3 ಸಿನಿಮಾ ಸೋಲು: ಯಾಕೋ ಪೂಜಾ ಹೆಗ್ಡೆ ಅದೃಷ್ಟವೇ ಸರಿ ಇಲ್ಲ ಎಂದ ನೆಟ್ಟಿಗರು
ಸೌತ್ ಚಿತ್ರರಂಗದಲ್ಲಿ ಸದ್ಯ ಟಾಪ್‌ನಲ್ಲಿ ಇರುವ ನಟಿಯರಲ್ಲಿ ನಟಿ ಪುಜಾ ಹೆಗ್ಡೆ ಕೂಡ ಒಬ್ಬರು. ಪೂಜಾ ಹೆಗ್ಡೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ಪೂಜಾ ಅಭಿನಯದ 3 ಚಿತ್ರಗಳು ಈಗಾಗಲೇ ತೆರೆಕಂಡಿದ್ದು, ಸೌತ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿತ್ತು.
ಇತ್ತೀಚೆಗೆ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್', 'ಬೀಸ್ಟ್' ಮತ್ತು 'ಆಚಾರ್ಯ' ಚಿತ್ರಗಳು ತೆರೆಕಂಡಿವೆ. 2022ರಲ್ಲಿ ತೆರೆಕಂಡ ಈ ಮೂರು ಬಿಗ್ ಚಿತ್ರಗಳಿಗೆ ನಟಿ ಪೂಜಾ ಹೆಗ್ಡೆ ನಾಯಕಿ. ದೊಡ್ಡ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಪೂಜಾಗಿದೆ. ಆದರೆ ಈ 3 ಚಿತ್ರಗಳು ಹಿಟ್ ಲಿಸ್ಟ್ ಸೇರುವಲ್ಲಿ ಸೋತಿವೆ.
ಸಿನಿಮಾ ಸೋಲು, ಗೆಲುವು ಎನ್ನುವುದು ಯಾವುದೋ ಒಂದು ಪಾತ್ರದ ಮೇಲೆ ನಿಂತಿರುವುದಿಲ್ಲ. ಆದರೆ, ಈಗ ಈ ಚಿತ್ರಗಳ ಸೋಲಿಗೆ ಪೂಜಾ ಹೆಗ್ಡೆನೇ ಕಾರಣ. ಈ ಸೋಲಿಗೆ ಪೂಜಾ ಹೆಗ್ಡೆನೇ ಕಾರಣ ಎಂದು ಟ್ರೋಲ್ ಮಾಡಲಾಗುತ್ತಿದೆ.

ನಟನೆ ಆರಂಭದಲ್ಲೂ ಪೂಜಾಗೆ ಸೋಲು!
ತಮಿಳಿನ 'ಮಾಸ್ಕ್' ಚಿತ್ರದ ಮೂಲಕ ಪೂಜಾ ಹೆಗ್ಡೆ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಪೂಜಾ ಹೆಗ್ಡೆ ತಮ್ಮ ವೃತ್ತಿಜೀವನದ ಆರಂಭದಲ್ಲಿಯೂ ಹಲವು ಚಿತ್ರಗಳ ಮೂಲಕ ಸೋಲು ಕಂಡಿದ್ದಾರೆ. ತೆಲುಗಿನ 'ಒಕಾ ಲೈಲಾ ಕೋಸಂ', 'ಮುಕುಂದ' ಮತ್ತು ಹಿಂದಿಯಲ್ಲಿ 'ಮೊಹೆಂಜೊ ದಾರೋ' ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿವೆ. ಇದರಿಂದ ಪೂಜಾಗೆ ಅವಕಾಶಗಳು ಕಡಿಮೆ ಆದವು. ಬಳಿಕ ಕೆಲವು ವರ್ಷಗಳ ನಂತರ 'ಡಿಜೆ', 'ಅರವಿಂದ ಸಮೇತ' 'ಮಹರ್ಷಿ', 'ಅಲ ವೈಕುಂಠಪುರಮುಲೋ' ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ಬಳಿಕ ಪೂಜಾ ಟಾಪ್ ನಟಿಯರಲ್ಲಿ ಒಬ್ಬರಾದರು.

ಪೂಜಾ ಹೆಗ್ಡೆಗೆ ಸಾಲು, ಸಾಲು ಸೋಲು!
ಪೂಜಾ ಹೆಗ್ಡೆ ಚಿತ್ರಗಳು ಹಿಟ್ ಪಟ್ಟಿ ಸೇರುತ್ತಲೆ ಆಕೆಯ ಸಂಭಾವನೆ ಕೂಡ ಹೆಚ್ಚಾಯಿತು. ಪೂಜಾಗೆ ಡಿಮ್ಯಾಂಡ್ ಹೆಚ್ಚಾದ ಕಾರಣ ಸಂಭಾವನೆಯೂ ಹೆಚ್ಚಾಯಿತು. ಆದರೆ ಅದ್ಯಾಕೋ ಇತ್ತೀಚೆಗೆ ಪೂಜಾ ಲಕ್ ಬದಲಾದಂತೆ ಇದೆ. ಈ ವರ್ಷ ತೆರೆಕಂಡ 'ರಾಧೆಶ್ಯಾಮ್', 'ಬೀಸ್ಟ್', 'ಆಚಾರ್ಯ' ಚಿತ್ರಗಳು ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ನಿರಾಸೆ ಮೂಡಿಸಿವೆ.

ಬಿಗ್ ಚಿತ್ರಗಳ ಸೋಲು, ಪೂಜಾ ಹೆಗ್ಡೆ ಟ್ರೋಲ್!
'ರಾಧೆ ಶ್ಯಾಮ್', 'ಬೀಸ್ಟ್' ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ನಿರ್ಮಾಪಕರಿಗೆ ಈ ಚಿತ್ರಗಳಿಂದ ಅಪಾರ ನಷ್ಟ ಉಂಟಾಗಿದೆ. ಈಗ ಪೂಜಾ ಹೆಗ್ಡೆ ಅಭಿನಯದ 'ಆಚಾರ್ಯ' ಚಿತ್ರದ ಕೂಡ ಫ್ಲಾಪ್ ಲಿಸ್ಟ್ ಸೇರಿದೆ. ಈ ಮೂರು ಚಿತ್ರಗಳಲ್ಲಿ ಇರುವ ಸಾಮಾನ್ಯ ಅಂಶ ಅಂದರೆ ಅದು ನಟಿ ಪೂಜಾ ಹೆಗ್ಡೆ. ಹಾಗಾಗಿ ಪೂಜಾ ಹೆಗ್ಡೆ ಅದೃಷ್ಟವೇ ಚಿತ್ರಗಳ ಸೋಲಿಗೆ ಕಾರಣ ಎಂದು ಟ್ರೋಲ್ ಮಾಡಲಾಗುತ್ತಿದೆ.

ಪೂಜಾ ಹೆಗ್ಡೆ ಪಾತ್ರಕ್ಕಿಲ್ಲ ಪ್ರಾಮುಖ್ಯತೆ ಕಡಿಮೆ
'ಆಚಾರ್ಯ' ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಪಾತ್ರಕ್ಕೆ ಅಷ್ಟೇನು ಪ್ರಾಮುಖ್ಯತೆ ಇಲ್ಲ. ನೀಲಾಂಬರಿ ಪಾತ್ರದಲ್ಲಿ ಹಾಗೆ ಬಂದು ಹೀಗೆ ಹೋಗಿ ಬಿಡುತ್ತಾರೆ. ಈ ಚಿತ್ರಗಳನ್ನು ಬಿಟ್ಟರೆ ಮುಂದೆ ಮಹೇಶ್ ಬಾಬು ಜೊತೆಗೆ ಪೂಜಾ ಹೆಗ್ಡೆ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಮ್ ನಿರ್ದೇಶನವಿದ್ದು, ಪೂಜಾ ಹೆಗ್ಡೆ ಮತ್ತೆ ಯಶಸ್ಸಿನ ಟ್ರ್ಯಾಕ್‌ಗೆ ಮರಳುತ್ತಾರಾ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











