"ಅರುಂಧತಿ'ಯಾಗಿ ನಾನು ನಟಿಸಬೇಕಿತ್ತು.. ಆದ್ರೆ ಅನುಷ್ಕಾಗೆ ಆ ಅದೃಷ್ಟ ಇತ್ತು.. ಆ ಕೊರಗು ಇನ್ನು ಇದೆ": ಪ್ರೇಮಾ

ತೆಲುಗಿನ 'ಅರುಂಧತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಗೊತ್ತೇಯಿದೆ. ಇದೇ ಚಿತ್ರ ನಟಿ ಅನುಷ್ಕಾ ಶೆಟ್ಟಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಮಮತಾ ಮೋಹನ್ ದಾಸ್ ಸೇರಿದಂತೆ ಹಲವರ ಈ ಚಿತ್ರಕ್ಕಾಗಿ ಕೇಳಿಬಂದಿತ್ತು. ಆದರೆ ಆ ಅದೃಷ್ಟ ಮಾತ್ರ ಕರಾವಳಿ ಚೆಲುವೆ ಪಾಲಾಗಿತ್ತು. ಇದೇ ವಿಚಾರದ ಬಗ್ಗೆ ನಟಿ ಪ್ರೇಮಾ ಮಾತನಾಡಿದ್ದಾರೆ.

ತೆಲುಗು ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನದ ಏಳುಬೀಳು, ಚಿತ್ರರಂಗದಲ್ಲಿ ಸಿಕ್ಕ ಒಳ್ಳೆ ಅವಕಾಶಗಳು, ಇಷ್ಟವಾದ ಪಾತ್ರಗಳು ಈಗ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಇದೇ ಸಂದರ್ಶನದಲ್ಲಿ 'ಅರುಂಧತಿ' ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಆಗ ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಡೇಟ್ಸ್ ಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಪ್ರೇಮಾ ಹೇಳಿದ್ದಾರೆ.

Actress Prema on Rejecting Arundhati, because of her work schedule

"ಹೌದು, 'ಅರುಂಧತಿ' ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಡೇಟ್ಸ್ ಇಲ್ಲದ ಕಾರಣಕ್ಕೆ ನನಗೆ ನಟಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಯಾವುದೋ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೆ. ಒಟ್ಟಿಗೆ ಹೆಚ್ಚು ಡೇಟ್ಸ್ ಕೇಳಿದ್ದರು. ಆದರೆ ಅಷ್ಟು ಸುದೀರ್ಘವಾದ ಡೇಟ್ಸ್ ಇಲ್ಲ ಸರ್ ಎಂದು ನಿರ್ದೇಶಕ ಕೋಡಿ ರಾಮಕೃಷ್ಣ ಅವರಿಗೆ ಹೇಳಿದ್ದೆ. ನಂತರ ಅವರು ಅನುಷ್ಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಂಡರು. ಆಕೆ ಕೂಡ ಮಂಗಳೂರಿನ ಹುಡುಗಿ" ಎಂದಿದ್ದಾರೆ.

'ಅರುಂಧತಿ' ಸಿನಿಮಾ ಹಿಟ್ ಆಗಿದ್ದು ನೋಡಿ ಅಯ್ಯೋ ಅಂತ ಅವಕಾಶ ಮಿಸ್ ಆಯ್ತು ಎನ್ನಿಸಿತ್ತಾ ಎನ್ನುವ ಪ್ರಶ್ನೆಗೆ "ಇಲ್ಲ, ಆ ತರ ಏನು ಅನ್ನಿಸಲಿಲ್ಲ. ನನಗೆ ಸಿಗುವ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆ. ಅನುಷ್ಕಾಗೆ ಆ ಅದೃಷ್ಟ ಇತ್ತು. ಆ ಸಿನಿಮಾ ಆಕೆಗೆ ಸಿಕ್ತು. ನಾನು ಕನ್ನಡ, ತೆಲುಗಿನಲ್ಲಿ ಸಾಕಷ್ಟು ಒಳ್ಳೆ ಸಿನಿಮಾಗಳನ್ನು ಮಾಡಿದ್ದೇನೆ. 'ನಮ್ಮೂರ ಮಂದಾರೆ ಹೂವೆ' ಸೇರಿದಂತೆ ಬಹುತೇಕ ಹಿಟ್ ಆಗಿದೆ. ನನಗೆ ಆ ತೃಪ್ತಿ ಇದೆ"

Actress Prema on Rejecting Arundhati, because of her work schedule

ಯಾವುದಾದರೂ ಸಿನಿಮಾ ನೋಡಿದಾಗ ಈ ಪಾತ್ರ ನಾನು ಮಾಡಬೇಕಿತ್ತು ಅನ್ನಿಸಿದ್ಯಾ? ಎನ್ನುವ ಪ್ರಶ್ನೆಗೆ "ಕ್ಷಣ ಕ್ಷಣಂ ಸಿನಿಮಾ ಬಹಳ ಇಷ್ಟ. 'ಜಗದೇಕ ವೀರುಡು ಅತಿಲೋಕ ಸುಂದರಿ' ಅದನ್ನಲ್ಲಾ ನೋಡಿದಾಗ ಆ ಸಿನಿಮಾದಲ್ಲಿ ನಟಿಸಬೇಕಿತ್ತು ಎನಿಸುತ್ತದೆ. ನಾನು ಶ್ರೀದೇವಿ ಅವರ ದೊಡ್ಡ ಅಭಿಮಾನಿ. ಈಗಲೂ ಆ ಸಿನಿಮಾಗಳನ್ನು ನೋಡಿದಾಗ ಅಯ್ಯೋ, ಇಂತಹ ಅವಕಾಶ ಸಿಗಲಿಲ್ಲವೇ ಎನಿಸಿದೆ."

"ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ ಜೊತೆಗೆಲ್ಲಾ ನಟಿಸದೇ ಇರಲು ಕಾರಣ ಅವಕಾಶಗಳು ಸಿಗಲಿಲ್ಲ. ನಾನು ಕನ್ನಡ, ತೆಲುಗು ಎರಡೂ ಭಾಷೆಯ ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಹಾಗಾಗಿ ಅಂತಹ ಅವಕಾಶಗಳು ಸಿಗಲಿಲ್ಲ, ಸಿಕ್ಕಾಗ ಡೇಟ್ಸ್ ಕಾರಣದಿಂದ ನಟಿಸೋಕೆ ಸಾಧ್ಯವಾಗಲಿಲ್ಲ. ಒಂದಿ ವೇಳೆ ಡೇಟ್ಸ್ ಇದ್ದಿದ್ದರೆ ಕೊಡುತ್ತಿದ್ದೆ. ಕನ್ನಡದಲ್ಲಿ ಶಿವಣ್ಣ, ವಿಷ್ಣು ಸರ್ ಜೊತೆ ನಟಿಸಿದ್ದನ್ನು ಮರೆಯುವುದಿಲ್ಲ. ಅವರಿಂದ ಸಾಕಷ್ಟು ಕಲಿತಿದ್ದೇನೆ" ಎಂದಿದ್ದಾರೆ.

Actress Prema on Rejecting Arundhati, because of her work schedule

2009ರಲ್ಲಿ ಬಿಡುಗಡೆಯಾಗಿದ್ದ ಹಾರರ್ ಫ್ಯಾಂಟಸಿ ಸಿನಿಮಾ 'ಅರುಂಧತಿ' ಸೂಪರ್ ಹಿಟ್ ಆಗಿತ್ತು. ಒಲ್ಲದ ಮನಸ್ಸಿನಿಂದಲೇ ಚಿತ್ರವನ್ನು ಒಪ್ಪಿಕೊಂಡಿದ್ದ ನಟಿ ಅನುಷ್ಕಾ ಶೆಟ್ಟಿ ಡಬಲ್ ರೋಲ್‌ನಲ್ಲಿ ಮಿಂಚಿದ್ದರು. ಕೋಡಿ ರಾಮಕೃಷ್ಣ ನಿರ್ದೇಶನ, ಮೇಕಿಂಗ್, ಗ್ರಾಫಿಕ್ಸ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದು ಸಿನಿಮಾ ಸೂಪರ್ ಹಿಟ್ ಆಗಿತ್ತು. ದಕ್ಷಣ ಭಾರತದಲ್ಲಿ 'ಅಮ್ಮೋರು' ನಂತರ ಆ ಮಟ್ಟಿಗೆ ಸಂಚಲನ ಸೃಷ್ಟಿಸಿದ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಇದು. ₹13 ಕೋಟಿ ಬಜೆಟ್ ಸಿನಿಮಾ ₹70 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದಿತ್ತು.

More from Filmibeat

English summary
Actress Prema on Rejecting Arundhati, because of her work schedule. Arundhati was one of the highest-grossing films in actress Anushka Shetty's career. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X