ಆ ಸ್ಟಾರ್ ನಿರ್ದೇಶಕ ನನ್ನ ಜೀವನ ಹಾಳು ಮಾಡಿದ: ನಟಿ ಪೂನಂ ಕೌರ್

ತೆಲುಗು ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಪೂನಂ ಕೌರ್ ಟ್ವಿಟ್ಟರ್‌ನಲ್ಲಿ ಬಾಂಬ್ ಒಂದನ್ನು ಎಸೆದಿದ್ದಾರೆ.

Recommended Video

ಶ್ರುತಿ ಹಾಸನ್ ಬೇಡಿಕೆ ಕೇಳಿ ಬೆಚ್ಚಿಬಿದ್ದ ನಿರ್ಮಾಪಕ | Shruthi Hassan

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಉದ್ಯಮದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಒಬ್ಬೊಬ್ಬರೇ ನಟ-ನಟಿಯರು ಬಾಯಿ ತೆರೆಯುತ್ತಿದ್ದು, ಇದೀಗ ನಟಿ ಪೂನಂ ಕೌರ್ ಸಹ ಮಾತನಾಡಿದ್ದು, ಒಬ್ಬ ನಿರ್ದೇಶಕನಿಂದ ನಾನು ಡಿಪ್ರೆಶನ್‌ ಗೆ ಗುರಿಯಾದೆ ಎಂದಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಪೂನಂ ಕೌರ್, ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕನೊಬ್ಬನಿಂದಾಗಿ ನನ್ನ ಜೀವನ ಹಾಳಾಯ್ತು. ನೆಮ್ಮದಿಯಾಗಿ ನಿದ್ದೆ ಮಾಡಿ ಮೂರು ವರ್ಷಗಳಾಗಿವೆ. ನಾನು ಡಿಪ್ರೆಶನ್‌ಗೆ ಗುರಿಯಾಗುತ್ತಿದ್ದೇನೆ ಆದರೆ ನನಗೆ ಸಾಯಲು ಇಷ್ಟವಿಲ್ಲ ಎಂದಿದ್ದಾರೆ ಪೂನಂ ಕೌರ್.

ಸುಶಾಂತ್‌ ನಂತೆ ಸಾಯಲು ಇಷ್ಟವಿಲ್ಲ: ಕೌರ್

ಸುಶಾಂತ್‌ ನಂತೆ ಸಾಯಲು ಇಷ್ಟವಿಲ್ಲ: ಕೌರ್

ನನಗೆ ಈ ನೋವು ಬಹಳ ದಿನಗಳಿಂದ ಕಾಡುತ್ತಿದೆ ಆದರೆ ನಾನು ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ ಸುಶಾಂತ್ ಸಿಂಗ್ ರಜಪೂತ್ ರೀತಿ ನನಗೆ ಸಾಯಲು ಇಷ್ಟವಿಲ್ಲ ಹಾಗಾಗಿ ಇಂದು ಮಾತನಾಡುತ್ತಿದ್ದೇನೆ. ನನಗೆ ಸುಶಾಂತ್‌ನಂತೆ ಸಾಯಲು ಇಷ್ಟವಿಲ್ಲ. ನನ್ನಲ್ಲಿರುವ ನೋವು ನನಗೆ ಈ ಟ್ವೀಟ್‌ ಮಾಡುವಂತೆ ಮಾಡಿದೆ ಎಂದಿದ್ದಾರೆ ಕೌರ್.

'ನನಗಾದ ಅನ್ಯಾಯ ತೆಲುಗು ಚಿತ್ರರಂಗದ ಎಲ್ಲರಿಗೂ ಗೊತ್ತು'

'ನನಗಾದ ಅನ್ಯಾಯ ತೆಲುಗು ಚಿತ್ರರಂಗದ ಎಲ್ಲರಿಗೂ ಗೊತ್ತು'

ನನಗೆ ಏನಾಯಿತು ಎಂಬುದರ ಬಗ್ಗೆ ತೆಲುಗು ಸಿನಿರಂಗದಲ್ಲಿ ಎಲ್ಲರಿಗೂ ಗೊತ್ತು ಆದರೆ ಯಾರೂ ಮಾತನಾಡುವುದಿಲ್ಲ. 2017 ರಲ್ಲಿ ಆ ನಿರ್ದೇಶಕನಿಂದ ನನಗೆ ತೊಂದರೆಯಾದಾಗ ನನ್ನ ಗೆಳತಿ ದುಬೈನಿಂದ ಬಂದು ನನ್ನನ್ನು ನೋಡಿಕೊಂಡಳು, ಆಕೆ ಆ ನಿರ್ದೇಶಕನ ಬಳಿ ಮೂರು-ನಾಲ್ಕು ಬಾರಿ ನನ್ನ ಪರವಾಗಿ ಮಾತನಾಡಿದಳು ಆದರೆ ಏನೂ ಪ್ರಯೋಜನವಿಲ್ಲ. ಆತನಿಂದ ನಾನು ಗಳಿಸಿದ್ದೆಲ್ಲವನ್ನೂ ಕಳೆದುಕೊಂಡೆ, ನನ್ನ ಸಿನಿಮಾಗಳು, ಪ್ರಾಜೆಕ್ಟ್‌ಗಳು ಎಲ್ಲವನ್ನೂ ಕಿತ್ತು ಕೊಂಡ ಅವನು ಎಂದು ಹೆಸರು ಹೇಳದೆ ಟ್ವೀಟ್ ಮಾಡಿದ್ದಾರೆ ನಟಿ.

ನನಗೆ ನ್ಯಾಯ ಬೇಕಾಗಿದೆ: ಪೂನಂ ಕೌರ್

ನನಗೆ ನ್ಯಾಯ ಬೇಕಾಗಿದೆ: ಪೂನಂ ಕೌರ್

'ನನಗೆ ಏನು ಅನ್ಯಾಯವಾಗಿದೆ ಎಂಬುದು ಇಡೀಯ ತೆಲುಗುಚಿತ್ರರಂಗಕ್ಕೆ ಗೊತ್ತು, ನನಗೆ ಈಗ ನ್ಯಾಯ ಬೇಕಾಗಿದೆ. ಬೇರೆಯವರ ತಪ್ಪಿನಿಂದಾಗಿ ನಾನೇಕೆ ನೋವುಪಡಬೇಕು. ನನಗೆ ಹಣ, ಸಿನಿಮಾಗಳು, ಹೆಸರು ಯಾವುದೂ ಬೇಡ. ನನಗೆ ಅನ್ಯಾಯ ಮಾಡಿದ ವ್ಯಕ್ತಿಯ ನಿಜಚಹರೆ ಬಯಲಾಗಬೇಕು. ಆತ ಮುಖವಾಡ ಧರಿಸಿ ಬದುಕುತ್ತಿದ್ದಾನೆ, ಆತನಿಂದ ಹಲವಾರು ಹೆಣ್ಣುಮಕ್ಕಳು ವೃತ್ತಿ ಕಳೆದುಕೊಂಡಿದ್ದಾರೆ ಎಂದಿದ್ದಾರೆ ನಟಿ.

ನಟಿಯರ ಸಂಘಕ್ಕೆ ಹೋದೆ ಆದರೆ ಸಹಾಯ ಸಿಗಲಿಲ್ಲ: ಕೌರ್

ನಟಿಯರ ಸಂಘಕ್ಕೆ ಹೋದೆ ಆದರೆ ಸಹಾಯ ಸಿಗಲಿಲ್ಲ: ಕೌರ್

ನನಗೆ ಸಮಸ್ಯೆ ಆದಾಗ ನಾನು ನಟಿಯರ ಸಂಘಕ್ಕೆ ಹೋಗಿ ದೂರು ನೀಡಿದೆ ನನಗೆ ಸಹಾಯ ಸಿಗಲಿಲ್ಲ. ಕೆಲವು ನಟಿಯರ ಬಳಿ ಹೋದೆ ಅವರೂ ಸಹಾಯ ಮಾಡಲಿಲ್ಲ. ಇಂದು 'ಬ್ಲ್ಯಾಕ್‌ಲೈವ್ಸ್‌ಮ್ಯಾಟರ್ಸ್' ಎಂದು ಟ್ವೀಟ್ ಮಾಡುತ್ತಿರುವ ಈ ನಟಿಯರು ತಮ್ಮದೇ ಉದ್ಯಮದ ಸಹನಟಿಗೆ ಅನ್ಯಾಯವಾದಾಗ ಏನೂ ಮಾತಾಡಲಿಲ್ಲ, ನನಗೆ ಯಾರಿಂದಲೂ ಸಹಾಯ ಸಿಗಲಿಲ್ಲ. ಆದರೆ ನಾನು ಹೋರಾಟ ನಿಲ್ಲಿಸುವುದಿಲ್ಲ' ಎಂದಿದ್ದಾರೆ ಕೌರ್.

ನಿರ್ದೇಶಕ ತ್ರಿವಿಕ್ರಮ್ ಇರಬಹುದೇ ಎಂಬ ಅನುಮಾನ?

ನಿರ್ದೇಶಕ ತ್ರಿವಿಕ್ರಮ್ ಇರಬಹುದೇ ಎಂಬ ಅನುಮಾನ?

ಕೌರ್ ಅವರು ತಮ್ಮ ಟ್ವೀಟ್‌ನಲ್ಲಿ ನಿರ್ದೇಶಕನನ್ನು ಗುರೂಜಿ ಎಂದು ಕರೆಯುತ್ತಾರೆ ಎಂದು ಬರೆದಿದ್ದಾರೆ. ಇದರ ಆಧಾರದ ಮೇಲೆ ತೆಲುಗಿನ ಆ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಇರಬಹುದು ಎಂದು ಟ್ವಿಟ್ಟರ್‌ನಲ್ಲಿ ಕೆಲವು ಹೇಳಿದ್ದಾರೆ. ಆದರೆ ನಟಿ ಕೌರ್ ಎಲ್ಲಿಯೂ ಆ ನಿರ್ದೇಶಕನ ಹೆಸರಾಗಲಿ ಅಥವಾ ಆತ ಏನು ಅನ್ಯಾಯ ಮಾಡಿದ ಎಂಬುದಾಗಲಿ ಹೇಳಿಲ್ಲ.

ಕನ್ನಡದಲ್ಲೂ ನಟಿಸಿರುವ ಪೂನಂ ಕೌರ್

ಕನ್ನಡದಲ್ಲೂ ನಟಿಸಿರುವ ಪೂನಂ ಕೌರ್

ನಟಿ ಪೂನಂ ಕೌರ್ 14 ವರ್ಷದಿಂದಲೂ ತೆಲುಗು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದ ಬಂಧು-ಬಳಗ ಎಂಬ ಸಿನಿಮಾದಲ್ಲಿ ಪೂನಂ ನಟಿಸಿದ್ದಾರೆ. ತೆಲುಗಿನ ಅಟ್ಯಾಕ್, ನಾಯಕಿ, ಶ್ರೀನಿವಾಸ ಕಲ್ಯಾಣಂ, ಆಡು ಮಗಾಡ್ರಾ ಬುಜ್ಜಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actress Poonam Kaur said a star director of Telugu film industry had spoiled her career and did injustice to her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X