25 ವರ್ಷದ ನಂತರ ಆ 'ಘಟನೆ' ಬಗ್ಗೆ ಮಾತನಾಡಿದ 'ಪ್ರೇಮಾ' ; 'ದೇವಿ' ಸುತ್ತ ಮುತ್ತ..!

ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದವರು ನಿರ್ದೇಶಕ ಕೋಡಿ ರಾಮಕೃಷ್ಣ. ಒಂದೆರಡು ಸಿನಿಮಾಗಳು ದಾಟುವ ಹೊತ್ತಿಗೇ ಆಯಾಸಗೊಳ್ಳೋ ನಿರ್ದೇಶಕರ ನಡುವೆ ಕೋಡಿ ರಾಮಕೃಷ್ಣ ಹತ್ತಿರತ್ತಿರ ನೂರೈವತ್ತು ಸಿನೆಮಾಗಳನ್ನ ನಿರ್ದೇಶಿಸಿದ್ದರು. ಆ ಪೈಕಿ ದೇವಿ ಸಿನಿಮಾ ಕೂಡ ಒಂದು.

ಆ ಕಾಲಕ್ಕೆ ಹತ್ತು ಹಲವು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದ ದೇವಿಯಲ್ಲಿ, ನಮ್ಮ ಕನ್ನಡದ ಪ್ರೇಮಾ ಕೇಂದ್ರ ಬಿಂದುವಾಗಿದ್ದರು. ಇನ್ನೂ ಸದ್ಯಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ದೇವಿಶ್ರೀ ಪ್ರಸಾದ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಈ ಚಿತ್ರದ ಮೂಲಕವೇ. ಇಂಥ ದೇವಿ ಸಿನಿಮಾ ತೆರೆಗೆ ಬಂದು ಈಗ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನ ಪ್ರೇಮಾ ಅಲ್ಲಿನ ಮಾಧ್ಯಮದರ ಮುಂದೆ ಹಂಚಿಕೊಂಡಿದ್ದಾರೆ.

Actress Prema Shared Unknown Facts Of Devi

ಆ ಕಾಲದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡುವುದೇ ದೊಡ್ಡ ಸವಾಲಾಗಿತ್ತು. ಅಂಥಹದ್ದರಲ್ಲಿ ದೇವಿ ಐತಿಹಾಸಿಕ ದಾಖಲೆಯನ್ನ ಬರೆಯಿತು. ಇದಕ್ಕೆ ಕಾರಣ ಕೋಡಿ ರಾಮಕೃಷ್ಣ ಎಂದಿರುವ ಪ್ರೇಮಾ, ಇದೇ ವೇಳೆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

ಕಷ್ಟಪಟ್ಟು - ಇಷ್ಟಪಟ್ಟು ಚಿತ್ರದ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲಿ, ವ್ಯಕ್ತಿಯೋರ್ವರಿಗೆ ಹಾವು ಕಚ್ಚಿತ್ತು. ಅವರನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ ಎಂದು ಪ್ರೇಮಾ ಹೇಳಿದ್ದಾರೆ. ಈ ಘಟನೆಯಿಂದ ಎರಡು ದಿನದ ಚಿತ್ರೀಕರಣ ಸ್ಥಗಿತಗೊಂಡಿತ್ತು ಎಂದಿದ್ದಾರೆ.

ಇನ್ನೂ ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಸವಾಲಿನಿಂದ ಕೂಡಿತ್ತು ಎಂದಿರುವ ಪ್ರೇಮಾ, ಈ ಚಿತ್ರದಲ್ಲಿನ ಕೆಲ ಸನ್ನಿವೇಶಗಳಿಗೆ ಹತ್ತಿರ ಹತ್ತಿರ 50 ಟೇಕ್ ಗಳನ್ನ ತೆಗೆದುಕೊಂಡಿದ್ದು ಇದೆ ಎಂದಿದ್ದಾರೆ. ಇನ್ನೂ ದೇವಿಯ ಮಾತನಾಡುವ ಶೈಲಿ, ಹಾವ ಭಾವ ಇದೆಲ್ಲದಕ್ಕೂ ಕೋಡಿ ರಾಮಕೃಷ್ಣ ತುಂಬಾನೇ ಹೋಮ್ ವರ್ಕ್ ಮಾಡಿಕೊಂಡಿದ್ದರು ಎಂದು ನಿರ್ದೇಶಕ ಕೋಡಿ ರಾಮಕೃಷ್ಣ ಅವರನ್ನ ಹೊಗಳಿದ್ದಾರೆ ಪ್ರೇಮಾ.

Actress Prema Shared Unknown Facts Of Devi

ಇನ್ನೂ ಚಿತ್ರದ ಬಿಡುಗಡೆಯ ನಂತರ ಸಿಕ್ಕ ಪ್ರತಿಕ್ರಿಯೆಯಿಂದ, ನಾವೆಲ್ಲರೂ ಪುಳಕಿತರಾಗಿದ್ದೇವು ಎಂದಿರುವ ಪ್ರೇಮಾ, ನಮ್ಮ ಕಷ್ಟಗಳನ್ನ ಜನ ಇಷ್ಟಪಟ್ಟಾಗ ಕಲಾವಿದರಾಗಿ ನಮಗೆ ಸಿಗುವ ಆನಂದವೇ ಬೇರೆ ಎಂದಿದ್ದಾರೆ. ದೇವಿ ಚಿತ್ರದ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆ ಇದೆ ಅಂದಿದ್ದಾರೆ.

ಕೋಡಿ ರಾಮಕೃಷ್ಣ ಹಾಗೂ ಗ್ರಾಫಿಕ್ಸ್

ತಂತ್ರಜ್ಞಾನ ಬದಲಾದರೂ ಇವತ್ತು ಕೂಡ ಗ್ರಾಫಿಕ್ಸ್ ವಿಚಾರದಲ್ಲಿ ಅನೇಕ ನಿರ್ದೇಶಕರು ಹೆಣಗಾಡುತ್ತಾರೆ. ಕೋಟಿ ಹಣ ಖರ್ಚು ಮಾಡಿಯೂ, ಕಳಪೆ ಮಟ್ಟದ ಗ್ರಾಫಿಕ್ಸ್ ಗಳನ್ನ ಮಾಡಿ ಕೈತೊಳೆದುಕೊಳ್ತಾರೆ. ಆದರೆ ನೂರಾರು ಸಿನಿಮಾಗಳನ್ನು ಮಾಡುತ್ತಾ ಬಂದ ಕೋಡಿ ರಾಮಕೃಷ್ಣ ಆ ಕಾಲದಲ್ಲಿ ಜಗತ್ ಪ್ರಸಿದ್ದವಾಗಿದ್ದು ಗ್ರಾಫಿಕ್ಸ್ ಸಿನೆಮಾಗಳಿಂದನೇ. ಅಮ್ಮೋರು, ದೇವುಲು, ದೇವಿ, ದೇವಿ ಪುತ್ರುಡು, ಮಾ ಬಾಲಾಜಿ, ಆಂಜಿ, ಅರುಂಧತಿ, ನಾಗರಹಾವು, ಮುಂತಾದ ಚಿತ್ರಗಳು ಕೋಡಿ ರಾಮಕೃಷ್ಣ ಅವರನ್ನು ಖ್ಯಾತಿಯ ಶಿಖರವೇರುವಂತೆ ಮಾಡಿದ್ದವು. ಕೋಟಿಗಳ ಲೆಕ್ಕವಿಲ್ಲದ ಬಜೆಟ್‌ನ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಹೆಸರು ಮಾಡಿದ್ದರು ಕೋಡಿ ರಾಮಕೃಷ್ಣ. ಇಂಥಾ ದಿಗ್ಗಜ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದ ದೇವಿ ಚಿತ್ರಕ್ಕೆ 25 ವಸಂತಗಳು ತುಂಬಿವೆ.

More from Filmibeat

English summary
On the occasion of 25 years of block buster film Devi, Actress Prema Reveled shocking facts of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X