ಯೋಗ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಪೂಜಾ ಹೆಗಡೆ: ಅಭಿಮಾನಿಗಳು ಫಿದಾ

By ಫಿಲ್ಮ್ ಡೆಸ್ಕ್

ನಟಿ ಪೂಜಾ ಹೆಗಡೆ ದಕ್ಷಿಣ ಭಾರತೀಯ ಸಿನಿಮಾ ರಂಗ ಮತ್ತು ಬಾಲಿವುಡ್ ಎರಡೂ ಕಡೆ ಬ್ಯುಸಿ ಇರುವ ನಟಿ. ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಯಶಸ್ವಿ ಸಿನಿಮಾಗಳನ್ನು ನೀಡುತ್ತಿರುವ ಪೂಜಾ ಹೆಗಡೆ, ಸದ್ಯ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Recommended Video

Rachita you look fabulous : Rishi | Filmibeat kannada

ಸಾಲು ಸಾಲು ಸಿನಿಮಾಗಳ ಜೊತೆಗೆ ಪೂಜಾ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ಪೋಸ್ಟ್ ಗಳನ್ನು ಮಾಡುತ್ತಿರುವ ನಟಿ ಇದೀಗ ಯೋಗ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪೂಜಾ ಯೋಗಾಭ್ಯಾಸಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಂದೆ ಓದಿ...

 ಪೂಜಾ ಹೆಗಡೆ ಯೋಗ ಅಭ್ಯಾಸ

ಪೂಜಾ ಹೆಗಡೆ ಯೋಗ ಅಭ್ಯಾಸ

ನಟಿಮಣಿಯರು ಅಂದ್ಮೇಲೆ ವರ್ಕೌಟ್, ಯೋಗ ಅಂತ ತಲೆಕೆಡಿಸಿಕೊಳ್ಳುವುದು ಹೆಚ್ಚು. ಬಾಲಿವುಡ್ ನಲ್ಲಿ ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್ ಸೇರಿದಂತೆ ಅನೇಕ ನಟಿಯರು ಯೋಗ ಮಾಡುತ್ತಿರುವ ವಿಡಿಯೋಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆ ಫಿಟ್ ನೆಸ್ ಕಡೆ ಹೆಚ್ಚು ಗಮನ ವಹಿಸುವ ನಟಿಯರಲ್ಲಿ ಪೂಜಾ ಹೆಗಡೆ ಕೂಡ ಒಬ್ಬರು. ಜಿಮ್ ಜೊತೆಗೆ ಯೋಗ ಕೂಡ ಮಾಡುವ ಪೂಜಾ ಫಿಟ್ ಆಗಿದ್ದಾರೆ.

 ಪೂಜಾ ಹೆಗಡೆಗೆ ಅಭಿಮಾನಿಗಳ ಮೆಚ್ಚುಗೆ

ಪೂಜಾ ಹೆಗಡೆಗೆ ಅಭಿಮಾನಿಗಳ ಮೆಚ್ಚುಗೆ

ಪೂಜಾ ಹೆಗಡೆ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಇದೊಂದೇ ವಿಡಿಯೋ ಅಲ್ಲ, ಈ ಹಿಂದೆಯೂ ಸಾಕಷ್ಟು ವಿಡಿಯೋಗಳನ್ನು ಪೂಜಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪೂಜಾ ಯೋಗ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತಿರುತ್ತಾರೆ.

 ಅಲ್ಲು ಅರ್ಜುನ್ ಜೊತೆ ನಟಿಸಿದ್ದ ಪೂಜಾ

ಅಲ್ಲು ಅರ್ಜುನ್ ಜೊತೆ ನಟಿಸಿದ್ದ ಪೂಜಾ

ಪೂಜಾ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಟಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ. ಅಲ್ಲು ಅರ್ಜುನ್ ಮತ್ತು ಪೂಜಾ ಕೆಮಿಸ್ಟ್ರಿಗೆ ಅಭಿಮಾನಿಗಳು ಮನಸೋತಿದ್ದಾರೆ. ಈ ಸಿನಿಮಾ ಪೂಜಾ ಸಿನಿ ಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

 ಪೂಜಾ ಬಳಿ ಇರುವ ಸಿನಿಮಾಗಳು

ಪೂಜಾ ಬಳಿ ಇರುವ ಸಿನಿಮಾಗಳು

ತೆಲುಗಿನಲ್ಲಿ ಪ್ರಭಾಸ್ ಜೊತೆ ರಾಧೆ ಶ್ಯಾಮ ಸಿನಿಮಾ ಜೊತೆಗೆ ಅಖಿಲ್ ಅಕ್ಕಿನೇನಿ ಅಭಿನಯದ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿಯೂ ಪೂಜಾ ನಟಿಸುತ್ತಿದ್ದಾರೆ. ಇನ್ನು ಟಾಲಿವುಡ್ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಬ್ಯುಸಿಯಾಗಿದ್ದಾರೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ಪೂಜಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಸಲ್ಲು ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವ ಪೂಜಾ ಸಖತ್ ಎಕ್ಸೈಟ್ ಆಗಿದ್ದಾರೆ.

More from Filmibeat

English summary
Actress Pooja Hegde shares Yoga video. She leaves fans awe of her Yoga pose.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X