ಸದ್ದು ಮಾಡಿತ್ತು. ಇದೀಗ 'ಗೋಲ್‌ಮಾಲ್', 'ಏಂಜಲ್', 'ಕಿರಾತಕ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಸೌರಭ್ ಧಿಂಗ್ರಾ ಎಂಬುವವರ ಜೊತೆ ನಟಿ ಪಾಯಲ್ ರಜಪೂತ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ವಿಚಾರವನ್ನು ಆಕೆ ಸಾಕಷ್ಟು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಪಾಯಲ್ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಆಕೆ ತನ್ನ ಪ್ರಿಯಕರ ಸೌರಭ್‌ ತಲೆಗೆ ಬಾಟಲಿನಿಂದ ಹೊಡೆದಿರುವುದನ್ನು ನೋಡಬಹುದು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಪಬ್‌ನಲ್ಲಿ ಪ್ರೇಮಿಗಳ ನಡುವೆ ಏನಾದರೂ ಗಲಾಟೆ ನಡೀತಾ? ಅಷ್ಟಕ್ಕೂ ಏನಾಯ್ತು ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಇನ್ನು ವಿಡಿಯೋ ಶೇರ್ ಮಾಡಿ " ನಾನು ಪ್ರೇಮಿಗಳ ದಿನವನ್ನು ಆಚರಿಸಿದ್ದು ಹೀಗೆ. ನೀವು ಹೇಗೆ ಆಚರಿಸಿದ್ದೀರಿ? ಎಂದು ಕಾಮೆಂಟ್ ಮಾಡಿ. ಹ್ಯಾಪಿ ವ್ಯಾಲಂಟೈನ್ಸ್ ಡೇ" ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಸಿನಿಮಾ ಚಿತ್ರೀಕರಣದ ವಿಡಿಯೋ. ಅಂದಹಾಗೆ ಪಾಯಲ್ ಹಾಗೂ ಸೌರಭ್ '3 ರೋಜಸ್' ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಈ ಸನ್ನಿವೇಶ ಬರುತ್ತದೆ.

ಚಿತ್ರೀಕರಣದ ವೇಳೆ ಡಮ್ಮಿ ಬಾಟಲ್‌ನಿಂದ ಈ ರೀತಿ ಸೌರಭ್ ತಲೆಗೆ ಪಾಯಲ್ ಹೊಡೆದಿದ್ದರು. ಅದರ ಮೇಕಿಂಗ್ ವಿಡಿಯೋವನ್ನು ಈಗ ಶೇರ್ ಮಾಡಿ ತಮಾಷೆಯಾಗಿ ವ್ಯಾಲಂಟೈನ್ಸ್ ಡೇ ಶುಭ ಕೋರಿದ್ದಾರೆ. ಒಟ್ನಲ್ಲಿ ವಿಡಿಯೋ ಅಂತು ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಚಿತ್ರ ವಿಚಿತ್ರ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕೆಲವರು ಅಯ್ಯೋ ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಇನ್ನೊಮ್ಮೆ ಹೊಡೆಯಬೇಕಿತ್ತು ಎಂದಿದ್ದಾರೆ. ಈ ಕಾಮೆಂಟ್ ಓದಿದ ಸೌರಭ್ "ತುಂಬಾ ಕೆಟ್ಟ ಐಡಿಯಾ" ಎಂದು ರಿಪ್ಲೇ ಮಾಡಿದ್ದಾರೆ. ಸದ್ಯ ದೆಹಲಿ ಬೆಡಗಿ ತಮ್ಮ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪಾಯಲ್ ರಜಪೂತ್ ಹಾಟ್ ಹಾಟ್ ಫೋಟೊಶೂಟ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.

More from Filmibeat

English summary
Actress Payal Rajput Valentine's Day post goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X