ಪೂಜಾ ಹೆಗ್ಡೆ ತಿರಸ್ಕರಿಸಿದ ಸಿನಿಮಾಗಳು ಹಿಟ್ ಕಂಡಿದ್ದೇ ಹೆಚ್ಚು!

ಸೌತ್​ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಪೂಜಾ ಹೆಗ್ಡೆ ಮುಂಚೂಣಿಯಲ್ಲಿ ಇದ್ದಾರೆ. ಸದ್ಯ ಯಾವುದೇ ಸಿನಿಮಾ ಅದರೂ, ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಹೆಸರುಗಳೇ ಹೆಚ್ಚಾಗಿ ಕೇಳಿ ಬರುತ್ತವೆ. ಯಾವ ಸ್ಟಾರ್ ನಟನ ಸಿನಿಮಾ ಲಾಂಚ್ ಆದರೂ ಕೂಡ ಇದಕ್ಕೆ, ಪೂಜಾ ಮತ್ತು ರಶ್ಮಿಕಾ ಹೆಸರಿನ ನಡುವೆ ಸ್ಪರ್ಧೆ ಇರುತ್ತದೆ.

ಪೂಜಾ ಹೆಗ್ಡೆ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ದೊಡ್ಡ ಸ್ಟಾರ್​ ನಟರುಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಪೂಜಾ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ. ಮಹೇಶ್ ಬಾಬು ಜೊತೆಗೆ ಈ ಹಿಂದೆಯೂ ನಟಿಸಿದ್ದರು ಪೂಜಾ ಹೆಗ್ಡೆ. ಈಗ ಮತ್ತೊಮ್ಮೆ ಮಹೇಶ್ ಬಾಬು ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಕೆಲವು ಬ್ಯಾಕ್ ಬ್ಯಾಕ್ ಸೋಲು ಕಂಡ ನಟಿ ಪೂಜಾ ಹೆಗ್ಡೆ, ಒಂದಷ್ಟು ಹಿಟ್ ಸಿನಿಮಾಗಳನ್ನು ಕೂಡ ಕೈ ಬಿಟ್ಟಿದ್ದಾರೆ. ಫ್ಲಾಪ್ ಸಿನಿಮಾಗಳ ಬದಲು ಆ ಚಿತ್ರಗಳಿಗೆ ಪೂಜಾ ಡೇಟ್ ಕೊಡ ಬಹುದಿತ್ತು ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಹುಟ್ಟಿಕೊಂಡಿದೆ. ಹಾಗಿದ್ದರೆ ಪೂಜಾ ತಿರಸ್ಕರಿಸಿದ ಆ ಸಿನಿಮಾಗಳು ಯಾವುದು ಎನ್ನುವುದನ್ನು ಮುಂದೆ ಓದಿ..

'ಇಸ್ಮಾರ್ಟ್ ಶಂಕರ್' ತಿರಸ್ಕರಿಸಿದ್ದ ಪೂಜಾ!

'ಇಸ್ಮಾರ್ಟ್ ಶಂಕರ್' ತಿರಸ್ಕರಿಸಿದ್ದ ಪೂಜಾ!

ಪೂಜಾ ಹೆಗ್ಡೆ ತಿರಸ್ಕರಿಸಿದ ಸಿನಿಮಾಗಳ ಲಿಸ್ಟ್‌ನಲ್ಲಿ 'ಇಸ್ಮಾರ್ಟ್ ಶಂಕರ್' ಸಿನಿಮಾ ಕೂಡ ಒಂದು. 2019ರಲ್ಲಿ ಬಂದ ಈ ಚಿತ್ರದಲ್ಲಿ ನಟ ರಾಮ್ ಪೋತಿನೇನಿ ನಟಿಸಿದ್ದಾರೆ. ಕನ್ನಡತಿ ನಭಾ ನಟೇಶ್ ಈ ಚಿತ್ರದ ಮೂಲಕ ಸದ್ದು ಮಾಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಬಂದ ಈ ಚಿತ್ರದ ಹಿಟ್ ಲಿಸ್ಟ್ ಸೇರಿತು. ಇನ್ನು ಕಳೆದ ವರ್ಷದ 'ಅಲ್ಲುಡು ಅದುರ್ಸ್' ಚಿತ್ರವನ್ನು ಕೂಡ ಪೂಜಾ ಕೈ ಬಿಟ್ಟಿದ್ದರು.

'ಶಾಕುಂತಲಂ' ತಿರಸ್ಕರಿಸಿದ ಪೂಜಾ ಹೆಗ್ಡೆ!

'ಶಾಕುಂತಲಂ' ತಿರಸ್ಕರಿಸಿದ ಪೂಜಾ ಹೆಗ್ಡೆ!

ನಟಿ ಸಮಂತಾ ಮುಂಬರುವ ಸಿನಿಮಾಗಳಲ್ಲಿ, ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಶಾಕುಂತಲಂ'. ಈ ಚಿತ್ರಕ್ಕೆ ಸಮಂತಾಗೂ ಮೊದಲು ನಟಿ ಪೂಜಾ ಹೆಗ್ಡೆ ಆಯ್ಕೆ ಆಗಿದ್ದರು. ಆದರೆ ಪೂಜಾ ಹೆಗ್ಡೆ ಕಾರಣಾಂತರಗಳಿಂದ ಈ ಚಿತ್ರವನ್ನು ಕೈ ಬಿಟ್ಟಿದ್ದು, ಈಗ ಸಮಂತಾ ನಟಿಸಿದ್ದಾರೆ.ಈ ಚಿತ್ರದ ಫಸ್ಟ್ ಲುಕ್ ವೈರಲ್ ಆಗಿತ್ತು. ಇನ್ನು ಈ ಸಿನಿಮಾದ ರಿಲೀಸ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಸಿನಿಮಾ ರಿಜೆಕ್ಟ್!

ಅಮಿತಾಬ್ ಬಚ್ಚನ್ ಸಿನಿಮಾ ರಿಜೆಕ್ಟ್!

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಒಮ್ಮೆಯಾದರೂ ನಟಿಸಲು ಅವಕಾಶ ಸಿಕ್ಕರೆ ಸಾಕು, ಎಂದು ಹಲವಾರು ಕಲಾವಿದರು ಜಪಾ ಮಾಡುತ್ತಿರುತ್ತಾರೆ. ಆದರೆ ನಟಿ ಪೂಜಾ ಹೆಗ್ಡೆ ಮಾತ್ರ ಅಮಿತಾಬ್ ಜೊತೆಗೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕರೂ ಬೇಡ ಎಂದಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅಭಿನಯಿಸಿರುವ 'ಗುಡ್​ ಬೈ' ಚಿತ್ರಕ್ಕೆ ಪೂಜಾ ಆಯ್ಕೆ ಆದರೂ ಬೇರೊಂದು ಸಿನಿಮಾಗಾಗಿ 'ಗುಡ್​ ಬೈ' ಹೇಳಿದ್ದರಂತೆ.

ಪವನ್ ಕಲ್ಯಾಣ್ 2 ಸಿನಿಮಾ ರಿಜೆಕ್ಟ್!

ಪವನ್ ಕಲ್ಯಾಣ್ 2 ಸಿನಿಮಾ ರಿಜೆಕ್ಟ್!

ಇನ್ನು ತೆಲುಗಿನ ಸ್ಟಾರ್ ನಟರ ಸಿನಿಮಾ ಕೂಡ ಪೂಜಾ ತಿರಸ್ಕಾರ ಮಾಡಿದ್ದಾರೆ. ನಟ ಪವನ್ ಕಲ್ಯಾಣ್ ಜೊತೆಗೆ ನಟಿಸಲು 2 ಬಾರಿ ತಿರಸ್ಕರಿಸಿದ್ದಾರೆ. ಮೊದಲು 'ವಕೀಲ್ ಸಾಬ್' ಚಿತ್ರವನ್ನು ಪೂಜಾ ತಿರಸ್ಕರಿಸಿದ್ದರು. ಆ ಸಿನಿಮಾ ಹಿಟ್ ಆಯ್ತು. ನಂತರ 'ಹರಿ ಹರ ವೀರ ಮಲ್ಲು' ಸಿನಿಮಾದಲ್ಲಿ ನಟಿಸಲು ತಿರಸ್ಕರಿಸಿದ್ದಾರೆ. ಈ ಮೂಲಕ ಪವನ್ ಕಲ್ಯಾನ್ ಎರಡು ಸಿನಿಮಾಗಳನ್ನು ಪೂಜಾ ಹೆಗ್ಡೆ ತಿರಸ್ಕರಿಸಿದಂತಾಗಿದೆ.

ಸಾಲು ಸಾಲು ಸೋಲುಂಡ ಪೂಜಾ ಹೆಗ್ಡೆ!

ಸಾಲು ಸಾಲು ಸೋಲುಂಡ ಪೂಜಾ ಹೆಗ್ಡೆ!

ಈ ಚಿತ್ರಗಳನ್ನು ಕೈ ಬಿಟ್ಟು ಪೂಜಾ ಹೆಗ್ಡೆ ಆಯ್ಕೆ ಮಾಡಿಕೊಂಡ ಸಿನಿಮಾಗಳು ಕೂಡ ಆಕೆಗೆ ಕೈ ಕೊಟ್ಟಿವೆ. 'ಬೀಸ್ಟ್', 'ಆಚಾರ್ಯ', 'ರಾಧೆ ಶ್ಯಾಮ್' ಸಿನಿಮಾಗಳು ಸೋಲುಂಡಿವೆ. ಹಾಗಾಗಿ ಸದ್ಯ ಪೂಜಾ ಹೆಗ್ಡೆ ತಮ್ಮ ಮತ್ತೊಂದು ಬಿಗ್ ಸಕ್ಸಸ್‌ಗೆ ಕಾಯುತ್ತಿದ್ದಾರೆ. ಸದ್ಯ ನಟ ಮಹೇಶ್ ಬಾಬು ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಮತ್ತೆ ಪೂಜಾಗೆ ಅದೃಷ್ಟ ತಂದು ಕೊಡುವ ಸಿನಿಮಾ ಯಾವುದೆಂದು ನೋಡಬೇಕಿದೆ.

More from Filmibeat

English summary
Actress Pooja Hegde Rejected Movie List Is Here, Pooja Hegde Miss Many Hits ,Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X