ನಟಿ ಪೂಜಾ ಹೆಗ್ಡೆಗೆ ಬೆದರಿಕೆ: ಅಳಲು ತೋಡಿಕೊಂಡ ನಟಿ!

ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು 'ಆಚಾರ್ಯ' ಸಿನಿಮಾದ ಫ್ಲಾಪ್‌ನಿಂದಾಗಿ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಟಿ ಪೂಜಾ ಹೆಗ್ಡೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳಿಂದ ಸುದ್ದಿ ಆಗುತ್ತಿರುತ್ತಾರೆ.

ಪೂಜಾ ಹೆಗ್ಡೆ ಸಾಕಷ್ಟು ಸಿನಿಮಾಗಳನ್ನು ಕೈಯಲ್ಲಿ ಇಟ್ಟು ಕೊಂಡಿದ್ದಾರೆ. ಸದ್ಯ ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ನಾಯಕಿ ಆಗಿ ಅಯ್ಕೆ ಆಗಿದ್ದು, ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಇದರ ಜೊತೆಗೆ ನಟಿ ಪೂಜಾ ಹೆಗ್ಡೆ ಸದ್ಯ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ.

ಈಗ ಪೂಜಾ ಹೆಗ್ಡೆ ಗಂಭೀರ ವಿಚಾರ ಒಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿದ್ದಾರೆ. ತಮಗೆ ಆದ ಕಹಿ ಅನುಭವನನ್ನು ಪೂಜಾ ಹೆಗ್ಡೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದು ಏನು ಎನ್ನುವುದನ್ನು ಮುಂದೆ ಓದಿ...

ಪೂಜಾ ಹೆಗ್ಡೆ ಕಹಿ ಅನುಭವ!

ಪೂಜಾ ಹೆಗ್ಡೆ ಕಹಿ ಅನುಭವ!

ನಟಿ ಪೂಜಾ ಹೆಗ್ಡೆ ವಿಮಾನದಲ್ಲಿ ಆದ ಕಹಿ ಅನುಭವನ್ನು ಹಂಚಿಕೊಂಡಿದ್ದಾರೆ. ಮುಂಬೈನಿಂದ ಹೊರಟ ಪೂಜಾ ಹೆಗ್ಡೆಗೆ ವಿಮಾನದಲ್ಲಿ ಅತ್ಯಂತ ಬೇಸರವಾಗುವ ಸಂಗತಿ ನಡೆದಿದೆ. ಈ ವಿಚಾರವನ್ನು ತಮ್ಮ ಪೋಸ್ಟ್ ಮೂಲಕ ಹಂಚಿಕೊಂಡು ಘಟನೆಯನ್ನು ವಿವರಿಸಿದ್ದಾರೆ ನಟಿ ಪೂಜಾ ಹೆಗ್ಡೆ. ಇಂಡಿಗೋ ವಿಮಾನದ ಸಿಬ್ಬಂದಿಯಿಂದ ಬೆದರಿಕೆ ಹಾಕಲಾಯಿತು ಎಂದು ನಮೂದಿಸಿದ್ದಾರೆ.

ಪೂಜಾ ಹೆಗ್ಡೆ ಟ್ವೀಟ್!

ನಟಿ ಪೂಜಾ ಹೆಗ್ಡೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡ ಪೋಸ್ಟ್ ಹೀಗಿದೆ. "ಇಂಡಿಗೊ ಸಿಬ್ಬಂದಿಯ ಒರಟು ನಡೆಯ ಬಗ್ಗೆ ಬಹಳ ಬೇಸರವಾಗಿದೆ. ವಿಪುಲ್ ನಕಾಶೆ ಎಂಬ ಹೆಸರಿನ ಸಿಬ್ಬಂದಿ ಇಂದು ಮುಂಬೈನಿಂದ ಹೊರಟ ನಮ್ಮ ಜೊತೆ ವಿಮಾನದಲ್ಲಿ ದುರಹಂಕಾರದಿಂದ ನಡೆದುಕೊಂಡರು. ಯಾವುದೇ ಕಾರಣವಿಲ್ಲದೆ ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಏರು ಧ್ವನಿಯಲ್ಲಿ ಬೆದರಿಕೆಯನ್ನು ಹಾಕಿದ್ದಾರೆ. ಸಾಮಾನ್ಯವಾಗಿ ನಾನು ಈ ರೀತಿಯ ವಿಷಯಗಳ ಬಗ್ಗೆ ಟ್ವೀಟ್ ಮಾಡುವುದಿಲ್ಲ. ಆದರೆ ಇದು ನಿಜವಾಗಿಯೂ ಭಯಾನಕ." ಎಂದು ಬರೆದುಕೊಂಡಿದ್ದಾರೆ.

ಪೂಜಾಗೆ ಕ್ಷಮೆಯಾಚಿಸಿದ ಸಂಸ್ಥೆ!

ಪೂಜಾಗೆ ಕ್ಷಮೆಯಾಚಿಸಿದ ಸಂಸ್ಥೆ!

ನಟಿ ಪೂಜಾ ಹೆಗ್ಡೆ ಈ ರೀತಿ ಟ್ವೀಟ್ ಮಾಡುತ್ತಲೆ, ಇಂಡಿಗೋ ಸಂಸ್ಥೆ ಕಡೆಯಿಂದ ಮರು ಉತ್ತರ ಸಿಕ್ಕಿದೆ. ಪೂಜಾ ಬಳಿ ಇಂಡಿಗೋ ಸಂಸ್ಥೆ ಕ್ಷಮೆ ಕೇಳಿದೆ. "ಮಿಸ್.ಹೆಗ್ಡೆ, ನಿಮ್ಮ ಈ ಅನುಭವಕ್ಕಾಗಿ ಕ್ಷಮೆಯಾಚಿಸುತ್ತೇವೆ. ನಾವು ತಕ್ಷಣವೇ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತೇವೆ. ಆದ್ದರಿಂದ ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆಯೊಂದಿಗೆ ನಮಗೆ ಡಿಎಂ ಮಾಡಿ". ಎಂದು ಟ್ವಿಟ್ಟರ್‌ನಲ್ಲಿ ಇಂಡಿಗೋ ಸಂಸ್ಥೆ ರಿಪ್ಲೇ ಮಾಡಿದೆ.

ಟ್ರೋಲ್ ಆದ ಪೂಜಾ ಟ್ವೀಟ್!

ಟ್ರೋಲ್ ಆದ ಪೂಜಾ ಟ್ವೀಟ್!

ನಟಿ ಪೂಜಾ ಹೆಗ್ಡೆ ಟ್ವೀಟ್ ಟ್ರೋಲ್‌ಗೆ ತುತ್ತಾಗುತ್ತಾ ಇದೆ. ಸಿನಿಮಾ ತಾರೆಯರು ಚಿಕ್ಕ, ಚಿಕ್ಕ ವಿಚಾರಗಳಿಗೂ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ಸಿಬ್ಬಂದಿಗೆ ತೊಂದರೆ ಕೊಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಜೊತೆಗೆ ಇಂಡಿಗೋ ಟ್ವೀಟ್‌ನಲ್ಲಿ ಪೂಜಾ ಹೆಗ್ಡೆ ನಂಬರ್ ಕೇಳಿದಿದ್ದಕ್ಕೆ, ಹಲವರು ನಮಗೂ ಪೂಜಾ ಹೆಗ್ಡೆ ನಂಬರ್ ಬೇಕು. ದಯವಿಟ್ಟು 'ಶೇರ್ ಮಾಡಿ' ಎಂದು ಗೇಲಿ ಮಾಡುತ್ತಿದ್ದಾರೆ.

More from Filmibeat

English summary
Actress Pooja Hegde Threatened By IndiGo, She Tweeted About It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X